ವಿಜಯ್ ದೇವರಕೊಂಡ ಅವರಿಗೆ ಸೌತ್ ಇಂಡಸ್ಟ್ರಿಯಲ್ಲಿನ ಕ್ರೇಜ್ ಇದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ವಿಜಯ್, ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ನಾಯಕನಾಗಿ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ವಿಜಯ್ ಅಭಿನಯದ ‘ಗೀತ ಗೋವಿಂದಂ’, ‘ಟ್ಯಾಕ್ಸಿವಾಲಾ’ ಮೊದಲಾದ ಚಿತ್ರಗಳು ಪ್ರೇಕ್ಷಕರ ಮನಸೂರೆಗೊಂಡವು. ‘ಗೀತ ಗೋವಿಂದಂ’ ವಿಜಯ್ ಅವರ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ. ನಿರ್ದೇಶಕ ಪರಶುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಇತರ ಕಲಾವಿದರಿಗೂ ಬೇಡಿಕೆ ಬಂದಿದೆ.
‘ಗೀತ ಗೋವಿಂದಂ’ ಚಿತ್ರ 2018 ರಲ್ಲಿ ಬಿಡುಗಡೆಯಾಯಿತು ಮತ್ತು ದೊಡ್ಡ ಯಶಸ್ಸನ್ನು ಪಡೆಯಿತು. ಉತ್ತಮ ಆದಾಯವನ್ನೂ ಗಳಿಸಿತ್ತು. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ರಶ್ಮಿಕಾ ಜೊತೆ ಮತ್ತೊಬ್ಬ ಹುಡುಗಿ ಹೆಚ್ಚು ಫೇಮಸ್ ಆದಳು. ಈ ಸಿನಿಮಾದಲ್ಲಿ ವಿಜಯ್ ಪ್ರೀತಿಸುವ ವಿದ್ಯಾರ್ಥಿನಿಯಾಗಿ ನಟಿಸಿದ ಹುಡುಗಿ ನೆನಪಿದೆಯಾ? ಆ ಸುಂದರಿಯ ಹೆಸರು ಅನಿಷಾ ದಾಮಾ. ಈ ಚಿತ್ರದಲ್ಲಿ ತೆರೆ ಮೇಲೆ ಸ್ವಲ್ಪ ಕಾಲ ಕಾಣಿಸಿಕೊಂಡರೂ ತನ್ನ ಗ್ಲಾಮರಸ್ ಲುಕ್ ನಿಂದ ಪ್ರಭಾವ ಬೀರಿದ್ದಾರೆ.
‘ಗೀತಾ ಗೋವಿಂದಂ’ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದರು. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅನಿಷಾ ನಾಯಕಿ ಆಫರ್‌ಗಳಿಗಾಗಿ ಕಾದರು. ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈ ಚೆಲುವೆಗೆ ಹಲವು ಆಫರ್ಗಳು ಸಿಗುತ್ತಿವೆ. ಅವರ ಸಾಮಾಜಿಕ ಜಾಲತಾಣಗಳಲ್ಲಿ ಗ್ಲಾಮರ್ ಫೋಟೋಗಳದ್ದೇ ಸದ್ದು.
ಇದನ್ನೂ ಓದಿ: ನಿಮಗೂ ಕರೆ ಬರಬಹುದು: ವಿಜಯ್ ದೇವರಕೊಂಡ ಎಚ್ಚರಿಕೆ
ಅನಿಷಾಗೆ ಈಗ ಒಂದು ಒಳ್ಳೆಯ ಆಫರ್ ಬಂದಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರೋಬ್ಬರಿ 86 ಸಾವಿರ ಹಿಂಬಾಲಕರು ಇದ್ದಾರೆ. ‘ಗೀತ ಗೋವಿಂದಂ’ ಅವರ ಬಣ್ಣದ ಬದುಕನ್ನೇ ಬದಲಾಯಿಸಿದೆ ಎಂದರೂ ತಪ್ಪಾಗಲಾರದು. ಇನ್ನು, ಟಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ಕೂಡ ‘ಗೀತ ಗೋವಿಂದಂ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:30 am, Sun, 19 January 25