ಸಿಂಪಲ್ ಆಗಿ ಮದುವೆ ಆದ ಸಿದ್ದಾರ್ಥ್-ಅದಿತಿ ನಡುವಿನ ವಯಸ್ಸಿನ ಅಂತರವೆಷ್ಟು?

ಸಿದ್ದಾರ್ಥ್ ಹಾಗೂ ಅದಿತಿ ಮೊದಲ ಬಾರಿಗೆ ಭೇಟಿ ಆಗಿದ್ದು, ‘ಮಹಾ ಸಮುದ್ರಂ’ ಚಿತ್ರದ ಸೆಟ್​ನಲ್ಲಿ. ಇವರ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಇಬ್ಬರೂ ಸುತ್ತಾಟ ನಡೆಸಿದ್ದರು. ಆದರೆ, ಎಲ್ಲಿಯೂ ಈ ವಿಚಾರವನ್ನು ಅವರು ಹೇಳಿಕೊಂಡಿರಲಿಲ್ಲ. ಕೆಲವು ಸಮಯ ಇಬ್ಬರೂ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದರು.

ಸಿಂಪಲ್ ಆಗಿ ಮದುವೆ ಆದ ಸಿದ್ದಾರ್ಥ್-ಅದಿತಿ ನಡುವಿನ ವಯಸ್ಸಿನ ಅಂತರವೆಷ್ಟು?
ಸಿದ್ದಾರ್ಥ್-ಅದಿತಿ
Follow us
ರಾಜೇಶ್ ದುಗ್ಗುಮನೆ
|

Updated on: Mar 28, 2024 | 11:41 AM

ಚಿತ್ರರಂಗದಲ್ಲಿ ಅದಿತಿ ಹೈದರಿ (Aditi Rao Hydari) ಹಾಗೂ ಸಿದ್ದಾರ್ಥ್ ಇಷ್ಟು ವರ್ಷಗಳ ಕಾಲ ಲವ್​ ಬರ್ಡ್ಸ್ ಆಗಿದ್ದರು. ಈಗ ಈ ಜೋಡಿ ಮದುವೆ ಆಗಿದೆ ಎನ್ನಲಾಗುತ್ತಿದೆ. ತೆಲಂಗಾಣದ ಶ್ರೀರಂಗಾಪುರದಲ್ಲಿನ ದೇವಾಲಯ ಒಂದರಲ್ಲಿ ಇವರ ಮದುವೆ ನೆರವೇರಿದೆ ಎಂದು ವರದಿ ಆಗಿದೆ. ಆಪ್ತರು ಹಾಗೂ ಕುಟುಂಬದವರು ಈ ಮದುವೆಯಲ್ಲಿ ಭಾಗಿ ಆಗಿದ್ದರು. ಈ ಮದುವೆ ವಿಚಾರವನ್ನು ದಂಪತಿ ರಿವೀಲ್ ಮಾಡಿಲ್ಲ. ಈ ಮಧ್ಯೆ ಈ ದಂಪತಿಯ ವಯಸ್ಸಿನ ಅಂತರ ಎಷ್ಟು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಿದ್ದಾರ್ಥ್ ಹಾಗೂ ಅದಿತಿ ಮೊದಲ ಬಾರಿಗೆ ಭೇಟಿ ಆಗಿದ್ದು, ‘ಮಹಾ ಸಮುದ್ರಂ’ ಚಿತ್ರದ ಸೆಟ್​ನಲ್ಲಿ. ಇವರ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಇಬ್ಬರೂ ಸುತ್ತಾಟ ನಡೆಸಿದ್ದರು. ಆದರೆ, ಎಲ್ಲಿಯೂ ಈ ವಿಚಾರವನ್ನು ಅವರು ಹೇಳಿಕೊಂಡಿರಲಿಲ್ಲ. ಕೆಲವು ಸಮಯ ಇಬ್ಬರೂ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದರು. ಈಗ ಈ ಜೋಡಿ ಮದುವೆ ಆಗಿದ್ದಾರೆ. ಅಂದಹಾಗೆ ಅದಿತಿಗಿಂತ ವಯಸ್ಸಿನಲ್ಲಿ ಸಿದ್ದಾರ್ಥ್ ಏಳು ವರ್ಷ ಹಿರಿಯವರು.

1986ರ ಅಕ್ಟೋಬರ್ 28ರಂದು ಹೈದರಾಬಾದ್​ನಲ್ಲಿ ಅದಿತಿ ಜನಿಸಿದರು. ಅವರಿಗೆ ಈಗ 37 ವರ್ಷ. ಅದಿತಿ ಅವರದ್ದು ನವಾಬ್ ಕುಟುಂಬ. ಅದೇ ರೀತಿ 1979ರ ಏಪ್ರಿಲ್ 17ರಂದು ಚೆನ್ನೈನಲ್ಲಿ ಸಿದ್ದಾರ್ಥ್ ಜನಿಸಿದರು. ಅವರಿಗೆ 44 ವರ್ಷ. ಇಬ್ಬರ ಮಧ್ಯೆ ಏಳು ವರ್ಷಗಳ ವಯಸ್ಸಿನ ಅಂತರ ಇದೆ. ಇಬ್ಬರೂ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದಾರ್ಥ್ ಮಲ್ಹೋತ್ರಾ ಮೊದಲ ಸಂಭಾವನೆ ಇಷ್ಟೇನಾ? ವೈರಲ್ ಆಯ್ತು ಹೇಳಿಕೆ

ಅಂದಹಾಗೆ ಸಿದ್ಧಾರ್ಥ್ ಅವರಿಗೆ ಇದು ಎರಡನೇ ವಿವಾಹ. 2003ರಲ್ಲಿ ಸಿದ್ದಾರ್ಥ್ ಬಾಲ್ಯದ ಗೆಳತಿ ಮೇಘನಾ ಅವರನ್ನು ಮದುವೆ ಆಗಿದ್ದರು. ಮೂರೇ ವರ್ಷಕ್ಕೆ ಇವರು ಬೇರೆ ಆದರು. ಆ ಬಳಿಕ ಸಿದ್ದಾರ್ಥ್ ಅವರ ಹೆಸರು ಹಲವು ಸೆಲೆಬ್ರಿಟಿಗಳ ಜೊತೆ ಕೇಳಿ ಬಂದಿತ್ತು. ಸಮಂತಾ ಜೊತೆಗೂ ಅವರು ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು. ಈಗ ಅವರು ಅದಿತಿಯನ್ನು ಮದುವೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ