ರಶ್ಮಿಕಾ-ಅಲ್ಲು ಅರ್ಜುನ್ ಸಿನಿಮಾದಲ್ಲಿ ದುಬಾರಿ ಫೈಟ್; 40 ಕೋಟಿ ರೂ. ಚೆಲ್ಲಿದ ಪುಷ್ಪ ನಿರ್ಮಾಪಕರು

ರಶ್ಮಿಕಾ-ಅಲ್ಲು ಅರ್ಜುನ್ ಸಿನಿಮಾದಲ್ಲಿ ದುಬಾರಿ ಫೈಟ್; 40 ಕೋಟಿ ರೂ. ಚೆಲ್ಲಿದ ಪುಷ್ಪ ನಿರ್ಮಾಪಕರು
ಅಲ್ಲು ಅರ್ಜುನ್​ - ರಶ್ಮಿಕಾ ಮಂದಣ್ಣ

Pushpa Movie: ಪುಷ್ಪ ಸಿನಿಮಾದ ಕಥಾನಾಯಕನ ಇಂಟ್ರಡಕ್ಷನ್​ ಟೀಸರ್​​ ನೋಡಿ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಅದರಲ್ಲಿನ ಫೈಟಿಂಗ್​ ದೃಶ್ಯಗಳು ಮೈ ನವಿರೇಳಿಸುವಂತಿತ್ತು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಎಲ್ಲರಲ್ಲೂ ಇನ್ನಷ್ಟು ಅಚ್ಚರಿ ಮೂಡಿಸಿದೆ.

Madan Kumar

|

Apr 20, 2021 | 3:43 PM

ಸ್ಟಾರ್​ ನಟರ ಸಿನಿಮಾ ಎಂದಾಗ ಅಲ್ಲೊಂದಷ್ಟು ಆ್ಯಕ್ಷನ್ ದೃಶ್ಯಗಳು ಇರಲೇಬೆಕು. ಈ ಫೈಟ್​ ದೃಶ್ಯಗಳಿಗಾಗಿ ಹೀರೋಗಳು ಕೆಲವೊಮ್ಮೆ ದೊಡ್ಡ ದೊಡ್ಡ ರಿಸ್ಕ್​ಗಳನ್ನೇ ತೆಗೆದುಕೊಳ್ಳುತ್ತಾರೆ. ಇನ್ನು, ಚಿತ್ರದ ನಿರ್ಮಾಪಕರೂ ಕೂಡ ಅಷ್ಟೇ, ಈ ರೀತಿಯ ದೃಶ್ಯಗಳು ಅದ್ದೂರಿಯಾಗಿ ಮೂಡಿಬರಲಿ ಎನ್ನುವ ಕಾರಣಕ್ಕೆ ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡುತ್ತಾರೆ. ಈಗ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾದ ನಿರ್ಮಾಪಕ ಕೂಡ ದೊಡ್ಡ ರಿಸ್ಕ್​ ಒಂದನ್ನು ತೆಗೆದುಕೊಂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಪುಷ್ಪ’ ಸಿನಿಮಾದ ಫೈಟಿಂಗ್​ ಸೀನ್​ಗಳ ಶೂಟಿಂಗ್​​ಗಾಗಿಯೆ ಬರೋಬ್ಬರಿ 40 ಕೋಟಿ ರೂಪಾಯಿ ವ್ಯಯಿಸಿದ್ದಾರೆ.

‘ಅಲಾ ವೈಕುಂಠಪುರಂಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​​ ಸಂಸ್ಥೆಯು ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಕಾಡಿನ ಹಿನ್ನೆಲೆಯಲ್ಲಿ ಪುಷ್ಪ ಕಥೆ ಸಾಗಲಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಅವರು ಪುಷ್ಪರಾಜ್​ ಹೆಸರಿನ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ ಇಂಟ್ರೊಡಕ್ಷನ್​ ಟೀಸರ್​ ತುಂಬಾನೇ ಮೆಚ್ಚುಗೆ ಪಡೆದುಕೊಂಡಿತ್ತು.

ಪುಷ್ಪರಾಜ್​ ಪಾತ್ರದ ಸಣ್ಣ ಝಲಕ್​ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲದೆ, ಸಿನಿಮಾದ ಫೈಟಿಂಗ್​ ದೃಶ್ಯಗಳು ಮೈ ನವಿರೇಳಿಸುವಂತಿತ್ತು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಎಲ್ಲರನ್ನೂ ಅಚ್ಚರಿಪಡಿಸಿದೆ. ನಿರ್ಮಾಪಕರು ಸಿನಿಮಾದ ಫೈಟಿಂಗ್​ ಶೂಟಿಂಗ್​ಗೆ 40 ಕೋಟಿ ರೂ. ವ್ಯಯಿಸಿದ್ದಾರಂತೆ. ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಅದ್ಭುತವಾಗಿ ಮೂಡಿಬರಬೇಕು ಎನ್ನುವ ಕಾರಣಕ್ಕೆ ದೇಶದ ನಾನಾ ಕಡೆಗಳಿಂದ ನುರಿತ ಸ್ಟಂಟ್​ ಮಾಸ್ಟರ್​ಗಳನ್ನು ಕರೆಸಿಕೊಳ್ಳಲಾಗಿದೆ.

ಸದ್ಯ ಈ ಹೊಸ ವಿಚಾರ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಸಿನಿಮಾದಲ್ಲಿ ಬರುವ ಆ್ಯಕ್ಷನ್​ ದೃಶ್ಯಗಳು ಎಷ್ಟು ಅದ್ದೂರಿಯಾಗಿ ಮೂಡಿ ಬರಬಹುದು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಆಗುತ್ತಿದೆ. ಇಡೀ ಚಿತ್ರದಲ್ಲಿ ಆ್ಯಕ್ಷನ್​ ದೃಶ್ಯಗಳು ಹೆಚ್ಚು ಹೈಲೈಟ್​ ಆಗಲಿವೆ ಎಂದು ಕೂಡ ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ 13ರಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: Allu Arjun: ಕೇವಲ 24 ಗಂಟೆಯಲ್ಲಿ ಬಾಹುಬಲಿ ದಾಖಲೆ ಮುರಿದ ಅಲ್ಲು ಅರ್ಜುನ್ ನಟನೆಯ ಪುಷ್ಪ​!

Follow us on

Related Stories

Most Read Stories

Click on your DTH Provider to Add TV9 Kannada