AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಕ್ರಿಕೆಟರ್ ನನಗೆ ಬೆತ್ತಲೆ ಫೋಟೋ ಕಳುಹಿಸಿದ’; ಶೋನಲ್ಲಿ ಟ್ರಾನ್ಸ್​ಜೆಂಡರ್ ಸೆಲೆಬ್ರಿಟಿ ಆರೋಪ

ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್, ಈಗ ಅನಾಯಾ ಎಂಬ ಹೆಸರಿನಿಂದ ಟ್ರಾನ್ಸ್ ಜೆಂಡರ್ ಆಗಿ ಗುರುತಿಸಿಕೊಂಡಿದ್ದಾರೆ.ಅನಾಯಾ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ‘ರೈಸ್ ಆ್ಯಂಡ್ ಫಾಲ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಅನಾಯಾ, ಪ್ರಸಿದ್ಧ ಕ್ರಿಕೆಟರ್ ಒಬ್ಬರು ತಮಗೆ ಬೆತ್ತಲೆ ಚಿತ್ರ ಕಳುಹಿಸಿದ್ದಾರೆಂದು ಬಹಿರಂಗಪಡಿಸಿದ್ದಾರೆ.

‘ಆ ಕ್ರಿಕೆಟರ್ ನನಗೆ ಬೆತ್ತಲೆ ಫೋಟೋ ಕಳುಹಿಸಿದ’; ಶೋನಲ್ಲಿ ಟ್ರಾನ್ಸ್​ಜೆಂಡರ್ ಸೆಲೆಬ್ರಿಟಿ ಆರೋಪ
ಅನಾಯಾ
ರಾಜೇಶ್ ದುಗ್ಗುಮನೆ
|

Updated on:Sep 10, 2025 | 12:39 PM

Share

ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಈಗ ಹುಡುಗಿಯಾಗಿ ಬದಲಾಗಿದ್ದಾರೆ. ಅವರು ತಮ್ಮ ಹೆಸರನ್ನು ಅನಾಯಾ (Anaya)  ಎಂದು ಬದಲಿಸಿಕೊಂಡಿದ್ದಾರೆ. ಅವರು ಅಮೇಜಾನ್ ಎಂಎಕ್ಸ್​​ ಪ್ಲೇಯರ್ ಹೋಸ್ಟ್ ಮಾಡುತ್ತಿರುವ ‘ರೈಸ್ ಆ್ಯಂಡ್ ಫಾಲ್’ ಶೋಗೆ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಅವರಿಗೆ ಕ್ರಿಕೆಟರ್ ಒಬ್ಬರು ಬೆತ್ತಲೆ ಫೋಟೋ ಕಳುಹಿಸಿದ್ದರಂತೆ.

ಅನಾಯಾ ಹುಟ್ಟುವಾಗ ಹುಡುಗನೇ ಆಗಿದ್ದರು. ಆದರೆ, ಬೆಳೆಯುತ್ತಾ ಬಂದಂತೆ ಅವರಲ್ಲಿ ಹಾರ್ಮೋನ್​​ಗಳಲ್ಲಿ ಬದಲಾವಣೆ ಆಗುತ್ತಾ ಬಂತು. ಹೀಗಾಗಿ, ಅವರು ಹುಡುಗಿಯಾಗಿ ಬದಲಾದರು. ಅವರು ಈಗ ರಿಯಾಲಿಟಿ ಶೋ ಮೂಲಕ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅವರು ಒಂದು ವಿಚಾರ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
Image
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ
Image
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
Image
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
Image
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ

‘ನಾನು ನವೆಂಬರ್​ನಲ್ಲಿ ಎಲ್ಲರ ಎದುರು ಕಾಣಿಸಿಕೊಂಡೆ. ಡಿಸೆಂಬರ್-ಜನವರಿ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​ಗಳನ್ನು ಪೋಸ್ಟ್ ಮಾಡಲು ಆರಂಭಿಸಿದೆ. ಮನಸ್ಸಿಗೆ ಏನೆಲ್ಲ ತೋಚುತ್ತದೆಯೋ ಅದನ್ನು ಹಾಕುತ್ತಿದ್ದೆ. ಓರ್ವ ಕ್ರಿಕೆಟರ್ ನನ್ನ ಜೊತೆ ಮಾತನಾಡಲು ಆರಂಭಿಸಿದ’ ಎಂದಿದ್ದಾರೆ ಅನಾಯಾ.

‘ಅವನು ನೇರವಾಗಿ ಆ ರೀತಿಯ ಫೋಟೋ’ ಎಂದು ಅನಾಯಾ ಹೇಳಿದ್ದಾರೆ. ‘ಯಾವ ರೀತಿಯ ಫೋಟೋ? ಬೆತ್ತಲೆ ಫೋಟೋನಾ’ ಎಂದು ಸಹ ಸ್ಪರ್ಧಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅನಾಯಾ ‘ಅರ್ಥ ಮಾಡಿಕೊಳ್ಳಿ’ ಎಂದಿದ್ದಾರೆ. ಮತ್ತೊಬ್ಬರು, ‘ಆ ಕ್ರಿಕೆಟರ್ ಎಲ್ಲರಿಗೂ ಗೊತ್ತಾ’ ಎಂದು ಕೇಳಿದಾಗ, ‘ಅವರು ಎಲ್ಲರಿಗೂ ಗೊತ್ತು’ ಎಂದು ಅನಾಯಾ ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅನಾಯಾ ಅವರಿಗೆ ಬೆತ್ತಲೆ ಫೋಟೋ ಕಳುಹಿಸಿದ ಆ ಕ್ರಿಕೆಟರ್ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಾ ಇದೆ.

ಇದನ್ನೂ ಓದಿ: ಹುಡುಗಿಯಾಗಿ ಬದಲಾದ ಅನಯಾ ಬಂಗಾರ್​ಗೆ ಬಿಗ್ ಶಾಕ್ ನೀಡಿದ ಇಸಿಬಿ

ಅನಾಯಾ ಇಂಗ್ಲೆಂಡ್ ಮಹಿಳಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರು. ಆದರೆ, ಟ್ರಾನ್ಸ್​ಜೆಂಡರ್​ಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿತ್ತು. ಈಗ ಅವರು ರಿಯಾಲಿಟಿ ಶೋಗೆ ಬಂದು ಹೈಲೈಟ್ ಆಗುವ ಪ್ರಯತ್ನದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:38 pm, Wed, 10 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ