Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಗೆ ವಿಚ್ಛೇದನ ನೀಡಿ, 14 ವರ್ಷದ ಬಳಿಕ ಚಿತ್ರರಂಗಕ್ಕೆ ಮರಳಲಿರುವ ರಂಭಾ

ನಟಿ ರಂಭಾ ಒಂದು ಕಾಲದ ಸ್ಟಾರ್ ನಾಯಕಿ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಭೋಜ್​ಪುರಿ, ಬೆಂಗಾಲಿ, ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿದ್ದರು. 2010 ರ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಈಗ 14 ವರ್ಷದ ಬಳಿಕ ರಂಭಾ ಕಮ್​ಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಪತಿಗೆ ವಿಚ್ಛೇದನ ನೀಡಿ, 14 ವರ್ಷದ ಬಳಿಕ ಚಿತ್ರರಂಗಕ್ಕೆ ಮರಳಲಿರುವ ರಂಭಾ
Follow us
ಮಂಜುನಾಥ ಸಿ.
|

Updated on: Oct 25, 2024 | 2:46 PM

ಭಾರತ ಚಿತ್ರರಂಗದ ಕೆಲವು ಐಕಾನಿಕ್ ನಟಿಯರಲ್ಲಿ ರಂಭಾ ಸಹ ಒಬ್ಬರು. 90-2000 ದಶಕದಲ್ಲಿ ಹಲವು ಭಾಷೆಗಳಲ್ಲಿ ನಟಿಸಿ ಮೋಡಿ ಮಾಡಿದ್ದರು ರಂಭಾ. ತಮ್ಮ ಅತ್ಯುತ್ತಮ ಸೌಂದರ್ಯ ಹಾಗೂ ನಟನಾ ಪ್ರತಿಭೆಯಿಂದ ಹಲವು ಚಿತ್ರರಂಗಗಳ ಬೇಡಿಕೆಯ ನಟಿಯಾಗಿದ್ದರು. ಅತ್ಯಂತ ಕಡಿಮೆ ವಯಸ್ಸಿಗೆ ನಟಿಯಾದ ರಂಭಾ ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದರು. ಆದರೆ ಮದುವೆಯಾದ ಬಳಿಕ ನಟನೆಗೆ ವಿದಾಯ ಹೇಳಿದರು. ಆದರೆ ಈಗ ಹೊರಬಿದ್ದಿರುವ ಸುದ್ದಿಯಂತೆ ರಂಭಾ, ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದು ಚಿತ್ರರಂಗಕ್ಕೆ ಸಹ ಮರಳಲಿದ್ದಾರಂತೆ.

2010 ರಲ್ಲಿ ನಟಿ ರಂಭಾ, ಶ್ರೀಲಂಕಾ ಮೂಲದ ಕೆನಡಾದಲ್ಲಿ ನೆಲೆಸಿರುವ ಉದ್ಯಮಿಯನ್ನು ವಿವಾಹವಾದರು. ರಂಭಾಗೆ ಮೂರು ಮಂದಿ ಮಕ್ಕಳು ಸಹ ಇದ್ದಾರೆ. ರಂಭಾ, ಪತಿಯೊಂದಿಗೆ ಟೊರಂಟೊದಲ್ಲಿ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ರಂಭಾ ದಾಂಪತ್ಯದಲ್ಲಿ ವಿರಸ ಮೂಡಿದ್ದು ರಂಭಾ, ತಮ್ಮ ಪತಿಗೆ ವಿಚ್ಛೇದನ ನೀಡಿ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ರಂಭಾ ಮತ್ತೆ ಸಿನಿಮಾ ನಟನೆ ಆರಂಭಿಸಲಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕೆನಡಾದಲ್ಲಿ ನಟಿ ರಂಭಾನ ಭೇಟಿ ಮಾಡಿದ ದಳಪತಿ ವಿಜಯ್

ಈ ಹಿಂದೆ ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ್ದ ರಂಭಾ, ‘ದಾಂಪತ್ಯದಲ್ಲಿ ವಿರಸ ಇತ್ತು, ಅದು ಸಣ್ಣ ಭಿನ್ನಾಭಿಪ್ರಾಯ ಮಾತ್ರ, ಅದು ಎಲ್ಲ ಕುಟುಂಬಗಳಲ್ಲಿಯೂ ಇರುವಂಥಹದ್ದೇ. ಕೆಲವರ ಬುದ್ಧಿವಾದದಿಂದಾಗಿ ಎಲ್ಲವೂ ಸರಿಯಾಗಿದೆ’ ಎಂದಿದ್ದರು. ಆದರೆ ಕೆಲವು ಮಾಧ್ಯಮಗಳ ವರದಿಯಂತೆ ರಂಭಾ ಪತಿಗೆ ವಿಚ್ಛೇದನ ನೀಡುತ್ತಿದ್ದು, ಮಕ್ಕಳೊಂದಿಗೆ ಭಾರತಕ್ಕೆ ಮರಳಲಿದ್ದಾರಂತೆ.

2010 ರಲ್ಲಿ ವಿವಾಹವಾದ ರಂಭಾ ಆ ನಂತರ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು. ಕೆಲವು ತಮಿಳು ಹಾಗೂ ತೆಲುಗು ಚಾನೆಲ್​ಗಳ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ರಂಭಾ ಕೆಲಸ ಮಾಡಿದ್ದಾರೆ. ಕೆಲವು ಶೋಗಳ ನಿರೂಪಣೆಯನ್ನೂ ಸಹ ರಂಭಾ ಮಾಡಿದ್ದರು. ಕೆಲವು ಸಿನಿಮಾ ಸಂಬಂಧಿ ಪಾರ್ಟಿಗಳು, ಕಾರ್ಯಕ್ರಮಗಳಲ್ಲಿಯೂ ಸಹ ರಂಭಾ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ನಟನೆಯಿಂದ ಮಾತ್ರ ದೂರವೇ ಇದ್ದರು. ಆದರೆ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ ರಂಭಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ