AR Ameen: ಕೂದಲೆಳೆ ಅಂತರದಲಲ್ಲಿ ಪಾರಾದ ರೆಹಮಾನ್ ಪುತ್ರ, ಶಾಕ್​ನಿಂದ ಹೊರಬರಲಾಗುತ್ತಿಲ್ಲವೆಂದು ಅಳಲು

ಎ.ಆರ್.ರೆಹಮಾನ್ ಪುತ್ರ ಎಆರ್ ಅಮೀನ್ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

AR Ameen: ಕೂದಲೆಳೆ ಅಂತರದಲಲ್ಲಿ ಪಾರಾದ ರೆಹಮಾನ್ ಪುತ್ರ, ಶಾಕ್​ನಿಂದ ಹೊರಬರಲಾಗುತ್ತಿಲ್ಲವೆಂದು ಅಳಲು
ಎಆರ್ ಅಮೀನ್
Follow us
ಮಂಜುನಾಥ ಸಿ.
|

Updated on:Mar 05, 2023 | 8:29 PM

ಆಸ್ಕರ್ (Oscar) ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (AR Rahaman) ಪುತ್ರ ಎಆರ್ ಅಮೀನ್ (AR Ameen) ಭೀಕರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದು, ಆ ಶಾಕ್​ನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

”ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಹಾಗೂ ನನ್ನ ಆಧ್ಯಾತ್ಮಿಕ ಗುರುಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರ ಹಾರೈಕೆಗಳಿಂದಲೇ ನಾನು ಇಂದು ಜೀವಂತವಾಗಿದ್ದೇನೆ. ಮೂರು ದಿನಗಳ ಹಿಂದೆ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ತಂಡ ವಹಿಸಿದ್ದ ಸುರಕ್ಷತಾ ಕ್ರಮಗಳ ಮೇಲೆ ನಂಬಿಕೆ ಇಟ್ಟು ವೇದಿಕೆ ಏರಿ ಕ್ಯಾಮೆರಾ ನೋಡುತ್ತಾ ನಾನು ನನ್ನ ಪರ್ಫಾಮೆನ್ಸ್ ಕಡೆ ಗಮನ ವಹಿಸಿದ್ದೆ. ಆಗ ಕ್ರೇನ್​ಗೆ ಕಟ್ಟಲಾಗಿದ್ದ ರಿಗ್, ಜೂಮರ್ ಇತ್ಯಾದಿಗಳು ಕೆಳಗೆ ಬಿದ್ದವು. ಕೆಲವು ಇಂಚು ಹಿಂದೆ-ಮುಂದೆ ಅಥವಾ ಕೆಲವು ಸೆಕೆಂಡ್ ತಡವಾಗಿದ್ದರೂ ಆ ಕಬ್ಬಿಣದ ರಿಗ್, ಗಾಜಿನ ಜೂಮರ್ ನೇರವಾಗಿ ನನ್ನ ತಲೆಯ ಮೇಲೆ ಬೀಳುತ್ತಿತ್ತು. ಈ ಅಪಘಾತದ ಆಘಾತದಿಂದ ನಾನು ಹಾಗೂ ನನ್ನ ತಂಡ ಶಾಕ್​ಗೆ ಒಳಗಾಗಿದ್ದೇವೆ. ಅದರಿಂದ ಹೊರಬರಲು ನಮಗೆ ಆಗುತ್ತಿಲ್ಲ ಎಂದು ಅಮೀನ್ ಬರೆದುಕೊಂಡಿದ್ದಾರೆ.

ಘಟನೆಯ ಕೆಲವು ಚಿತ್ರಗಳನ್ನು ಅಮೀನ್ ಹಂಚಿಕೊಂಡಿದ್ದು, ಕ್ರೇನ್​ಗೆ ಕಟ್ಟಲಾಗಿದ್ದ ಕಬ್ಬಿಣದ ಸ್ಟ್ಯಾಂಡ್ ವೇದಿಕೆ ಮೇಲೆ ಬಿದ್ದಿದೆ. ಅದನ್ನು ಹಿಡಿದುಕೊಂಡಿದ್ದ ಕ್ರೇನ್​ನ ಭಾಗವೂ ವೇದಿಕೆಗೆ ಬಿದ್ದಿದೆ. ಕ್ರೇನ್​ಗೆ ಕಟ್ಟಲಾಗಿದ್ದ ಗಾಜಿನ ಜೂಮರ್​ಗಳು ಸಹ ವೇದಿಕೆ ಮೇಲೆ ಬಿದ್ದು ಪುಡಿ-ಪುಡಿ ಆಗಿವೆ. ಘಟನೆಗೆ ಮುಂಚಿನ ಹಾಗೂ ಘಟನೆಯ ಬಳಿಕದ ಚಿತ್ರಗಳನ್ನು ಅಮೀನ್ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಅಮೀನ್ ಹಾಡುಗಾರರಾಗಿದ್ದು ಈಗಾಗಲೇ ಮೂರು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ತಂದೆ ಎ.ಆರ್.ರೆಹಮಾನ್ ಸಂಗೀತ ನೀಡಿರುವ ಒಂದು ಇಂಗ್ಲೀಷ್ ಸಿನಿಮಾ ಸೇರಿದಂತೆ ತಮಿಳು, ಹಿಂದಿ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಬೇರೆ ಸಂಗೀತ ನಿರ್ದೇಶಕರ ಹಾಡುಗಳಿಗೂ ದನಿ ನೀಡಿದ್ದಾರೆ. ಲೈವ್ ಕಾನ್ಸರ್ಟ್​ಗಳನ್ನು ಸಹ ನೀಡುತ್ತಾರೆ. ಇದೀಗ ತಮ್ಮದೇ ಹೊಸ ಆಲ್ಬಂಗಾಗಿ ಚಿತ್ರೀಕರಣ ಮಾಡುವಾಗ ಈ ಅವಘಡ ಸಂಭವಿಸಿದೆ.

ಅಮೀನ್​ರ ಪೋಸ್ಟ್​ಗೆ ಸ್ಪಂದಿಸಿರುವ ಕೆಲವು ಸೆಲೆಬ್ರಿಟಿಗಳು ದೇವರಿಗೆ ಧನ್ಯವಾದ ಹೇಳಿದ್ದಾರೆ. ಹೆಚ್ಚು ಜಾಗರೂಕರಾಗಿರುವಂತೆ ಸಲಹೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sun, 5 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್