ವಿಷ್ಣುವರ್ಧನ್ ಬಗ್ಗೆ ನಾಲಗೆ ಹರಿಬಿಟ್ಟಿದ್ದ ನಟ ರಂಗರಾಜು ನಿಧನ

Actor Rangaraju Passed away: ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾಗಿದ್ದ ನಟ ವಿಜಯ್ ರಂಗರಾಜು ಅಲಿಯಾಸ್ ರಾಜ್​ಕುಮಾರ್ ನಿಧನ ಹೊಂದಿದ್ದಾರೆ. 2020 ರಲ್ಲಿ ಕನ್ನಡ ಚಿತ್ರರಂಗದ ಮೇರುನಟ ವಿಷ್ಣುವರ್ಧನ್ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಈ ವ್ಯಕ್ತಿ ಕುಖ್ಯಾತಿ ಗಳಿಸಿದ್ದರು.

ವಿಷ್ಣುವರ್ಧನ್ ಬಗ್ಗೆ ನಾಲಗೆ ಹರಿಬಿಟ್ಟಿದ್ದ ನಟ ರಂಗರಾಜು ನಿಧನ
Vijay Rangaraju
Follow us
ಮಂಜುನಾಥ ಸಿ.
|

Updated on:Jan 20, 2025 | 4:24 PM

ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಬಗ್ಗೆ ನಾಲಗೆ ಹರಿಬಿಟ್ಟು ಕನ್ನಡಿಗರಿಂದ ತೀವ್ರ ಆಕ್ರೋಶ ಎದುರಿಸಿದ್ದ ನಟ ವಿಜಯ್ ರಂಗರಾಜು ಇಂದು (ಜನವರಿ 20) ರಂದು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ತೆಲುಗು, ಮಲಯಾಳಂ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಂಗರಾಜು, ತಮ್ಮ ವಿಲನ್ ಪಾತ್ರಗಳಿಂದ ಜನಪ್ರಿಯರಾಗಿದ್ದರು. ನಂದಮೂರಿ ಬಾಲಕೃಷ್ಣ ನಟನೆಯ ‘ಭೈರವ ದ್ವೀಪಂ’ ಸಿನಿಮಾದಲ್ಲಿ ನಿರ್ವಹಿಸಿದ ವಿಲನ್ ಪಾತ್ರದಿಂದ ಅವರಿಗೆ ಹೆಚ್ಚು ಹೆಸರು ಬಂದಿತ್ತು.

ರಂಗರಾಜು ಅವರಿಗೆ ಕೆಲ ವಾರಗಳ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿ ಗಾಯವಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಚೆನ್ನೈಗೆ ತರಲಾಗಿತ್ತು. ಚಿಕಿತ್ಸೆ ನಡೆದು ವಿಶ್ರಾಂತಿಯಲ್ಲಿದ್ದ ರಂಗರಾಜು ಇಂದು ಚೆನ್ನೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರಿಯರನ್ನು ರಂಗರಾಜು ಅಗಲಿದ್ದಾರೆ.

ರಂಗರಾಜು ಕನ್ನಡ ಸಿನಿಮಾ ಪ್ರೇಮಿಗಳ ತೀವ್ರ ಆಕ್ರೋಶವನ್ನು ಎದುರಿಸಿದ್ದರು. 2020 ರಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ರಂಗರಾಜು, ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್​ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ. ವಿಷ್ಣುವರ್ಧನ್, ನಟಿಯೊಬ್ಬಾಕೆಯನ್ನು ಛೇಡಿಸಿದ್ದರು ಆಗ ನಾನು ಆತನ ಕೊರಳುಪಟ್ಟಿ ಹಿಡಿದಿದ್ದೆ ಎಂದೆಲ್ಲ ಬಾಯಿಗೆ ಬಂದಂತೆ ಸುಳ್ಳು ಹೇಳಿದ್ದ. ಆ ಬಳಿಕ ಕನ್ನಡ ಸಿನಿಮಾ ಪ್ರೇಮಿಗಳು ಆತನ ಮನೆಗೆ ಹುಡುಕಿಕೊಂಡು ಹೋಗಿ ‘ಬುದ್ಧಿಕಲಿಸಿ’ ಬಂದಿದ್ದರು. ಘಟನೆಯ ಬಳಿಕ ರಂಗರಾಜು, ಕಣ್ಣೀರು ಹಾಕುತ್ತಾ ಕ್ಷಮೆ ಸಹ ಕೇಳಿದ್ದರು.

ಇದನ್ನೂ ಓದಿ:ವಿಷ್ಣುವರ್ಧನ್ ನೆನಪಿಗೆ ‘ಸಿಂಹದ ಹಾದಿʼ ಕಿರುಚಿತ್ರ; ಇದು ಅಭಿಮಾನಿಗಳ ಕಾಣಿಕೆ

ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ವಿಜಯ್ ರಂಗರಾಜು ಹೆಸರು ಹಲವು ವಿವಾದಗಳಲ್ಲಿ ಕೇಳಿ ಬಂದಿತ್ತು. ವಿಜಯ್ ರಂಗರಾಜು ಮೂಲ ಹೆಸರು ರಾಜ್‌ಕುಮಾರ್. ಈತ ಹುಟ್ಟಿದ್ದು ಮಹಾರಾಷ್ಟ್ರ ಪುಣೆಯಲ್ಲಿ ಆದರೆ ಬೆಳೆದಿದ್ದಲ್ಲಾ ಆಂಧ್ರದ ಗುಂತಕಲ್‌. ಉತ್ತಮ ಮೈಕಟ್ಟು, ವಿಕ್ಷಿಪ್ತ ಮುಖಚಹರೆ, ದೊಡ್ಡ ಮೀಸೆ ಹೊಂದಿದ್ದ ವಿಜಯ್ ರಂಗರಾಜು, ಮೊದಲಿಗೆ 1976 ರ ಸೀತಾಕಲ್ಯಾಣಂ ಸಿನಿಮಾದಲ್ಲಿ ನಟಿಸಿದ್ದರು, ಜೊತೆಗೆ ಕೆಲವು ಸಿನಿಮಾಗಳಲ್ಲಿ ಫೈಟರ್ ಸಹ ಆಗಿದ್ದರು. ಆ ನಂತರ ಮಲಾಯಳಂ ನ ಕೆಲವು ಸಿನಿಮಾಗಳು, ನಂತರ ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿದ್ದ ‘ಭೈರವದೀಪಂ’ ಸಿನಿಮಾದಲ್ಲಿ ಭೈರವನ ಪಾತ್ರ ಇವರಿಗೆ ಗುರುತು ದೊರಕಿಸಿಕೊಟ್ಟಿತು.

ವಿಷ್ಣುವರ್ಧನ್ ಬಗ್ಗೆ ಮಾತ್ರವೇ ಅಲ್ಲದೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್​ಲಾಲ್, ಸೂಪರ್ ಸ್ಟಾರ್ ರಜನೀಕಾಂತ್ ಅವರುಗಳ ಬಗ್ಗೆಯೂ ಸಂದರ್ಶನಗಳಲ್ಲಿ ಬಾಯಿಗೆ ಬಂದಂತೆ ವಿಜಯ್ ರಂಗರಾಜು ಮಾತನಾಡಿದ್ದರು. ರಜನೀಕಾಂತ್​, ತಮಗೆ ಕುಡಿಯುವುದು ಹೇಳಿಕೊಟ್ಟರು, ಕುಡಿದು ಒಮ್ಮೆ ಅವರ ಮೇಲೆ ಜಗಳ ಮಾಡಿ ಬಾಯಿ ಮುಚ್ಚಿಸಿದ್ದೆ ಎಂದೆಲ್ಲ ಹೇಳಿಕೊಂಡಿದ್ದರು. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್​ಲಾಲ್, ನನ್ನ ಬಗ್ಗೆ ಅವರ ಡೈರಿಯಲ್ಲಿ ಬರೆದುಕೊಂಡಿದ್ದರು. ನನ್ನನ್ನು ತುಳಿಯಬೇಕು ಎಂಬುದು ಅವರ ಗುರಿ ಆಗಿತ್ತು ಆದರೆ ಅದು ಅವರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು ವಿಜಯ್ ರಂಗರಾಜು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Mon, 20 January 25

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ