ಬೈಕ್​ನಲ್ಲೇ ಅಜಿತ್ ಕುಮಾರ್ ಯುರೋಪ್ ಪರ್ಯಟನೆ; ವೈರಲ್ ಆಯ್ತು ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Jun 20, 2022 | 3:09 PM

ಫೋಟೋದಲ್ಲಿ ಅಜಿತ್ ಅವರ ಲುಕ್ ಸಾಕಷ್ಟು ಗಮನ ಸೆಳೆದಿದೆ. ಅವರು ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಹೇರ್​ಸ್ಟೈಲ್ ಕೂಡ ಭಿನ್ನವಾಗಿದೆ. ಅ

ಬೈಕ್​ನಲ್ಲೇ ಅಜಿತ್ ಕುಮಾರ್ ಯುರೋಪ್ ಪರ್ಯಟನೆ; ವೈರಲ್ ಆಯ್ತು ಫೋಟೋ
ಅಜಿತ್
Follow us on

ನಟ ಅಜಿತ್ ಕುಮಾರ್ (Ajith Kumar)​ ಅವರು ಭಿನ್ನವಾಗಿ ನಿಲ್ಲುತ್ತಾರೆ. ಇದಕ್ಕೆ ಕಾರಣ ಅವರ ಪ್ಯಾಷನ್. ಅವರಿಗೆ ಬೈಕ್​ಗಳ ಬಗ್ಗೆ ಸಖತ್ ಕ್ರೇಜ್ ಇದೆ. ಅವರ ಬಳಿ ದುಬಾರಿ ಕಾರು ಹಾಗೂ ಬೈಕ್ ಕಲೆಕ್ಷನ್ ಇದೆ. ಹಾಗಂತ ಅವರು ಇದನ್ನು ಮನೆಯಲ್ಲೇ ಇಟ್ಟುಕೊಳ್ಳುವುದಿಲ್ಲ. ಅದರಲ್ಲಿ ಸುತ್ತಾಟ ನಡೆಸುತ್ತಾರೆ. ಈಗ ಅವರು ಯುರೋಪ್​ ರಾಷ್ಟ್ರಗಳಲ್ಲಿ ರೋಡ್ ಟ್ರಿಪ್ (Road Trip) ಮಾಡುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಜಿತ್ ಅವರ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

ಅಜಿತ್ ಅವರು ಎಚ್​. ವಿನೋದ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಚಿತ್ರದ ಶೂಟಿಂಗ್ ಸದ್ಯ ಪ್ರಗತಿಯಲ್ಲಿದೆ. ಅಜಿತ್ 61ನೇ ಚಿತ್ರ ಇದಾಗಿದ್ದು, ಬೋನಿ ಕಪೂರ್ ಬಂಡವಾಳ ಹೂಡುತ್ತಿದ್ದಾರೆ. ಅಜಿತ್ ಈ ಹಿಂದಿನ ಚಿತ್ರ ‘ವಲಿಮೈ’ ಚಿತ್ರವನ್ನು ಬೋನಿ ಕಪೂರ್ ಅವರೇ ನಿರ್ಮಿಸಿದ್ದರು. ಅಜಿತ್ ಅವರು ಈಗ ಚಿತ್ರದ ಕೆಲಸಗಳಿಂದ ಒಂದು ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ವಿದೇಶದಲ್ಲಿ ಬೈಕ್​ನಲ್ಲಿ ಸಂಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ
Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ
ಒಟಿಟಿಯಲ್ಲಿ ‘ವಲಿಮೈ’ ದಾಖಲೆ; ಒಂದೇ ನಿಮಿಷಕ್ಕೆ 10 ಕೋಟಿ ಸ್ಟ್ರೀಮಿಂಗ್
​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​
ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

ಇಂಗ್ಲೆಂಡ್ ಮೂಲದ ಉದ್ಯಮಿ ಹಾಗೂ ಅಡ್ವೆಂಚರ್ ಬೈಕ್ ರೈಡರ್ ಸುಪ್ರೇಜ್​ ವೆಂಕಟ್ ಅವರ ಜತೆ ಅಜಿತ್ ಬೈಕ್​ನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅಜಿತ್ ಅವರು ಬೈಕ್ ರೈಡಿಂಗ್ ಮಾಡಲು ರೆಡಿ ಆಗಿರುವ ಫೋಟೋಗಳನ್ನು ಸುಪ್ರೇಜ್ ಅವರು ಹಂಚಿಕೊಳ್ಳುತ್ತಿದ್ದಾರೆ. ಅಜಿತ್ ಅವರು ಈ ರೀತಿ ರೋಡ್​ ಟ್ರಿಪ್ ಹೋಗಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಅವರು ಬೈಕ್​ನಲ್ಲಿ ಭಾರತ ಪರ್ಯಟನೆ ಮಾಡಿದ್ದರು.

ಇದನ್ನೂ ಓದಿ: ಒಟಿಟಿಯಲ್ಲಿ ‘ವಲಿಮೈ’ ದಾಖಲೆ; ಒಂದೇ ನಿಮಿಷಕ್ಕೆ 10 ಕೋಟಿ ಸ್ಟ್ರೀಮಿಂಗ್

ಫೋಟೋದಲ್ಲಿ ಅಜಿತ್ ಅವರ ಲುಕ್ ಸಾಕಷ್ಟು ಗಮನ ಸೆಳೆದಿದೆ. ಅವರು ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಹೇರ್​ಸ್ಟೈಲ್ ಕೂಡ ಭಿನ್ನವಾಗಿದೆ. ಅವರ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಮುಂದಿನ ಚಿತ್ರಕ್ಕಾಗಿ ಅವರು ಈ ಅವತಾರ ತಾಳಿದ್ದಾರೆ.

ಈ ವರ್ಷ ತೆರೆಗೆ ಬಂದ ‘ವಲಿಮೈ’ ಚಿತ್ರದಲ್ಲಿ ಅಜಿತ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಾಕಷ್ಟು ಬೈಕ್​ ಸ್ಟಂಟ್​ಗಳು ಇತ್ತು. ಸ್ವತಃ ಅಜಿತ್ ಅವರು ಬೈಕ್​ಸ್ಟಂಟ್​ಗಳನ್ನು ಮಾಡಿದ್ದರು. ‘ವಲಿಮೈ’ ಚಿತ್ರದ ಮೇಕಿಂಗ್ ವಿಡಿಯೋಗಳು ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.