ಡಿವೋರ್ಸ್​ ಆದ ಒಂದು ವರ್ಷದ ಬಳಿಕ ಸಮಂತಾ ರುತ್​ ಪ್ರಭು, ನಾಗ ಚೈತನ್ಯ ತೆರೆಯ ಮೇಲೆ ಒಂದಾಗಲು ನಿರ್ಧರಿಸಿದ್ದಾರಾ?

ಸಮಂತಾ ಹಾಗೂ ನಾಗ ಚೈತನ್ಯ 2021 ರಲ್ಲಿ ದಾಂಪತ್ಯ ಜೀವನದಿಂದ ಬೇರೆಯಾಗಿದ್ದರು. ಇದಾದ ಬಳಿಕ ಮತ್ತೆ ಇಬ್ಬರು ಒಟ್ಟಿಗೆ ಸ್ಕ್ರೀನ್​ ಹಂಚಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಡಿವೋರ್ಸ್​ ಆದ ಒಂದು ವರ್ಷದ ಬಳಿಕ ಸಮಂತಾ ರುತ್​ ಪ್ರಭು, ನಾಗ ಚೈತನ್ಯ ತೆರೆಯ ಮೇಲೆ ಒಂದಾಗಲು ನಿರ್ಧರಿಸಿದ್ದಾರಾ?
ಸಮಂತಾ, ನಾಗ ಚೈತನ್ಯ
Edited By:

Updated on: Nov 12, 2022 | 1:10 PM

ಸಮಂತಾ(samantha) ಅವರು ಇತ್ತೀಚೆಗೆ myositis’ ಎಂಬ ಕಾಯಿಲೆಯಿಂದ ಬಳುತ್ತಿದ್ದಾರೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು, ನಂತರ ನಿರಂತರವಾಗಿ ಅವರು ಅನಾರೋಗ್ಯದ ಬಗ್ಗೆ ಪೋಸ್ಟ್​ ಹಂಚಿಕೊಂಡರು, ‘ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆಎಂದು ಸಮಂತಾ ಬರೆದುಕೊಂಡಿದ್ದರು. ವರದಿಯ ಪ್ರಕಾರ ಮಾಜಿ ಪತಿ ನಾಗಚೈತನ್ಯ ಹಾಗೂ ಅವರ ತಂದೆ ನಾಗಾರ್ಜುನ ಅವರು ಸಮಂತಾ ಅವರ ಆರೋಗ್ಯದ ಬಗ್ಗೆ ವಿಚಾರಿಸುವ ಸಲುವಾಗಿ ಭೇಟಿ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಕಾರಣಾಂತರದಿಂದ ಆಗದೇ ಇದ್ದಾಗ ನಾಗ ಚೈತನ್ಯ ಅವರು ಮಾಜಿ ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್​ನಲ್ಲಿ ಕೇಳಿ ಬರುತ್ತಿರುವ ಪ್ರಕಾರ ಸಮಂತಾ ಹಾಗೂ ನಾಗ ಚೈತನ್ಯ ಅವರು ಒಟ್ಟಿಗೆ ಸಿನಿಮಾ ಮಾಡಬಹುದು ಎನ್ನುತ್ತಿದ್ದಾರೆ. ಮೂಲಗಳ ಪ್ರಕಾರ ನಾಗ ಚೈತನ್ಯ ಅವರು ಬೇರೆ ಆದರೂ ಕೂಡ ಸಮಂತಾ ಅವರ ಮೇಲೆ ಇನ್ನೂ ಪ್ರೀತಿ ಇದೆ ಎಂದು ಅವರು ತೋರಿದ ಕಾಳಜಿಯಿಂದ ಗೊತ್ತಾಗುತ್ತದೆ ಎಂದಿದ್ದಾರೆ. ಮಾಜಿ ಜೋಡಿ ಮದುವೆಯಾಗುವ ಮೊದಲು ಪರಸ್ಪರ ಡೇಟಿಂಗ್​ನಲ್ಲಿದ್ದರು, ಒಟ್ಟಿಗೆ ಕೆಲಸ ಕೂಡ ಮಾಡಿದ್ದರು, ‘ಮಜಿಲಿ‘, ‘ಓ ಬೇಬಿಮತ್ತು ‘ಯೇ ಮಾಯಾ ಚೇಸಾವೆಮುಂತಾದ ಹಿಟ್​ ಸಿನಿಮಾವನ್ನ ನೀಡಿದ್ದಾರೆ.

ಇದನ್ನೂ ಓದಿ:‘ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ’; ಸಮಂತಾ ನಟನೆಯ ‘ಯಶೋದಾ’ ನೋಡಿ ಮೆಚ್ಚಿಕೊಂಡ ಫ್ಯಾನ್ಸ್

ಈ ಜೋಡಿಯು 2021 ರಲ್ಲಿ ಬೇರೆಯಾಗಿದ್ದು, ಕಾಫಿ ವಿತ್​ ಕರಣ್ ಸೆಟ್​ನಲ್ಲಿ ಸಮಂತಾ ಅವರು ಇದರ ಬಗ್ಗೆ ನೋವು ಹೊರ ಹಾಕಿದ್ದರು, ಇದಾದ ಬಳಿಕ ಹಿಂದಿ ವೆಬ್​ ಸರಣಿ ‘ದಿ ಪ್ಯಾಮಿಲಿ ಮ್ಯಾನ್-2′ನಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನ ಗೆದ್ದರು, ನಂತರ ಪುಷ್ಪಾ ಸಿನಿಮಾದಲ್ಲಿ ‘ಓ ಅಂತವಾಹಾಡಿನ ಮೂಲಕ ಎಲ್ಲೆಡೆ ತಮ್ಮ ಡ್ಯಾನ್ಸ್​ನ ಮೂಲಕ ಹಾಡಿನ ಕ್ರೇಜ್​ ಹೆಚ್ಚಿಸಿದ್ದರು.

ಸಮಂತಾ ಅವರು ನಿನ್ನೆ (ನವೆಂಬರ್11) ರಿಲೀಸ್​ ಆದ ‘ಯಶೋದಾಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬಾಡಿಗೆ ತಾಯಿಯಾಗಿ ಕಾಣಿಸಿಕೊಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇನ್ನು ನಾಗ ಚೈತನ್ಯ ಅವರು ‘ಲಾಲ್​ ಸಿಂಗ್​ ಚಡ್ಡಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ