‘ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ’, ತಗಾದೆ ತೆಗೆದ ಹಿರಿಯ ನಟ

Ramayana movie: ‘ರಾಮಾಯಣ’ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇದೀಗ ಹಿರಿಯ ನಟರೊಬ್ಬರು, ಸೀತೆ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ತಕರಾರು ತೆಗೆದಿದ್ದಾರೆ. ನಿರ್ದೇಶಕರ ಆಯ್ಕೆಯನ್ನು ಪ್ರಶ್ನೆ ಮಾಡಿದ್ದಾರೆ.

‘ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ’, ತಗಾದೆ ತೆಗೆದ ಹಿರಿಯ ನಟ
Ramayana Movie

Updated on: Jul 19, 2026 | 10:47 PM

ರಾಮಾಯಣ’ (Ramayana) ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇದೀಗ ಹಿರಿಯ ನಟರೊಬ್ಬರು, ಸೀತೆ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ತಕರಾರು ತೆಗೆದಿದ್ದಾರೆ. ನಿರ್ದೇಶಕರ ಆಯ್ಕೆಯನ್ನು ಪ್ರಶ್ನೆ ಮಾಡಿದ್ದಾರೆ.

‘ರಾಮಾಯಣ’ ಕತೆ ಸಿನಿಮಾ ಆಗುತ್ತಿದೆ ಎಂದರೆ ವಿಮರ್ಶಕರು, ಟೀಕಾಕಾರರು, ಸಂಸ್ಕೃತಿ ರಕ್ಷಕರು ಗಲ್ಲಿಗೆ ಒಬ್ಬೊಬ್ಬರು ಹುಟ್ಟಿಕೊಳ್ಳುತ್ತಾರೆ. ಈ ಬಾರಿಯೂ ಅದೇ ಆಗುತ್ತಿದೆ. ಹಿಂದಿ ಚಿತ್ರರಂಗದ ಹಿರಿಯ ನಟರೊಬ್ಬರು, ‘ರಾಮಾಯಣ’ ಸಿನಿಮಾದ ಬಗ್ಗೆ ಅಸಮಾಧಾನ ಹೊರಹಾಕುವ ಜೊತೆಗೆ ಸಾಯಿ ಪಲ್ಲವಿ ಅವರನ್ನು ಸೀತಾಮಾತೆಯ ಪಾತ್ರಕ್ಕೆ ಆಯ್ಕೆ ಮಾಡಿರುವ ಬಗ್ಗೆಯೂ ತಕರಾರು ತೆಗೆದಿದ್ದಾರೆ.

ಹಲವು ಧಾರಾವಾಹಿ, ಸಿನಿಮಾ, ಜಾಹೀರಾತುಗಳಲ್ಲಿ ನಟಿಸಿರುವ ನಟ ಅನ್ನು ಕಪೂರ್, ಸಾಯಿ ಪಲ್ಲವಿ ಬಗ್ಗೆ ತಗಾದೆ ತೆಗೆದಿದ್ದಾರೆ. ಮಾಧ್ಯಮದ ಜೊತೆಗೆ ಮಾತನಾಡಿದ ಅನ್ನು ಕಪೂರ್, ‘ರಾಮಾಯಣ’ ಸಿನಿಮಾ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದರು ಮತ್ತು ಇದು ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಚಿತ್ರವು ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆಯೇ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು. ನಂತರ ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿಯವರ ಆಯ್ಕೆಯ ಬಗ್ಗೆ ಮಾತನಾಡಿ, ಇಂತಹ ಐಕಾನಿಕ್ ಪಾತ್ರಗಳೊಂದಿಗೆ ಸಂಬಂಧ ಹೊಂದಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಚಿತ್ರ ನಿರ್ಮಾಪಕರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದರು.

ಇದನ್ನೂ ಓದಿ:ಮತ್ತೊಂದು ಸಿನಿಮಾ ಕಳೆದುಕೊಂಡರೆ ನಟಿ ಸಾಯಿ ಪಲ್ಲವಿ?

“ಆದರೆ ನೀವು ಸೀತಾ ಪಾತ್ರಕ್ಕಾಗಿ ಯಾರನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸೀತಾ ದೇವಿಯನ್ನು ತಾಯಿಯಂತೆ ಪೂಜಿಸಲಾಗುತ್ತದೆ. ಈ ದೇಶದ ಜನರು ಭಗವಾನ್ ರಾಮನನ್ನು ನಾರಾಯಣನ ಅವತಾರವೆಂದು ಪೂಜಿಸುತ್ತಾರೆ. ಈ ಕಾಸ್ಟಿಂಗ್ ಸಾಕಷ್ಟು ಪ್ರಶ್ನಾರ್ಹವಾಗಿದೆ. ಮೊದಲು ಚಿತ್ರ ಬಿಡುಗಡೆಯಾಗಲಿ, ಆಮೇಲೆ ಇನ್ನಷ್ಟು ಚರ್ಚೆ ಆಗಲಿದೆ” ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅರು, ಇದು ರಾಮಾನಂದ ಸಾಗರ್ ಅವರ ಜನಪ್ರಿಯ ದೂರದರ್ಶನ ಧಾರಾವಾಹಿಯ ತಾಂತ್ರಿಕವಾಗಿ ಸುಧಾರಿತ ಮತ್ತು ಭವ್ಯವಾದ ಆವೃತ್ತಿಯಾಗಿರುತ್ತದೆ ಎಂದರು. ‘ಅವರು ಏನು ಮಾಡಿದರೂ, ರಾಮಾನಂದ ಸಾಗರ್ ಅವರ ರಾಮಾಯಣವನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಿ ಅದರ ವ್ಯಾಪ್ತಿಯನ್ನು ಹೆಚ್ಚಿಸುತ್ತಾರಷ್ಟೆ’ ಎಂದು ಅವರು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ‘ರಾಮಾಯಣ’ ಸಿನಿಮಾ ಭಾರತದಲ್ಲಿ ಈ ವರೆಗೆ ನಿರ್ಮಾಣ ಆಗಿರುವ ಸಿನಿಮಾಗಳಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾದ ಎರಡು ಭಾಗಗಳಿಗೆ ಒಟ್ಟು 4000 ಕೋಟಿ ರೂಪಾಯಿ ಬಜೆಟ್ ಹೂಡಿಕೆ ಮಾಡಲಾಗಿದೆಯಂತೆ. ಈ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 pm, Sun, 19 July 26

Follow Us