ಎ ಹರ್ಷ ಮೊದಲ ತೆಲುಗು ಸಿನಿಮಾದ ಪೋಸ್ಟರ್ ಬಿಡುಗಡೆ
A Harsha: ಭಜರಂಗಿ, ವೇದ, ವಜ್ರಕಾಯ ಅಂಥಹಾ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ಎ ಹರ್ಷ ತೆಲುಗು ಚಿತ್ರರಂಗಕ್ಕೆ ಹಾರಿದ್ದು ಅವರ ಮೊದಲ ತೆಲುಗು ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.
![ಎ ಹರ್ಷ ಮೊದಲ ತೆಲುಗು ಸಿನಿಮಾದ ಪೋಸ್ಟರ್ ಬಿಡುಗಡೆ](https://images.tv9kannada.com/wp-content/uploads/2023/06/Harsha-Bhima.jpg?w=1280)
ಕನ್ನಡದ ಹಲವು ನಟ-ನಟಿಯರು ಪರಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Sreeleela), ಶ್ರದ್ಧಾ ಶ್ರೀನಾಥ್, ಡಾಲಿ ಧನಂಜಯ್ (Daali Dhananjay), ನಟ ಕಿಶೋರ್ (Kishore) ಇನ್ನೂ ಹಲವು ಕನ್ನಡದ ನಟರು ವಿವಿಧ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಈಗ ಕನ್ನಡದ ನಿರ್ದೇಶಕರೊಬ್ಬರು ಪರಭಾಷೆಗೆ ಹಾರಿದ್ದಾರೆ. ಭಜರಂಗಿ, ಭಜರಂಗಿ 2, ವೇದ, ಗೆಳೆಯ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎ.ಹರ್ಷ ಇದೀಗ ಟಾಲಿವುಡ್ಗೆ ಹಾರಿದ್ದಾರೆ. ಅಲ್ಲಿನ ಸ್ಟಾರ್ ನಟರೊಬ್ಬರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.
ತೆಲುಗಿನ ಮ್ಯಾಚೋ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಎ.ಹರ್ಷ ಒಟ್ಟಿಗೆ ಕೆಲಸ ಮಾಡುತ್ತಿರುವ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ ಜನ್ಮದಿನದ ಪ್ರಯುಕ್ತ ಫಸ್ಟ್ ಹಾಗೂ ಟೈಟಲ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಸಿನಿಮಾಕ್ಕೆ ಭೀಮ ಎಂದು ಹೆಸರಿಡಲಾಗಿದ್ದು. ಭೀಮನಾಗಿ ಮ್ಯಾಚೋ ಸ್ಟಾರ್ ಗೋಪಿಚಂದ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ತೆಲುಗು ಚಿತ್ರರಂಗದಲ್ಲಿ ಇದು ಮೊದಲ ಸಿನಿಮಾ. ಭೀಮ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ಟೈನರ್ ಕಥಾಹಂದರ ಹೊಂದಿದೆ. ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ಅಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ.ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ. ಹೈದ್ರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರ್ ಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಮಾಡಿದೆ ಭೀಮ ಚಿತ್ರತಂಡ.
ಇದನ್ನೂ ಓದಿ:ಟಾಲಿವುಡ್ಗೆ ಹಾರಿದ ಶಿವಣ್ಣನ ಫೇವರಿಟ್ ನಿರ್ದೇಶಕ ಎ. ಹರ್ಷ; ಗೋಪಿಚಂದ್ ಚಿತ್ರಕ್ಕೆ ಆ್ಯಕ್ಷನ್-ಕಟ್
ಗೋಪಿಚಂದ್ ನಟನೆಯ ರಾಮಬಾಣಂ ಹೆಸರಿನ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಗೋಪಿಚಂದ್ರ ಈ ಹಿಂದಿನ ಎರಡು ಸಿನಿಮಾಗಳು ಸಹ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಹಾಗಾಗಿ ಗೋಪಿಚಂದ್ ದೊಡ್ಡ ಹಿಟ್ ಒಂದರ ನಿರೀಕ್ಷೆಯಲ್ಲಿದ್ದಾರೆ. ಹರ್ಷ ಸಹ ತೆಲುಗು ಚಿತ್ರರಂಗದಲ್ಲಿ ತಮ್ಮ ಚಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಪಕ್ಕಾ ಆಕ್ಷನ್ ಸಿನಿಮಾವನ್ನೇ ಪ್ಲ್ಯಾನ್ ಮಾಡಿದ್ದಾರೆ. ಹರ್ಷ ಕನ್ನಡದಲ್ಲಿ ನಿರ್ದೇಶಿಸಿದ ಕೊನೆಯ ಸಿನಿಮಾ ವೇದ ದೊಡ್ಡ ಹಿಟ್ ಆಗಿದೆ. ಶಿವಣ್ಣ ನಟಿಸಿದ್ದ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.
ನಟ ಗೋಪಿಚಂದ್ ವಿಲನ್ ಆಗಿ ಜನಪ್ರಿಯತೆಗಳಿಸಿ ಆ ನಂತರ ನಾಯಕ ನಟರಾದವರು. ಜಯಂ, ವರ್ಷಂ, ನಿಜಂ ಸಿನಿಮಾಗಳಲ್ಲಿ ಗೋಪಿಚಂದ್ ಅವರ ವಿಲನ್ ಪಾತ್ರ ನಾಯಕನ ಪಾತ್ರದಷ್ಟೆ ಜನಪ್ರಿಯತೆ ಗಳಿಸಿದ್ದವು. ಆ ನಂತರ ಯಜ್ಞಂ ಸಿನಿಮಾ ಮೂಲಕ ನಾಯಕ ನಟನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿ ಈವರೆಗೆ ನಾಯಕ ನಟನಾಗಿ ಮುಂದುವರೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Mon, 12 June 23