ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ತಮ್ಮ ಸಿಂಡ್ರೆಲಾ ಸಿನಿಮಾ ಶೂಟಿಂಗ್ಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಅಕ್ಷಯ್ ಕುಮಾರ್ ಇಂದು ಮುಂಜಾನೆ ಮುಂಬೈಗೆ ವಾಪಾಸಾಗಿದ್ದಾರೆ. ಸಿನಿಮಾದ ಶೂಟಿಂಗನ್ನು ಅರ್ಧಕ್ಕೇ ನಿಲ್ಲಿಸಿ ಮುಂಬೈಗೆ ಬಂದಿರುವ ನಟ ಅಕ್ಷಯ್ ಕುಮಾರ್ ಹೀರಾನಂದಾನಿ ಆಸ್ಪತ್ರೆಗೆ ತೆರಳಿ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ತಾಯಿ ಅರುಣಾ ಭಾಟಿಯಾ ಅವರೊಂದಿಗೆ ಬಹಳ ಆಪ್ತ ಸಂಬಂಧ ಹೊಂದಿದ್ದರು. ಹೀಗಾಗಿ, ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಇಂಗ್ಲೆಂಡ್ನಿಂದ ವಾಪಾಸ್ ಬಂದಿದ್ದಾರೆ. ಕೆಲವು ದಿನಗಳಿಂದ ಅರುಣಾ ಭಾಟಿಯಾ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ, ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ತನ್ನ ಅಗತ್ಯವಿಲ್ಲದ ಸಿಂಡ್ರೆಲಾ ಸಿನಿಮಾದ ಬೇರೆ ಸೀನ್ಗಳನ್ನು ಶೂಟ್ ಮಾಡಿಕೊಳ್ಳಲು ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ನಿರ್ಮಾಪಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಇಡೀ ಚಿತ್ರತಂಡ ಕೆಲವು ವಾರಗಳಿಂದ ಇಂಗ್ಲೆಂಡ್ನಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಹೀಗಾಗಿ, ತಾಯಿಯ ಆರೋಗ್ಯ ನೋಡಿಕೊಂಡು ಬೇಗ ವಾಪಾಸ್ ಬರುವುದಾಗಿ ಅವರು ನಿರ್ದೇಶಕರಿಗೆ ತಿಳಿಸಿ ತುರ್ತಾಗಿ ಮುಂಬೈಗೆ ವಾಪಾಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಸಾಲು ಸಾಲು ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಅಕ್ಷಯ್ ಕುಮಾರ್ ಅವರ ಕೆಲವು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಈಗಾಗಲೇ ಸಾರಾ ಅಲಿ ಖಾನ್ ಮತ್ತು ಧನುಷ್ ಜೊತೆಗೆ ಅತ್ರಂಗಿ ರೇ ಸಿನಿಮಾದ ಶೂಟಿಂಗ್ ಮುಗಿಸಿರುವ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹಾಗೇ, ಪೃಥ್ವಿರಾಜ್ ಚೌಹಾಣ್ ಅವರ ಜೀವನಕಥೆಯನ್ನು ಆಧರಿಸಿದ ಪೃಥ್ವಿರಾಜ್ ಸಿನಿಮಾದಲ್ಲಿ ಕೂಡ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಬಳಿಕ ರೋಹಿತ್ ಶೆಟ್ಟಿಯ ಸೂರ್ಯವಂಶಿ ಸಿನಿಮಾ ಈ ವರ್ಷ ರಿಲೀಸ್ ಆಗುವ ಸಾಧ್ಯತೆಯಿದೆ. ಇದಿಷ್ಟೇ ಅಲ್ಲದೆ ರಕ್ಷಾಬಂಧನ ಮತ್ತು ರಾಮ್ ಸೇತು ಸಿನಿಮಾಗಳನ್ನು ಕೂಡ ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಆಡಿದ ಒಂದೇ ಮಾತಿಗೆ ಬಾಯ್ಮುಚ್ಚಿದ ಕಪಿಲ್ ಶರ್ಮಾ
(Akshay Kumar Flies back TO Mumbai From UK as Because his Mother Health is Critical and in ICU)