ಅಲ್ಲು ಅರ್ಜುನ್ ಐಶಾರಾಮಿ ಹೋಟೆಲ್ನಲ್ಲಿವೆ 42 ಟಿವಿಗಳು, ಇನ್ನೂ ಹಲವು ವಿಶೇಷತೆ
Allu Arjun hotel: ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ ಪಡೆವ ನಟ ಅಲ್ಲು ಅರ್ಜುನ್ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು. ಅವರು ಐಶಾರಾಮಿ ಹೋಟೆಲ್ ಚೈನ್ ಬ್ಯುಸಿನೆಸ್ ಹೊಂದಿದ್ದಾರೆ. ಅವರದ್ದು ಸಾಧಾರಣ ಹೋಟೆಲ್ ಅಲ್ಲ. ಒಂದು ರೀತಿ ಎಕ್ಸ್ಪೀರಿಯನ್ಸ್ ಸ್ಟೋರ್ ಮಾದರಿ. ಅವರ ಹೋಟೆಲ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇಲ್ಲಿದೆ ಮಾಹಿತಿ...

ಸಿನಿಮಾ (Cinema) ನಟರು ಉದ್ಯಮಿಗಳೂ ಆಗಿರುತ್ತಾರೆ. ಕರ್ನಾಟಕದಲ್ಲಿ ನಟ-ನಟಿಯರು ಸಾಮಾನ್ಯವಾಗಿ ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಡಬ್ಬಿಂಗ್ ಸ್ಟುಡಿಯೋ ಇನ್ನಿತರೆಗಳ ಮೇಲೆ ಹೂಡಿಕೆ ಮಾಡುತ್ತಾರೆ. ಹೋಟೆಲ್ಗಳ ಮೇಲೆ ಹೂಡಿಕೆ ಮಾಡಿರುವವರು ಬಹಳ ಕಡಿಮೆ. ಕನ್ನಡ ಚಿತ್ರರಂಗದ ಸ್ಟಾರ್ಗಳಿಗೆ ಹೋಲಿಸಿದರೆ ಟಾಲಿವುಡ್ನ ಸ್ಟಾರ್ಗಳು ಉದ್ಯಮಗಳ ಮೇಲೆ ಹೂಡಿಕೆ ಮಾಡುವುದು ಬಹಳ ಹೆಚ್ಚು. ಅದಕ್ಕೆ ಉದ್ಯಮದ ಗಾತ್ರ, ಪಡೆವ ಸಂಭಾವನೆಯೂ ಕಾರಣ. ತೆಲುಗು ಸ್ಟಾರ್ಗಳು ರಿಯಲ್ ಎಸ್ಟೇಟ್ ಜೊತೆಗೆ ಹೋಟೆಲ್ಗಳ ಮೇಲೆ ಅತಿಯಾಗಿ ಹೂಡಿಕೆ ಮಾಡಿದ್ದಾರೆ. ಅದೂ ಸಾಮಾನ್ಯ ಹೋಟೆಲ್ಗಳಲ್ಲ ಭಾರಿ ಐಶಾರಾಮಿ ಹೋಟೆಲ್ಗಳನ್ನು ನಿರ್ಮಿಸಿದ್ದಾರೆ. ಹಲವಾರು ಮಂದಿ ನಟರು ಹೋಟೆಲ್ ಉದ್ಯಮ ನಡೆಸುತ್ತಿದ್ದು, ಅವರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು.
ಅಲ್ಲು ಅರ್ಜುನ್ ಅವರು ಬಫೆಲ್ಲೊ ವೈಲ್ಡ್ ವಿಂಗ್ಸ್ ಹೆಸರಿನ ಐಶಾರಾಮಿ ಹೋಟೆಲ್ ಅನ್ನು ಹೈದರಾಬಾದ್ನ ಗಚ್ಚಿಬೋಲಿ ಏರಿಯಾನಲ್ಲಿ ಹೊಂದಿದ್ದಾರೆ. ಇತರೆ ಕೆಲವು ಐಶಾರಾಮಿ ಹೋಟೆಲ್ಗಳ ರೀತಿ ಇಲ್ಲ ಅಲ್ಲು ಅರ್ಜುನ್ ಅವರದ್ದು ಕೇವಲ ಹೋಟೆಲ್ ಅಲ್ಲ ಅದೊಂದು ‘ಎಕ್ಸ್ಪೀರಿಯನ್ಸ್ ಸ್ಟೋರ್’ ಮಾದರಿ ಇದೆ. ಆಪಲ್, ಸ್ಯಾಮ್ಸಂಗ್ಸ್ ಇನ್ನಿತರೆ ಸಂಸ್ಥೆಗಳವರು ತಮ್ಮ ಪ್ರಾಡಕ್ಟ್ ಅನ್ನು ಜನರಿಗೆ ಬಳಸಲು ಮಾಡಿರುವ ಎಕ್ಸ್ಪೀರಿಯನ್ಸ್ ಸ್ಟೋರ್ ಮಾದರಿಯಲ್ಲಿಯೇ ಇದೆ ಅಲ್ಲು ಅರ್ಜುನ್ ಅವರ ಬಫೆಲ್ಲೊ ವೈಲ್ಡ್ ವಿಂಗ್ಸ್.
ಅಲ್ಲು ಅರ್ಜುನ್ ಅವರ ಬಫೆಲ್ಲೊ ವೈಲ್ಡ್ ವಿಂಗ್ಸ್ನಲ್ಲಿ ಕ್ರೀಡೆಗೆ ಪ್ರಥಮ ಆದ್ಯತೆ. ಅವರ ಹೋಟೆಲ್ಗೆ ಯಾವಾಗಲೇ ಹೋದರು ಯಾವುದಾದರೂ ಒಂದು ಕ್ರೀಡೆ ಟಿವಿಯಲ್ಲಿ ಲೈವ್ ನಡೆಯುತ್ತಲೇ ಇರುತ್ತದೆ. ಸ್ಪೋರ್ಟ್ ನೋಡಲೆಂದು ಒಂದೇ ಹಾಲ್ನಲ್ಲಿ ಬರೋಬ್ಬರಿ 42 ವಿವಿಧ ಗಾತ್ರದ ಟಿವಿಗಳನ್ನು ಅಳವಡಿಸಲಾಗಿದೆ. ಎರಡು-ಮೂರು ಟಿವಿಗಳಂತೂ ಸಿನಿಮಾ ಸ್ಕ್ರೀನ್ಗಳಷ್ಟು ದೊಡ್ಡದಾಗಿವೆ. ಅದು ಮಾತ್ರವೇ ಅಲ್ಲದೆ, ಇಲ್ಲಿ ಆಟವಾಡಲು ಸಹ ಸಾಕಷ್ಟು ವ್ಯವಸ್ಥೆ ಇದೆ.
ಇದನ್ನೂ ಓದಿ:ಶಕ್ತಿಮಾನ್ ಪಾತ್ರದಲ್ಲಿ ಬಾಲಿವುಡ್ ನಟನ ಬದಲು ಅಲ್ಲು ಅರ್ಜುನ್?
ಫೂಸ್ಬಾಲ್ ಟೇಬಲ್, ಬಿಲಿಯರ್ಡ್ಸ್ ಟೇಬಲ್ ಇನ್ನೂ ಕೆಲವು ಇಂಡೋರ್ ಗೇಮ್ಗಳನ್ನು ಈ ಹೋಟೆಲ್ನಲ್ಲಿ ಆಡಬಹುದು. ಇದಕ್ಕಿಂತಲೂ ವಿಶೇಷವೆಂದರೆ ಇಲ್ಲಿ ಪ್ಲೇ ಸ್ಟೇಷನ್ ಸಹ ಇವೆ. ಹಲವಾರು ಪ್ಲೇ ಸ್ಟೇಷನ್ಗಳನ್ನು ಹೋಟೆಲ್ ಒಳಗೆ ಅಳವಡಿಸಲಾಗಿದ್ದು ಬಿಯರ್ ಹೀರುತ್ತಾ, ಇಷ್ಟದ ಆಹಾರ ಸವಿಯುತ್ತಾ ಗಂಟೆಗಳ ಕಾಲ ಗೇಮ್ ಸಹ ಆಡಬಹುದಾಗಿದೆ.
ಇನ್ನು ಮೆನುವಿನ ವಿಷಯಕ್ಕೆ ಬಂದರೆ ಹಲವು ರೀತಿಯ ಬರ್ಗರ್, ಪಿಜಾಗಳ ಜೊತೆಗೆ ಸ್ಟೇಕ್, ಸಿಜ್ಲರ್ಗಳು (ದನದ ಮಾಂಸದ್ದಲ್ಲ ಬದಲಿಗೆ ಎಮ್ಮೆಯ ಮಾಂಸದ್ದು) ಸಹ ಇಲ್ಲಿ ದೊರೆಯುತ್ತವೆ. ಬೆಲೆ ತುಸು ದುಬಾರಿಯೇ. ಅಲ್ಲು ಅರ್ಜುನ್ ಅವರ ಬಫೆಲ್ಲೊ ವೈಲ್ಡ್ ವಿಂಗ್ಸ್ನ ಹೋಟೆಲ್ ಗೆ ಭೇಟಿ ನೀಡಿ ಅಲ್ಲಿ ಆಹಾರ ಸವಿದಿರುವ ಕೆಲವು ಫುಡ್ ವ್ಲಾಗರ್ಗಳು ಅಲ್ಲಿನ ತಿನಿಸುಗಳ ಗುಣಮಟ್ಟ ಮತ್ತು ರುಚಿಯನ್ನು ಬಹುವಾಗಿ ಕೊಂಡಾಡಿದ್ದಾರೆ. ಎಲ್ಲದಕ್ಕಿಂತಲೂ ಅಲ್ಲಿನ ಆಂಬಿಯನ್ಸ್ ಅನ್ನು ಬಹಳ ಮೆಚ್ಚಿಕೊಂಡಿದ್ದಾರೆ. ‘ಬಫೆಲ್ಲೊ ವೈಲ್ಡ್ ವಿಂಗ್ಸ್’ ಅಮೆರಿಕದ ಜನಪ್ರಿಯ ಫುಡ್ ಚೈನ್, ಅದರ ಪ್ರಾಂಚೈಸಿಯನ್ನು ಅಲ್ಲು ಅರ್ಜುನ್ ಖರೀದಿಸಿ ಹೋಟೆಲ್ ತೆರೆದಿದ್ದಾರೆ. ಬೆಂಗಳೂರಿನಲ್ಲೂ ನಾಲ್ಕೈದು ಬಫೆಲ್ಲೊ ವೈಲ್ಡ್ ವಿಂಗ್ಸ್ ಹೋಟೆಲ್ಗಳು ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




