ಡಿಸೆಂಬರ್​ನಲ್ಲೂ ರಿಲೀಸ್ ಆಗಲ್ಲ ‘ಪುಷ್ಪ 2’ ಸಿನಿಮಾ? ಆಗಿದೆ ಪ್ರಮುಖ ಬೆಳವಣಿಗೆ

‘ಪುಷ್ಪ 2’ ತಂಡದ ಕಡೆಯಿಂದ ಟೀಸರ್ ಹಾಗೂ ಸಾಂಗ್ ರಿಲೀಸ್ ಆಗಿದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಒಂದೊಮ್ಮೆ ಸಿನಿಮಾದ ರೀಶೂಟ್ ಏನಾದರೂ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಯೂ ಅಭಿಮಾನಿಗಳಿಗೆ ಮೂಡಿದೆ.  

ಡಿಸೆಂಬರ್​ನಲ್ಲೂ ರಿಲೀಸ್ ಆಗಲ್ಲ ‘ಪುಷ್ಪ 2’ ಸಿನಿಮಾ? ಆಗಿದೆ ಪ್ರಮುಖ ಬೆಳವಣಿಗೆ
ಅಲ್ಲು ಅರ್ಜುನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 17, 2024 | 8:56 AM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ರಿಲೀಸ್ ಆಗಿದ್ದು 2021ರ ಡಿಸೆಂಬರ್ ತಿಂಗಳಲ್ಲಿ. ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆಯಲಿದೆ. ಅಲ್ಲಿಂದ ಇಲ್ಲಿಯವರೆಗೂ ಸಿನಿಮಾದ ಶೂಟಿಂಗ್ ಮಾಡುತ್ತಲೇ ಬರಲಾಗುತ್ತಿದೆ. ಈ ಚಿತ್ರದ ಕಾರಣಕ್ಕೆ ಅಲ್ಲು ಅರ್ಜುನ್ ಅವರು ಬೇರೆ ಯಾವುದೇ ಸಿನಿಮಾಗಳನ್ನೂ ಮಾಡುತ್ತಿಲ್ಲ. ಈ ಚಿತ್ರದ ರಿಲೀಸ್ ದಿನಾಂಕ ಪದೇ ಪದೇ ವಿಳಂಬ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್​ಗೆ ಹೋಗಿದೆ. ಈಗ ಕೆಲವು ವರದಿಗಳು ಸಿನಿಮಾದ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ಹೋಗಲಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

‘ಪುಷ್ಪ 2’ ಸಿನಿಮಾ ಟಾಲಿವುಡ್​ನ ಸಾಕಷ್ಟು ನಿರೀಕ್ಷಿತ ಸಿನಿಮಾ. ಅಲ್ಲು ಅರ್ಜುನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ಮತ್ತೆ ಮುಂದಕ್ಕೆ ಹೋಗಬಹುದು ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಅವರು ಸಿನಿಮಾದ ಶೂಟಿಂಗ್ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರಂತೆ. ಸರಿಯಾದ ರೀತಿಯಲ್ಲಿ ಶೂಟಿಂಗ್​ನ ಶೆಡ್ಯೂಲ್ ಮಾಡದೆ ಇರುವುದು ಇದಕ್ಕೆ ಕಾರಣ. ಈ ಕಾರಣದಿಂದಲೇ ಅವರು ಗಡ್ಡವನ್ನು ಟ್ರಿಮ್ ಮಾಡಿದ್ದಾರೆ. ಅವರು ಈಗ ಕುಟುಂಬದ ಜೊತೆ ಯುರೋಪ್ ಟ್ರಿಪ್ ತೆರಳಿದ್ದಾರೆ. ನಿರ್ದೇಶಕ ಸುಕುಮಾರ್ ಅವರು ಅಮೆರಿಕ ತೆರಳಿದ್ದಾರೆ. ಇದರಿಂದ ಶೂಟಿಂಗ್ ವಿಳಂಬ ಆಗುತ್ತಿದೆ.

‘ಪುಷ್ಪ 2’ ತಂಡದ ಕಡೆಯಿಂದ ಸಾಂಗ್ ಹಾಗೂ ಟೀಸರ್ ರಿಲೀಸ್ ಆಗಿದೆ. ಎರಡನೇ ಭಾಗ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಒಂದೊಮ್ಮೆ ಸಿನಿಮಾದ ರೀಶೂಟ್ ಏನಾದರೂ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಯೂ ಅಭಿಮಾನಿಗಳಿಗೆ ಮೂಡಿದೆ.

ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ ಆಶಿಕಾ ರಂಗನಾಥ್

‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಪ್ರಮುಖ ಪಾತ್ರ ಮಾಡಿದ್ದಾರೆ. ಫಹಾದ್ ಫಾಸಿಲ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಅನಸೂಯಾ ಭಾರದ್ವಾಜ್, ಸುನಿಲ್, ರಾವ್ ರಮೇಶ್, ಡಾಲಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.