Ajith Kumar: ‘ವಾರಿಸು’ ಚಿತ್ರಕ್ಕಿಂತ ಮೊದಲೇ ರಿಲೀಸ್ ಆಗಲಿದೆ ಅಜಿತ್ ಕುಮಾರ್ ನಟನೆಯ ‘ತುನಿವು’

‘ವಾರಿಸು’ ಹಾಗೂ ‘ತುನಿವು’ ಚಿತ್ರ ಸಂಕ್ರಾಂತಿ ಪ್ರಯುಕ್ತ ತೆರೆಗೆ ಬರುತ್ತಿವೆ. ಎರಡೂ ಸಿನಿಮಾಗಳು ಜನವರಿ 12ರಂದು ರಿಲೀಸ್ ಆಗಲಿವೆ ಎಂದು ಊಹಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ‘

Ajith Kumar: ‘ವಾರಿಸು’ ಚಿತ್ರಕ್ಕಿಂತ ಮೊದಲೇ ರಿಲೀಸ್ ಆಗಲಿದೆ ಅಜಿತ್ ಕುಮಾರ್ ನಟನೆಯ ‘ತುನಿವು’
ಅಜಿತ್-ವಿಜಯ್
Edited By:

Updated on: Jan 05, 2023 | 9:18 AM

ನಟ ಅಜಿತ್ ಕುಮಾರ್ (Ajith Kumar) ಹಾಗೂ ನಟ ದಳಪತಿ ವಿಜಯ್ (Thalapathy Vijay) ಅಭಿಮಾನಿಗಳ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಎರಡೂ ಬಳಗದ ಫ್ಯಾನ್ಸ್ ಕಿತ್ತಾಡಿಕೊಳ್ಳುತ್ತಾರೆ. ಸಿನಿಮಾ ವಿಚಾರದಿಂದ ಹಿಡಿದು, ವೈಯಕ್ತಿಕ ಜೀವನದ ವಿಚಾರದವರೆಗೆ ಎಲ್ಲ ವಿಷಯಗಳಲ್ಲೂ ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಕಿರಿಕ್ ಆಗುತ್ತಲೇ ಇರುತ್ತದೆ. ಈ ಹೀರೋಗಳ ಸಿನಿಮಾಗಳು ಒಂದೇ ದಿನ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ‘ತುನಿವು’ ಸಿನಿಮಾ ಒಂದು ದಿನ ಮೊದಲೇ ರಿಲೀಸ್ ಆಗುತ್ತಿದೆ.

‘ವಾರಿಸು’ ಹಾಗೂ ‘ತುನಿವು’ ಚಿತ್ರ ಸಂಕ್ರಾಂತಿ ಪ್ರಯುಕ್ತ ತೆರೆಗೆ ಬರುತ್ತಿವೆ. ಎರಡೂ ಸಿನಿಮಾಗಳು ಜನವರಿ 12ರಂದು ರಿಲೀಸ್ ಆಗಲಿವೆ ಎಂದು ಊಹಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ‘ತುನಿವು’ ಸಿನಿಮಾ ಜನವರಿ 12ರಂದು ತೆರೆಗೆ ಬರಲಿದೆ. ‘ತುನಿವು’ ಚಿತ್ರ ಒಂದು ದಿನ ಮೊದಲು ಅಂದರೆ ಜನವರಿ 11ರಂದು ರಿಲೀಸ್ ಆಗಲಿದೆ.

ಇದನ್ನೂ ಓದಿ
Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ
ಒಟಿಟಿಯಲ್ಲಿ ‘ವಲಿಮೈ’ ದಾಖಲೆ; ಒಂದೇ ನಿಮಿಷಕ್ಕೆ 10 ಕೋಟಿ ಸ್ಟ್ರೀಮಿಂಗ್
​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​
ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

ಅಜಿತ್ ನಟನೆಯ ‘ವಲಿಮೈ’ ತೆರೆಗೆ ಬಂದ ನಂತರದಲ್ಲಿ ಇದೇ ತಂಡ ಮತ್ತೊಮ್ಮೆ ಜತೆಯಾಗಿದೆ. ‘ವಲಿಮೈ’ನಲ್ಲಿ ಅಜಿತ್ ಕುಮಾರ್ ಅವರು ಹೀರೋ ಆಗಿ ನಟಿಸಿದರೆ, ಎಚ್​. ವಿನೋದ್ ನಿರ್ದೇಶನ ಹಾಗೂ ಬೋನಿ ಕಪೂರ್ ನಿರ್ಮಾಣ ಈ ಚಿತ್ರಕ್ಕಿತ್ತು. ಇದೇ ಕಾಂಬಿನೇಷನ್​ನಲ್ಲಿ ‘ತುನಿವು’ ಮೂಡಿ ಬಂದಿದೆ. ಟ್ರೇಲರ್​ ಮೂಲಕ ಈ ಸಿನಿಮಾ ಸದ್ದು ಮಾಡಿದೆ. ಇದೊಂದು ದರೋಡೆ ಕಥೆ ಎಂಬುದು ಗೊತ್ತಾಗಿದೆ.

‘ವಾರಿಸು’ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಡಿಸೆಂಬರ್ 4ರಂದು ರಿಲೀಸ್ ಆಗಿ ಸದ್ದು ಮಾಡಿದೆ. ಕೌಟುಂಬಿಕ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ನಟಿ ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ.

ಇದನ್ನೂ ಓದಿ: Thalapathy Vijay: ‘ವಾರಿಸು’ ಟ್ರೇಲರ್‌ಗೆ ಸಖತ್ ಪ್ರತಿಕ್ರಿಯೆ; ಗೆಲುವಿನ ನಿರೀಕ್ಷೆಯಲ್ಲಿ ದಳಪತಿ ವಿಜಯ್

ಅಜಿತ್ ಹಾಗೂ ವಿಜಯ್ ಸಿನಿಮಾಗಳು ಕ್ಲ್ಯಾಶ್ ಆಗುತ್ತಿರುವುದು ಇದೇ ಮೊದಲೇನಲ್ಲ. 2014ರಲ್ಲಿ ವಿಜಯ್ ಅವರ ‘ಜಿಲ್ಲಾ’ ಹಾಗೂ ಅಜಿತ್ ಅವರ ‘ವೀರಂ’ ಚಿತ್ರಗಳು ಒಟ್ಟಿಗೆ ತೆರೆಗೆ ಬಂದಿದ್ದವು. ಈ ವೇಳೆ ‘ವೀರಂ’ ಚಿತ್ರ ಹೆಚ್ಚು ಮೆಚ್ಚುಗೆ ಪಡೆಯಿತು. ‘ಜಿಲ್ಲಾ’ ಕೊಂಚ ಕಡಿಮೆ ಅಬ್ಬರಿಸಿತು. ಈ ಸಂದರ್ಭದಲ್ಲಿ ಅಜಿತ್ ಫ್ಯಾನ್ಸ್ ಹಬ್ಬ ಮಾಡಿದ್ದರು. ಈಗ 8 ವರ್ಷಗಳ ಬಳಿಕ ಇಬ್ಬರೂ ಮುಖಾಮುಖಿ ಆಗುತ್ತಿದ್ದಾರೆ. ಈಗಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗಿದೆ. ಈ ರೇಸ್​ನಲ್ಲಿ ಗೆಲ್ಲೋದು ಯಾರು ಅನ್ನೋದು ಸದ್ಯದ ಕುತೂಹಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:16 am, Thu, 5 January 23