ಅತೀ ಕೆಟ್ಟ ವಿಮರ್ಶೆ ಮಧ್ಯೆಯೂ ಮೊದಲ ದಿನವೇ ‘ಡೆವಿಲ್’ನ ದುಪ್ಪಟ್ಟು ಗಳಿಸಿದ ‘ಅಖಂಡ 2’
'ಅಖಂಡ 2' ಕಳಪೆ ವಿಮರ್ಶೆಗಳ ಹೊರತಾಗಿಯೂ ಮೊದಲ ದಿನ ಭರ್ಜರಿ ಯಶಸ್ಸು ಕಂಡಿದೆ. ಇದು 'ಡೆವಿಲ್' ಚಿತ್ರದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಬಾಲಯ್ಯರ ಆ್ಯಕ್ಷನ್ ಮತ್ತು ಕಮರ್ಷಿಯಲ್ ಅಂಶಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ವೀಕೆಂಡ್‌ನಲ್ಲಿ ಮತ್ತಷ್ಟು ಗಳಿಕೆ ನಿರೀಕ್ಷಿಸಲಾಗಿದೆ.

‘ಡೆವಿಲ್’ ಸಿನಿಮಾ (Devil Movie) ಮೊದಲ ದಿನ ಅಬ್ಬರಿಸಿತ್ತು. ಈ ಚಿತ್ರ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದಾಗಿ ಚಿತ್ರ ತಂಡ ಹೇಳಿಕೊಂಡಿದೆ. ವಿಶೇಷ ಎಂದರೆ, ‘ಅಖಂಡ 2’ ಸಿನಿಮಾ ಮೊದಲ ದಿನ ಈ ಚಿತ್ರದ ಡಬಲ್ ಕಲೆಕ್ಷನ್ ಮಾಡಿದೆ. ಹೀನಾಯ ವಿಮರ್ಶೆ ಮಧ್ಯೆಯೂ ‘ಅಖಂಡ 2’ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಸಿರೋದು ಅಚ್ಚರಿ ತಂದಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ತಗ್ಗುವ ಸಾಧ್ಯತೆ ಇದೆ.
‘ಅಖಂಡ’ ಸಿನಿಮಾ 2021ರಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಕೊವಿಡ್ ಮಧ್ಯೆ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. ಬೋಯಪತಿ ಶ್ರೀನು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಬಾಲಯ್ಯ ಅವರು ಈ ಚಿತ್ರಕ್ಕೆ ಹೀರೋ. ಲಾಜಿಕ್ ಲೆಸ್ ದೃಶ್ಯಗಳು ಅಭಿಮಾನಿಗಳಿಗೆ ಕಿಕ್ ಕೊಟ್ಟಿದ್ದವು. ಅವರ ಮ್ಯಾನರಿಸಂಗೆ ತಕ್ಕಂತೆ ಸಿನಿಮಾ ಮಾಡಿದ್ದರು. ಈ ಸಿನಿಮಾ ಗೆದ್ದ ನಾಲ್ಕು ವರ್ಷಗಳ ಬಳಿಕ ‘ಅಖಂಡ 2’ ಚಿತ್ರವನ್ನು ತೆರೆಗೆ ತಂದಿದ್ದಾರೆ. ಸಿನಿಮಾ ವಿಮರ್ಶೆಯಲ್ಲಿ ಸೋತಿದೆ.
‘ಅಖಂಡ 2’ ನೋಡಿದ ಬಹುತೇಕರು ಟ್ರೋಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೀಮ್ಗಳನ್ನು ಹರಿಬಿಡಲಾಗುತ್ತಿದೆ. ವಿಮರ್ಶಕರು ಐದಕ್ಕೆ ಎರಡು ಸ್ಟಾರ್ ನೀಡುತ್ತಿದ್ದಾರೆ. ಪರದೆಮೇಲೆ ಬಂದ ಆ್ಯಕ್ಷನ್ ದೃಶ್ಯಗಳನ್ನು ನೋಡಿ ನಗುತ್ತಿದ್ದಾರೆ. ಇವೆಲ್ಲದರ ಮಧ್ಯೆಯೂ ‘ಅಖಂಡ 2’ ಉತ್ತಮವಾಗಿ ಗಳಿಸಿದೆ.
ಪ್ರೀಮಿಯರ್ ಶೋ ಹಾಗೂ ಮೊದಲ ದಿನದ ಕಲೆಕ್ಷನ್ ಸೇರಿದರೆ ಸಿನಮಾ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ. ಶನಿವಾರ ಹಾಗೂ ಭಾನುವಾರ ಸಿನಿಮಾ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಸೋಮವಾರದಿಂದ ಸಿನಿಮಾ ಹೇಗೆ ನಿಂತುಕೊಳ್ಳುತ್ತದೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಸಿನಿಮಾ ಭವಿಷ್ಯ ನಿಂತಿದೆ.
ಇದನ್ನೂ ಓದಿ: ಎರಡನೇ ದಿನವೂ ಕೋಟಿಗಳಲ್ಲಿ ಗಳಿಸಿದ ‘ಡೆವಿಲ್’; ಮುಂದುವರಿದ ದರ್ಶನ್ ಅಬ್ಬರ
ಬಾಲಯ್ಯ ಅವರು ಸಿನಿಮಾಗಳಲ್ಲಿ ಆ್ಯಕ್ಷನ್ ಹೇರಳವಾಗಿರುತ್ತದೆ. ಬೆರಳಲ್ಲಿ ರೈಲನ್ನು ತಡೆದು ನಿಲ್ಲಿಸೋದು, ಸೂರ್ಯ-ಚಂದ್ರರನ್ನು ಒಂದು ಮಾಡೋ ದೃಶ್ಯಗಳು ಕೂಡ ಸಾಕಷ್ಟಿರುತ್ತದೆ. ‘ಅಖಂಡ 2’ ಚಿತ್ರದಲ್ಲೂ ಅದು ಮುಂದುವರಿದಿದೆ. ಇದು ಸಿನಿಮಾಗೆ ಬ್ಯಾಕ್ಫೈರ್ ಆಗಿದೆ. ಈ ಚಿತ್ರದ ಬಜೆಟ್ ಹೆಚ್ಚಿದೆ. ಹೀಗಾಗಿ, ಸಿನಿಮಾ ಹೆಚ್ಚಿನ ಗಳಿಕೆ ಮಾಡಬೇಕಾದ ಅನಿವಾರ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




