ಕೋಟಿ ಕೋಟಿ ಸಂಭಾವನೆ ಪಡೆದರೂ ಅಜಯ್ ದೇವಗನ್ ಹೆಸರಲ್ಲಿದೆ ದೊಡ್ಡ ಮೊತ್ತದ ಸಾಲ
ಕಾಜಲ್ ಹಾಗೂ ಅಜಯ್ ದೇವಗನ್ ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದರು. ಇತ್ತೀಚೆಗೆ ಅವರು ಮುಂಬೈನ ಜುಹುನಲ್ಲಿ ಹೊಸ ಬಂಗಲೆ ಖರೀದಿ ಮಾಡಿದ್ದಾರೆ.
ಅಜಯ್ ದೇವಗನ್ ಬಾಲಿವುಡ್ನ ಬಹುಬೇಡಿಕೆಯ ನಟ. ‘ರುದ್ರ’ ವೆಬ್ ಸೀರಿಸ್ಗಾಗಿ ಇವರು 125 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ ಅಜಯ್ ದೇವಗನ್ ಇತ್ತೀಚೆಗೆ ಮನೆ ಖರೀದಿ ಮಾಡುವುದಕ್ಕೆ ದೊಡ್ಡ ಮೊತ್ತದ ಸಾಲ ತೆಗೆದಿದ್ದಾರೆ. ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈಲರ್ ಆಗುತ್ತಿದೆ.
ಕಾಜಲ್ ಹಾಗೂ ಅಜಯ್ ದೇವಗನ್ ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದರು. ಕಳೆದ ಒಂದು ವರ್ಷದಿಂದ ಹುಡುಕಿದರೂ ಅವರಿಗೆ ಒಳ್ಳೆಯ ಮನೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಅವರು ಮುಂಬೈನ ಜುಹುನಲ್ಲಿ ಹೊಸ ಬಂಗಲೆ ಖರೀದಿ ಮಾಡಿದ್ದಾರೆ. ಇದು 474.4 ಚದರ ಮೀಟರ್ ಇದ್ದು, ಐಷಾರಾಮಿಯಾಗೂ ಇದೆಯಂತೆ. ಅಜಯ್ ಹಾಗೂ ಕಾಜಲ್ ಈ ಬಂಗಲೆಗೆ 47.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಈ ಇದರ ಖರೀದಿಗೆ ಅವರು 18.75 ಕೋಟಿ ಬ್ಯಾಂಕ್ನಿಂದ ಸಾಲ ಪಡೆದಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.
ಹೊಸ ಬಂಗಲೆ ಖರೀದಿ ಪ್ರಕ್ರಿಯೆ ಕಳೆದ ವರ್ಷವೇ ಆರಂಭವಾಗಿದ್ದು, ಈಗ ಪೂರ್ಣಗೊಂಡಿದೆ. ಸದ್ಯ, ಈ ಬಂಗಲೆಯ ನವೀಕರಣ ಕಾರ್ಯಗಳು ನಡೆಯುತ್ತಿವೆ. ಶೀಘ್ರವೇ ದಂಪತಿ ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರಂತೆ. ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.
ಸೂರ್ಯವಂಶಿ, ಆರ್ಆರ್ಆರ್ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗಳಲ್ಲಿ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರು ಚಿತ್ರಗಳಲ್ಲಿ ಅತಿಥಿ ಪಾತ್ರವಾದರೂ ತುಂಬಾನೇ ಪ್ರಾಮುಖ್ಯತೆ ಹೊಂದಿರಲಿದೆಯಂತೆ. ಇನ್ನು, ಮೈದಾನ್ ಸಿನಿಮಾದಲ್ಲಿ ಅಜಯ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಹಲವು ಸಿನಿಮಾಗಳು ಅಜಯ್ ಕೈಯಲ್ಲಿವೆ.
ಇದನ್ನೂ ಓದಿ: World No Tobacco Day: ಅಜಯ್ ದೇವಗನ್, ಹೃತಿಕ್, ಸಲ್ಮಾನ್, ಸೈಫ್ ಸಿಗರೇಟ್ ಚಟ ಬಿಡಲು ಕಾರಣ ಆಗಿದ್ದು ಏನು?
100 ಕೋಟಿ ಪಡೆಯುವ ಶಾರುಖ್ ಖಾನ್ರನ್ನೂ ಮೀರಿಸಿದ ಅಜಯ್ ದೇವಗನ್; ಹಾಗಾದ್ರೆ ಅವರ ಸಂಭಾವನೆ ಎಷ್ಟು?
Published On - 5:04 pm, Sun, 20 June 21