Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರಿಯಲ್ ನಟಿಯ ಗಂಡನ ಸಾವಿಗೆ ಕಾರಣವಾಯ್ತಾ ಕೆಟ್ಟ ಚಟ? ಬೇಸರ ಹೊರಹಾಕಿದ ಶ್ರುತಿ 

shruti shanmugapriya: ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟರೆ ಶಾಕ್ ಆಗೋದು ಸಹಜ. ಅರವಿಂದ್ ವಿಚಾರದಲ್ಲೂ ಹಾಗೇಯೇ ಆಗಿದೆ. ಉತ್ತಮ ಬಾಡಿ ಬಿಲ್ಡರ್ ಆಗಿದ್ದ ಅರವಿಂದ್ ಕೆಟ್ಟ ಚಟಗಳಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ.

ಸೀರಿಯಲ್ ನಟಿಯ ಗಂಡನ ಸಾವಿಗೆ ಕಾರಣವಾಯ್ತಾ ಕೆಟ್ಟ ಚಟ? ಬೇಸರ ಹೊರಹಾಕಿದ ಶ್ರುತಿ 
ಶ್ರುತಿ-ಅರವಿಂದ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 06, 2023 | 7:22 AM

ತಮಿಳಿನ ಜನಪ್ರಿಯ ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯಾ (shruti shanmugapriya) ಅವರ ಪತಿ ಅರವಿಂದ್ ಶೇಖರ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಅರವಿಂದ್​ಗೆ ಕೇಲವ 30 ವರ್ಷ ವಯಸ್ಸು. ಇಬ್ಬರೂ ಕಳೆದ ವರ್ಷ ವಿವಾಹ ಆಗಿದ್ದರು. ಈ ಹಿನ್ನೆಲೆಯಲ್ಲಿ ಅನೇಕರು ನಟಿ ಶ್ರುತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವ ಪೋಸ್ಟ್​ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಅರವಿಂದ್​ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕೆಲವು ಯೂಟ್ಯೂಬ್ ಚಾನೆಲ್‌ಗಳು, ವೆಬ್‌ಸೈಟ್‌ಗಳು ಮತ್ತು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅರವಿಂದ್ (Aravind Sekhar) ಸಾವಿನ ಬಗ್ಗೆ ತಪ್ಪಾಗಿ ಮಾಹಿತಿ ಹಂಚಲಾಗುತ್ತಿದೆ. ಇದಕ್ಕೆ ಶ್ರುತಿ ಬೇಸರ ಹೊರಹಾಕಿದ್ದಾರೆ.

ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟರೆ ಶಾಕ್ ಆಗೋದು ಸಹಜ. ಅರವಿಂದ್ ವಿಚಾರದಲ್ಲೂ ಹಾಗೇಯೇ ಆಗಿದೆ. ಉತ್ತಮ ಬಾಡಿ ಬಿಲ್ಡರ್ ಆಗಿದ್ದ ಅರವಿಂದ್ ಕೆಟ್ಟ ಚಟಗಳಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಈಗಾಗಲೇ ಪತಿಯ ಸಾವಿನ ದುಃಖದಲ್ಲಿರುವ ಶ್ರುತಿ ಮತ್ತು ಅರವಿಂದ್ ಕುಟುಂಬಸ್ಥರು ಈ ಸುದ್ದಿಗಳಿಂದ ಮತ್ತಷ್ಟು ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಪತಿಯ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.

‘ಸದ್ಯ ನಾನು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದೇನೆ. ನನಗೆ ಸಾಂತ್ವನ ಹೇಳಲು ಅನೇಕರು ಕರೆ ಮಾಡಿದ್ದಾರೆ, ಸಂದೇಶ ಕಳುಹಿಸುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಮತ್ತು ಧನ್ಯವಾದಗಳು. ಈ ಸಮಯದಲ್ಲಿ ಎಲ್ಲಾ ಯೂಟ್ಯೂಬ್​ ಚಾನೆಲ್‌ಗಳು ಮತ್ತು ಮಾಧ್ಯಮಗಳಿಗೆ ನನ್ನದೊಂದು ವಿನಂತಿ. ನನ್ನ ಪತಿ ಹೃದಯಾಘಾತದಿಂದ ನಿಧನರಾದರು. ಇದನ್ನು ವೈದ್ಯರು ಕೂಡ ದೃಢಪಡಿಸಿದ್ದಾರೆ. ಆದರೆ ಸತ್ಯಾಂಶ ತಿಳಿಯದೆ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾವೆಲ್ಲರೂ ಈಗ ದುಃಖದಲ್ಲಿದ್ದೇವೆ. ಇಂತಹ ಸಮಯದಲ್ಲಿ ನಿಮ್ಮ ಅಭಿಪ್ರಾಯ ಮತ್ತು ಇಷ್ಟಗಳಿಗಾಗಿ ನಮಗೆಈ ರೀತಿ ಕಿರುಕುಳ ನೀಡಬೇಡಿ’ ಎಂದು ಶ್ರುತಿ ವಿನಂತಿಸಿದ್ದಾರೆ.

ಇದನ್ನೂ ಓದಿ: ವಿಧಿ ತುಂಬಾ ಕ್ರೂರ; ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ಕಿರುತೆರೆ ನಟಿ ಶ್ರುತಿ

ತಮಿಳಿನ ಹಲವು ಧಾರಾವಾಹಿಗಳಲ್ಲಿ ಶ್ರುತಿ ನಟಿಸಿದ್ದಾರೆ. ಅವರ ಪತಿ ಅರವಿಂದ್ ಶೇಖರ್ ಕೂಡ 2022ರಲ್ಲಿ ‘ಮಿಸ್ಟರ್ ತಮಿಳುನಾಡು’ ಎಂಬ ಪಟ್ಟ ಪಡೆದಿದ್ದರು. ಅವರು ಉತ್ತಮ ಬಾಡಿ ಬಿಲ್ಡರ್ ಆಗಿದ್ದರು. ಫಿಟ್ನೆಸ್ ಕೋಚಿಂಗ್​ ಕೂಡ ನೀಡುತ್ತಿದ್ದರು. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅರವಿಂದ್ ಬುಧವಾರ (ಆಗಸ್ಟ್ 2) ಸಂಜೆ ಹೃದಯಾಘಾತದಿಂದ ನಿಧನರಾದರು.

ಕಳೆದ ವರ್ಷ ನಡೆದಿತ್ತು ಮದುವೆ

ಅರವಿಂದ್ ಹಾಗೂ ಶ್ರುತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ಶ್ರುತಿ ಮತ್ತು ಅರವಿಂದ್ ವಿವಾಹವಾಗಿದ್ದರು. ಶ್ರುತಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬಗೆಯ ಪೋಸ್ಟ್​​ಗಳನ್ನು ಅವರು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:21 am, Sun, 6 August 23

ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ