ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್​ಜಿವಿ ಪ್ರಶ್ನೆ

ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ‘ಎಕ್ಸ್​’ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಬಂದಿದ್ದ ಲಕ್ಷಾಂತರ ಅಭಿಮಾನಿಗಳಲ್ಲಿ ಮೂವರು ಮೃತರಾಗಿದ್ದರು ಎಂಬುದನ್ನು ಕೂಡ ರಾಮ್​ ಗೋಪಾಲ್ ವರ್ಮಾ ಅವರು ಈಗ ನೆನಪಿಸಿದ್ದಾರೆ.

ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್​ಜಿವಿ ಪ್ರಶ್ನೆ
Rgv Sridevi Allu Arjun

Updated on: Dec 20, 2024 | 5:14 PM

‘ಪುಷ್ಪ 2’ ಸಿನಿಮಾದ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಅಭಿಮಾನಿ ಮೃತಪಟ್ಟಿದ್ದರಿಂದ ನಟ ಅಲ್ಲು ಅರ್ಜುನ್ ಮೇಲೆ ಕೇಸ್​ ಹಾಕಲಾಯಿತು. ಅಲ್ಲದೇ, ಅವರನ್ನು ತೆಲಂಗಾಣ ಪೊಲೀಸರು ಅರೆಸ್ಟ್ ಕೂಡ ಮಾಡಿದರು. ಅದೇ ದಿನ ಮಧ್ಯಂತರ ಜಾಮೀನು ಪಡೆದ ಅಲ್ಲು ಅರ್ಜುನ್ ಬಿಡುಗಡೆ ಆದರು. ಈ ಘಟನೆಗೆ ಸಂಬಂಧಿಸಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸರಣಿ ಟ್ವೀಟ್​ ಮಾಡುವ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ಒಂದು ಮುಖ್ಯವಾದ ಪ್ರಶ್ನೆ ಎತ್ತಿದ್ದಾರೆ.

ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಜನಸಾಗರ ಸೇರುವುದು ಸಹಜ. ಆಗ ಉಂಟಾಗುವ ಅವಘಡಗಳಿಗೆ ಸೆಲೆಬ್ರಿಟಿಗಳನ್ನು ಹೊಣೆ ಮಾಡುವುದು ಸರಿಯಲ್ಲ ಎಂಬುದು ರಾಮ್ ಗೋಪಾಲ್ ವರ್ಮಾ ಅವರ ವಾದ. ಇದಕ್ಕೆ ಪೂರಕವಾಗಿ ಅವರು ಒಂದು ಉದಾಹರಣೆ ನೀಡಿದ್ದಾರೆ. ಶ್ರೀದೇವಿ ನಟನೆಯ ‘ಕ್ಷಣ ಕ್ಷಣಂ’ ಸಿನಿಮಾದ ಶೂಟಿಂಗ್​ ವೇಳೆ ನಡೆದ ಘಟನೆಯನ್ನು ಈಗ ರಾಮ್ ಗೋಪಾಲ್ ವರ್ಮಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ಅಲ್ಲು ಅರ್ಜುನ್ ಯುದ್ಧ ಗೆದ್ದಿಲ್ಲ, ಸಿನಿಮಾ ಮಾಡಿ ಹಣ ಮಾಡಿಕೊಂಡಿದ್ದಾರೆ ಅಷ್ಟೇ’; ಸಿಎಂ ರೇವಂತ್ ರೆಡ್ಡಿ

‘ಅಲ್ಲು ಅರ್ಜುನ್ ಬಂಧನದ ವಿರುದ್ಧ ಪ್ರತಿಯೊಬ್ಬ ಸ್ಟಾರ್​ ಕೂಡ ಪ್ರತಿಭಟನೆ ಮಾಡಬೇಕು. ಸಿನಿಮಾದವರು ಆಗಿರಬಹುದು ಅಥವಾ ರಾಜಕೀಯದವರು ಆಗಿರಬಹುದು. ತುಂಬ ಜನಪ್ರಿಯತೆ ಹೊಂದುವುದು ಅಪರಾಧವೇ? ನನ್ನ ಕ್ಷಣ ಕ್ಷಣಂ ಸಿನಿಮಾದ ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. 3 ಜನರು ಸಾವಿಗೀಡಾದರು. ಹಾಗಾದ್ರೆ ಈಗ ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿಯನ್ನು ಬಂಧಿಸುತ್ತಾರಾ’ ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.

ರಾಮ್​ ಗೋಪಾಲ್ ವರ್ಮಾ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಅವರು ಪೋಸ್ಟ್​ಗಳು ಹೆಚ್ಚು ವಿಡಂಭನೆಯಿಂದ ಕೂಡಿರುತ್ತವೆ. ಹಾಗಾಗಿ ಬಹುತೇಕರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಿದ್ದರೂ ಕೂಡ ಅವರು ಈಗ ಅಲ್ಲು ಅರ್ಜುನ್ ಬಗ್ಗೆ ಮಾಡಿರುವ ಪೋಸ್ಟ್​ ತೂಕಬದ್ಧವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯದ ಕೈವಾಡ ಇದೆ ಎಂದು ಕೂಡ ಹಲವರು ಟೀಕಿಸಿದ್ದಾರೆ. ರೇವಂತ್ ರೆಡ್ಡಿ ಸರ್ಕಾರವನ್ನು ಖಂಡಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us