AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್ ಕ್ವೀನ್ ಆದ ಮಮಿತಾ ಬೈಜು; 919 ಕೋಟಿ ರೂಪಾಯಿ ಗಳಿಕೆ

ಸಾಲು ಸಾಲು ಹಿಟ್ ನೀಡುತ್ತಿರುವ ನಟಿ ಮಮಿತಾ ಬೈಜು ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮಗೆ ಸುಲಭವಾಗಿ ಯಾರ ಮೇಲೂ ಕ್ರಶ್ ಆಗುವುದಿಲ್ಲ ಎಂದು ಹೇಳಿದ್ದಾರೆ. 2026ರಲ್ಲಿ ಜಾಗತಿಕವಾಗಿ 919 ಕೋಟಿ ಗಳಿಸಿರುವ ಅವರು ಬಾಕ್ಸ್ ಆಫೀಸ್ ಕ್ವೀನ್ ಆಗಿ ಮೆರೆಯುತ್ತಿದ್ದು, ಉತ್ತಮ ಸಂಬಂಧದಲ್ಲಿ ಇರಲು ಬಯಸುವುದಾಗಿ ತಿಳಿಸಿದ್ದಾರೆ.

ಬಾಕ್ಸ್ ಆಫೀಸ್ ಕ್ವೀನ್ ಆದ ಮಮಿತಾ ಬೈಜು; 919 ಕೋಟಿ ರೂಪಾಯಿ ಗಳಿಕೆ
ಮಮಿತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 05, 2026 | 8:16 AM

Share

ಮುಖ್ಯಾಂಶಗಳು

  • ಜನರನ್ನು ಸುಲಭವಾಗಿ ಹತ್ತಿರ ಸೇರಿಸಿಕೊಳ್ಳಲ್ಲ
  • ಪ್ರೀತಿ ವಿಚಾರದಲ್ಲಿ ಮಮಿತಾ ಬೈಜು ಓಪನ್ ಮಾತು
  • ಬಾಕ್ಸ್ ಆಫೀಸ್‌ನಲ್ಲಿ 919 ಕೋಟಿ ಕಲೆಕ್ಷನ್

‘ಪ್ರೇಮಲು’ ಸಿನಿಮಾ ಖ್ಯಾತಿಯ ಮಮಿತಾ ಬೈಜು ಸದ್ಯ ದಕ್ಷಿಣ ಭಾರತದ ಅತಿ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಇವರು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡು ಮಾಡುತ್ತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ ಒಂದರ ಸಂದರ್ಶನದಲ್ಲಿ ಭಾಗವಹಿಸಿದ್ದ 25 ವರ್ಷದ ಮಮಿತಾ, ತಮ್ಮ ವೈಯಕ್ತಿಕ ಜೀವನ, ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಹಲವು ಆಸಕ್ತಿಕರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ತಮಗೆ ಸುಲಭವಾಗಿ ಯಾರ ಮೇಲೂ ಕ್ರಶ್ ಆಗುವುದಿಲ್ಲ ಎಂದು ಮಮಿತಾ ಹೇಳಿದ್ದಾರೆ. ಜನರನ್ನು ನೋಡಿದ ತಕ್ಷಣ ಪ್ರೀತಿ ಹುಟ್ಟುವುದು ಬಹಳ ಅಪರೂಪ. ಯಾರನ್ನಾದರೂ ಭೇಟಿಯಾದಾಗ ಅವರೊಡನೆ ಮಾತನಾಡಿದ ಮೇಲಷ್ಟೇ ಅವರ ವ್ಯಕ್ತಿತ್ವವನ್ನು ಅಳೆಯುತ್ತೇನೆ. ಜನರನ್ನು ತಮಗೆ ತೀರಾ ಹತ್ತಿರವಾಗಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜನರೊಂದಿಗೆ ಸುಲಭವಾಗಿ ಬೆರೆಯದಿದ್ದರೂ ತಮಗೂ ಒಂದು ಸುಂದರ ಸಂಬಂಧದಲ್ಲಿ ಇರಬೇಕೆಂಬ ಆಸೆ ಇದೆ ಎಂದಿದ್ದಾರೆ. ಈಗ ಇಲ್ಲದಿದ್ದರೆ ಇನ್ನೆಂದಿಗೂ ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ ಎಂಬ ಭಾವನೆ ತಮ್ಮಲ್ಲಿದೆ. ಪ್ರಸ್ತುತ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೂ, ಪ್ರೀತಿಯ ಹುಡುಕಾಟದಲ್ಲಿದ್ದೇನೆ ಎಂಬ ಸುಳಿವನ್ನು ಅವರು ಕೊಟ್ಟಿದ್ದಾರೆ.

2026ರ ವರ್ಷ ಮಮಿತಾ ಬೈಜು ಪಾಲಿಗೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಿದೆ. ಈ ವರ್ಷದಲ್ಲಿ ಅವರು ನಟಿಸಿದ ಸಿನಿಮಾಗಳು ಜಾಗತಿಕವಾಗಿ ಬರೋಬ್ಬರಿ 919 ಕೋಟಿ ರೂಪಾಯಿ ಗಳಿಸಿವೆ. ‘ಜನ ನಾಯಗನ್’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ನಂತಹ ಸೂಪರ್ ಹಿಟ್ ಸಿನಿಮಾಗಳು ಇವರ ಯಶಸ್ಸಿನ ಗ್ರಾಫ್ ಹೆಚ್ಚಿಸಿವೆ.

ಇದನ್ನೂ ಓದಿ: ಬಾಲಿವುಡ್​​ಗೆ ಕಾಲಿಡಲಿದ್ದಾರೆ ದಕ್ಷಿಣ ಭಾರತದ ಸೆನ್ಸೇಷನ್​​ ನಟಿ ಮಮಿತಾ ಬೈಜು

ಇತ್ತೀಚೆಗೆ ತೆರೆಕಂಡ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಚಿತ್ರವು ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಚಿತ್ರವು ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಸದ್ಯ ಇವರು ಧನುಷ್ ಮತ್ತು ಸೂರ್ಯ ಅವರಂತಹ ಸ್ಟಾರ್ ನಟರ ಜೊತೆ ಅಭಿನಯಿಸಿ ಬಾಕ್ಸ್ ಆಫೀಸ್ ಕ್ವೀನ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು