- Kannada News Photo gallery Tunisha Sharma Death Case: Sheezan Khan gets bail after 70 days of arrest
Sheezan Khan: ತುನಿಶಾ ಶರ್ಮಾ ಸಾವಿನ ಕೇಸ್: 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶೀಜಾನ್ ಖಾನ್
Tunisha Sharma | Sheezan Khan: ತುನಿಶಾ ಶರ್ಮಾ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. 70 ದಿನ ಜೈಲಿನಲ್ಲಿದ್ದ ಅವರಿಗೆ ಈಗ ಜಾಮೀನು ಸಿಕ್ಕಿದೆ.
Updated on:Mar 05, 2023 | 5:34 PM

‘ಅಲಿಬಾಬಾ’ ಧಾರಾವಾಹಿ ಖ್ಯಾತಿಯ ನಟಿ ತುನಿಶಾ ಶರ್ಮಾ ಅವರ ಸಾವಿನ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟ ಶೀಜಾನ್ ಖಾನ್ ಅವರಿಗೆ ಜಾಮೀನು ಸಿಕ್ಕಿದೆ. ಸದ್ಯಕ್ಕೆ ಅವರು ನಿಟ್ಟುಸಿರು ಬಿಡುವಂತಾಗಿದೆ.

2022ರ ಡಿಸೆಂಬರ್ನಲ್ಲಿ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. 70 ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ಜಾಮೀನು ಪಡೆದು ಹೊರಬಂದ ಅವರನ್ನು ಕುಟುಂಬದವರು ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ಶೀಜಾನ್ ಖಾನ್ ಅವರಿಗೆ ಶನಿವಾರ (ಮಾರ್ಚ್ 4) ಜಾಮೀನು ಸಿಕ್ಕಿತು. ಜೈಲಿನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಅವರು ಭಾನುವಾರ (ಮಾ.5) ಹೊರಬಂದಿದ್ದಾರೆ. ತಮ್ಮ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ತುನಿಶಾ ಶರ್ಮಾ ಮತ್ತು ಶೀಜಾನ್ ಖಾನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ನಡುವೆ ವೈಮನಸ್ಸು ಮೂಡಿತ್ತು. ಬ್ರೇಕಪ್ ಮಾಡಿಕೊಂಡ ಕೆಲವೇ ದಿನಗಳಲ್ಲಿ ತುನಿಶಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು.

ತುನಿಶಾ ಶರ್ಮಾ ಅವರ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು 524 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶೀಜಾನ್ ಅವರಿಗೆ ಕೊಂಚ ರಿಲೀಫ್ ಸಿಕ್ಕಿದೆ.
Published On - 5:34 pm, Sun, 5 March 23



















