AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈಗ ನಾನು ಒಂಟಿ’; ಪತ್ನಿಯಿಂದ ಬೇರ್ಪಟ್ಟ ನೋವು ಹಂಚಿಕೊಂಡ ನಟ ವಿನಾಯಕನ್

ಖ್ಯಾತ ನಟ ವಿನಾಯಕನ್ ತಮ್ಮ 40 ವರ್ಷಗಳ ದೀರ್ಘ ವೈವಾಹಿಕ ಜೀವನ ಅಂತ್ಯಗೊಂಡಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ತಮ್ಮ ಚಂಚಲ ಸ್ವಭಾವವೇ ವಿಚ್ಛೇದನಕ್ಕೆ ಕಾರಣ ಎಂದಿರುವ ನಟ, ಪತ್ನಿ ಬಾಬಿತಾ ದೂರವಾದ ನಂತರ ತಮ್ಮ ಜೀವನ ಕತ್ತಲೆಯಾಗಿದೆ ಹಾಗೂ ಹಣಕಾಸು ನಿರ್ವಹಣೆ ಕಷ್ಟವಾಗಿದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

‘ಈಗ ನಾನು ಒಂಟಿ’; ಪತ್ನಿಯಿಂದ ಬೇರ್ಪಟ್ಟ ನೋವು ಹಂಚಿಕೊಂಡ ನಟ ವಿನಾಯಕನ್
ವಿನಾಯಕನ್
ರಾಜೇಶ್ ದುಗ್ಗುಮನೆ
|

Updated on: Aug 29, 2026 | 12:09 PM

Share

ಮುಖ್ಯಾಂಶಗಳು

  • 40 ವರ್ಷಗಳ ದಾಂಪತ್ಯಕ್ಕೆ ಬ್ರೇಕ್
  • ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ ನಟ ವಿನಾಯಕನ್
  • ವಿಚ್ಛೇದನಕ್ಕೆ ತಾವೇ ಕಾರಣ ಎಂದ 'ಜೈಲರ್' ನಟ

ಮಲಯಾಳಂ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟ, ‘ಜೈಲರ್’ (Jailer) ಖಳನಾಯಕ ವಿನಾಯಕನ್ ತಮ್ಮ ವೈಯಕ್ತಿಕ ಜೀವನದ ಭಾರಿ ಬೇಸರದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ 40 ವರ್ಷಗಳ ದೀರ್ಘ ವೈವಾಹಿಕ ಜೀವನ ಅಂತ್ಯಗೊಂಡಿರುವ ಕುರಿತು ನಟ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಹಣ-ಜನಪ್ರಿಯತೆ ಇದ್ದರೂ ಅವರು ಈಗ ಜೀವನದಲ್ಲಿ ಒಬ್ಬಂಟಿಯಾಗಿದ್ದಾರೆ.

ಪ್ರೇಮ ವಿವಾಹ ಮತ್ತು ದಾಂಪತ್ಯ

ಕಾಲೇಜಿನಲ್ಲಿ ಓದುತ್ತಿದ್ದಾಗ ತಮ್ಮ 19ನೇ ವಯಸ್ಸಿನಲ್ಲೇ ವಿನಾಯಕನ್ ಹಾಗೂ ಬಾಬಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಶಕಗಳ ಕಾಲ ಜೊತೆಯಾಗಿದ್ದ ಈ ದಂಪತಿ ಇತ್ತೀಚೆಗೆ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾರೆ. ‘ನನ್ನ 19ನೇ ವಯಸ್ಸಿನಿಂದ ನಾವು ಜೊತೆಯಾಗಿದ್ದೆವು. ಆದರೆ ಈಗ ನನ್ನ ಜೀವನದಲ್ಲಿ ಯಾರೂ ಇಲ್ಲ. ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದ ಪತ್ನಿ ದೂರವಾದ ಮೇಲೆ ನನ್ನ ಜೀವನ ಕತ್ತಲೆಯಾಗಿದೆ’ ಎಂದು ನಟ ಭಾವುಕರಾಗಿದ್ದಾರೆ.

ಡಿವೋರ್ಸ್​ಗೆ ನಾನೇ ಕಾರಣ

ಈ ವಿಚ್ಛೇದನಕ್ಕೆ ತಮ್ಮ ಪತ್ನಿ ಕಾರಣವಲ್ಲ, ಸಂಪೂರ್ಣವಾಗಿ ತಾವೇ ಹೊಣೆ ಎಂದು ವಿನಾಯಕನ್ ಒಪ್ಪಿಕೊಂಡಿದ್ದಾರೆ. ‘ನಮ್ಮ ನಡುವೆ ಯಾವುದೇ ದೊಡ್ಡ ಜಗಳ ನಡೆಯಲಿಲ್ಲ. ಆದರೆ ನನ್ನ ಚಂಚಲ ಸ್ವಭಾವ ಮತ್ತು ನಡವಳಿಕೆಯಿಂದ ಆಕೆಗೆ ಶಾಂತಿ ಇಲ್ಲದಂತಾಗಿತ್ತು. ನನ್ನನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದಾಗ ಇಬ್ಬರ ಒಳಿತಿಗಾಗಿ ಬೇರ್ಪಡುವುದು ಸೂಕ್ತ ಎನಿಸಿತು. ಹಣಕಾಸಿನ ಪ್ರತಿಯೊಂದು ವಿಚಾರವನ್ನೂ ಆಕೆಯೇ ನೋಡಿಕೊಳ್ಳುತ್ತಿದ್ದಳು’ ಎಂದು ವಿನಾಯಕನ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್​​ನಲ್ಲಿ ‘ಜೈಲರ್ 2’ ಚಿತ್ರದ ಜೊತೆ ಸ್ಪರ್ಧೆಗೆ ಇಳಿದ ಸ್ಟಾರ್ ನಟನ ಸಿನಿಮಾ

ಮಲಯಾಳಂನಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ವಿನಾಯಕನ್ ನಟಿಸಿದ್ದಾರೆ. ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದ ವರ್ಮನ್ ಪಾತ್ರದ ಮೂಲಕ ದೇಶಾದ್ಯಂತ ಅಪಾರ ಪ್ರಸಿದ್ಧಿ ಪಡೆದಿರುವ ವಿನಾಯಕನ್, ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ವೈಯಕ್ತಿಕವಾಗಿ ಒಂಟಿತನ ಅನುಭವಿಸುತ್ತಿದ್ದಾರೆ. ಕುಡಿದು ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡಿಯೂ ಅವರು ಆಗಾಗ ಸುದ್ದಿ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us