AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್ ಮಾಡಿದ ತಪ್ಪಿಗೆ ಇಡೀ ಕುಟುಂಬ ಅನುಭವಿಸಿತ್ತು ತೊಂದರೆ; ರಹಸ್ಯ ಸಭೆಯಿಂದ ನಡೆಯಿತು ಕಮಾಲ್

ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಪಾಪರಾಜಿ ವರೀಂದರ್ ಛಾವ್ಲಾ ಈ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಭಚ್ಚನ್ ಅವರ ಮದುವೆಗೆ ಭಚ್ಚನ್ ಕುಟುಂಬದಿಂದ ಪಾಪರಾಜಿಗಳನ್ನು ಆಹ್ವಾನಿಸಿರಲಿಲ್ಲ ಎಂದು ವರೀಂದರ್ ಛಾವ್ಲಾ ಹೇಳಿದ್ದಾರೆ.

ಅಮಿತಾಭ್ ಮಾಡಿದ ತಪ್ಪಿಗೆ ಇಡೀ ಕುಟುಂಬ ಅನುಭವಿಸಿತ್ತು ತೊಂದರೆ; ರಹಸ್ಯ ಸಭೆಯಿಂದ ನಡೆಯಿತು ಕಮಾಲ್
ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 10, 2024 | 12:06 PM

Share

ಅಭಿಷೇಕ್ ಭಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಅವರ ವಿವಾಹವು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಜೋಡಿ 2007ರಲ್ಲಿ ವಿವಾಹವಾದರು. ಈ ಮದುವೆಯನ್ನು ವಿಶೇಷ ರೀತಿಯಲ್ಲಿ ನೆರವೇರಿಸಲಾಯಿತು. ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಅಭಿಷೇಕ್ ಭಚ್ಚನ್ ಮತ್ತು ಐಶ್ವರ್ಯಾ ರೈ ಮದುವೆಯಾಗಲು ನಿರ್ಧರಿಸಿದರು. ಆ ಕಾಲಕ್ಕೆ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಐಶ್ವರ್ಯಾ ರೈ ಕೂಡ ಒಬ್ಬರು. ಇಡೀ ಮಾಧ್ಯಮಗಳು ಈ ಮದುವೆಯ ಮೇಲೆ ಕಣ್ಣಿಟ್ಟಿದ್ದವು. ಆದರೆ, ಮದುವೆಯಿಂದ ಪಾಪರಾಜಿಗಳನ್ನು ದೂರವೇ ಇಡುವ ಪ್ರಯತ್ನ ನಡೆಯಿತು. ಇದಕ್ಕೆ ಅಮಿತಾಭ್ ಭಾರೀ ದಂಡ ತೆತ್ತಬೇಕಾಯಿತು.

ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಪಾಪರಾಜಿ ವರೀಂದರ್ ಛಾವ್ಲಾ ಈ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಭಚ್ಚನ್ ಅವರ ಮದುವೆಗೆ ಭಚ್ಚನ್ ಕುಟುಂಬದಿಂದ ಪಾಪರಾಜಿಗಳನ್ನು ಆಹ್ವಾನಿಸಿರಲಿಲ್ಲ ಎಂದು ವರೀಂದರ್ ಛಾವ್ಲಾ ಹೇಳಿದ್ದಾರೆ. ಅಷ್ಟೇ ಅಲ್ಲ, ರಸ್ತೆಗಳನ್ನು ಮುಚ್ಚಲಾಗಿತ್ತು. ಆ ಸಮಯದಲ್ಲಿ ಪಾಪರಾಜಿಗಳು ಮನೆಯ ಹೊರಗೆ ಇದ್ದರು.

‘ಫೋಟೋಗಳನ್ನು ಎಲ್ಲಿ ತೆಗೆದುಕೊಳ್ಳಬೇಕೆಂದು ನಮಗೆ ಸರಿಯಾಗಿ ತಿಳಿದಿತ್ತು. ಆ ವೇಳೆ ಪಾಪರಾಜಿಗಳು ಬಾರದಂತೆ ಬಸ್​ನ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಆ ಸಮಯದಲ್ಲಿ, ಪಾಪರಾಜಿಗಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಹಲವಾರು ಪಾಪರಾಜಿಗಳೂ ಗಾಯಗೊಂಡರು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಭಚ್ಚನ್ ಮದುವೆಯ ನಂತರ, ಪಾಪರಾಜಿಗಳು ಭಚ್ಚನ್ ಕುಟುಂಬದೊಂದಿಗೆ ತುಂಬಾ ಅಸಮಾಧಾನಗೊಂಡರು’ ಎಂದಿದ್ದಾರೆ ವರೀಂದರ್.

‘ಭಚ್ಚನ್ ಕುಟುಂಬದ ವಿರುದ್ಧ ಪ್ರತಿಭಟಿಸಲು ಪಾಪರಾಜಿಗಳು ಭಚ್ಚನ್ ಕುಟುಂಬದವರ ಚಿತ್ರಗಳನ್ನು ಕ್ಲಿಕ್ ಮಾಡುವುದನ್ನು ನಿಲ್ಲಿಸಿದರು. ಭಚ್ಚನ್ ಕುಟುಂಬದವರು ಯಾರಾದರೂ ಪ್ರಶಸ್ತಿ ಸಮಾರಂಭ ಅಥವಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ, ಪಾಪರಾಜಿಗಳು ಕ್ಯಾಮೆರಾಗಳನ್ನು ಕೆಳಗೆ ಇಳಿಸುತ್ತಿದ್ದರು. ಏನೇ ಆಗಲಿ ಭಚ್ಚನ್ ಕುಟುಂಬದವರ ಫೋಟೊ ತೆಗೆಯಲಿಲ್ಲ. ಹೇಗೋ ಪಾಪರಾಜಿಗಳು ಪ್ರತಿಭಟಿಸುತ್ತಿದ್ದರು’ ಎಂದಿದ್ದಾರೆ ವರೀಂದರ್.

ಇಷ್ಟೆಲ್ಲ ಆದ ನಂತರ ಅಮಿತಾಭ್​ ಭಚ್ಚನ್ ಪಾಪರಾಜಿ ಜೊತೆ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಅದರ ನಂತರ, ಪಾಪರಾಜಿಗಳು ಭಚ್ಚನ್ ಕುಟುಂಬದವರ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಭಚ್ಚನ್ ಕುಟುಂಬವನ್ನು ಪಾಪರಾಜಿಗಳು ಹಲವು ದಿನಗಳವರೆಗೆ ಹೊರಗೆ ಇಟ್ಟಿದ್ದರು.

ಇದನ್ನೂ ಓದಿ: ಐಶ್ವರ್ಯಾ ರೈಯಿಂದ ಸಲ್ಮಾನ್ ಖಾನ್​ವರೆಗೆ; ಜಾಹೀರಾತುಗಳಿಂದ ಬಣ್ಣದ ಬದುಕು ಆರಂಭಿಸಿದವರು..

ಐಶ್ವರ್ಯಾ ರೈ ಮತ್ತು ಅಭಿಷೇಕ್ ಭಚ್ಚನ್ ಪ್ರಸ್ತುತ ತಮ್ಮ ಸಂಬಂಧದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಭಚ್ಚನ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ನಿರಂತರವಾಗಿ ಕೇಳಿಬರುತ್ತಿದೆ. ಆದರೆ, ಇದರಲ್ಲಿ ನಿಜ ಇಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.