ಐವತ್ತೇಳನೇ ವಯಸ್ಸಿಗೆ ತಂದೆ ಆದ ಸಲ್ಲು ಸಹೋದರ; ಖುಷಿಯಿಂದ ಹೇಳಿಕೊಂಡ ಅರ್ಬಾಜ್  

57 ವರ್ಷದ ಅರ್ಬಾಜ್ ಖಾನ್ ಮತ್ತು ಅವರ ಪತ್ನಿ ಶುರಾ ಖಾನ್ ಅವರು ತಮ್ಮ ಮಗುವಿನ ಆಗಮನದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಹಲವು ವದಂತಿಗಳ ನಂತರ ಈ ದಂಪತಿಗಳು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅರ್ಬಾಜ್ ಅವರು ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಉತ್ಸುಕರಾಗಿದ್ದಾರೆ.

ಐವತ್ತೇಳನೇ ವಯಸ್ಸಿಗೆ ತಂದೆ ಆದ ಸಲ್ಲು ಸಹೋದರ; ಖುಷಿಯಿಂದ ಹೇಳಿಕೊಂಡ ಅರ್ಬಾಜ್  
ಅರ್ಬಾಜ್-ಶುರಾ

Updated on: Jun 11, 2025 | 12:52 PM

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್​ಗೆ (Arbaz Khan) ಈಗ 57 ವರ್ಷ. ಅವರು ಕಳೆದ ಡಿಸೆಂಬರ್​ನಲ್ಲಿ ಶುರಾ ಖಾನ್ ಅವರನ್ನು ವಿವಾಹ ಆದರು. ಈಗ ಈ ದಂಪತಿಗೆ ಮಗು ಜನಿಸುತ್ತಿದೆ. ಈ ವಿಚಾರವನ್ನು ದಂಪತಿ ಅಧಿಕೃತ ಮಾಡಿದ್ದಾರೆ. ಪ್ರೆಗ್ನೆನ್ಸಿ ವಿಚಾರದ ಬಗ್ಗೆ ಇಷ್ಟು ದಿನಗಳ ಕಾಲ ನಾನಾ ವದಂತಿಗಳು ಹಬ್ಬಿದ್ದವು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಂತೆ ಆಗಿದೆ. ಅನೇಕರು ಅರ್ಬಾಜ್ 57ನೇ ವಯಸ್ಸಿಗೆ ತಂದೆ ಆಗುತ್ತಿದ್ದಾರೆ ಎಂಬ ವಿಚಾರ ತಿಳಿದು ಅಚ್ಚರಿ ಹೊರ ಹಾಕಿದ್ದಾರೆ.

ಇತ್ತೀಚೆಗೆ ಶುರಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅನೇಕರ ಗಮನ ಅವರ ಹೊಟ್ಟೆಯ ಮೇಲೆ ಹೋಗಿತ್ತು. ಅವರು ಪ್ರೆಗ್ನೆಂಟ್ ಎಂದು ಹೇಳಿದ್ದರು. ಆದರೆ, ಈ ಬಗ್ಗೆ ದಂಪತಿ ಮೌನ ವಹಿಸಿದ್ದರು. ಅನೇಕರು ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು. ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿ ಅರ್ಬಾಜ್ ಹಾಗೂ ಶುರಾ ಸ್ಪಷ್ಟನೆ ನಿಡಿದ್ದಾರೆ.

‘ಮೊದಲ ಮಗುವಿನ ನಿರೀಕ್ಷೆಯಲ್ಲಿ ನೀವಿದ್ದೀರಂತೆ’ ಎಂದು ಶುರಾ ಹಾಗೂ ಅರ್ಬಾಜ್​ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅರ್ಬಾಜ್, ‘ಹೌದು ಹಾಗೊಂದು ಸುದ್ದಿ ಇದೆ. ನಾನು ಅದನ್ನು ತಳ್ಳಿ ಹಾಕುತ್ತಿಲ್ಲ. ನನ್ನ ಕುಟುಂಬಕ್ಕೆ ಈ ಬಗ್ಗೆ ಗೊತ್ತು. ಜನರಿಗೂ ಅದು ತಿಳಿದಿದೆ ಎಂದರೆ ನನಗೇನು ಸಮಸ್ಯೆ ಇಲ್ಲ. ನಮ್ಮ ಜೀವನದಲ್ಲಿ ಇದು ಖುಷಿಯ ವಿಚಾರ. ನಾವು ಎಗ್ಸೈಟ್ ಆಗಿದ್ದೇವೆ. ನಾವು ನಮ್ಮ ಜೀವನಕ್ಕೆ ಹೊಸ ಜೀವವನ್ನು ಕರೆದು ತರುತ್ತಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ
23 ವರ್ಷ ಕಿರಿಯ ನಟಿಯಿಂದ ಪತ್ನಿ ಪಾತ್ರ; ಸ್ಪಷ್ಟಪಡಿಸಿದ ಆಮಿರ್
ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಓಪನ್​ ಟ್ರೋಲ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್​ಗೆ ಜಾಮೀನು, ಬಿಡುಗಡೆ ಅನುಮಾನ

‘ನಿಮಗೆ ನರ್ವಸ್​ನೆಸ್ ಇದೆಯಾ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಸಿದ ಅವರು, ‘ಈ ಸಮಯಕ್ಕೆ ಎಲ್ಲರೂ ನರ್ವಸ್ ಆಗಿರುತ್ತಾರೆ. ಸ್ವಲ್ಪ ಸಮಯದ ನಂತರ ನಾನು ತಂದೆಯಾಗುತ್ತಿದ್ದೇನೆ. ಇದು ನನಗೆ ಮತ್ತೆ ಹೊಸ ಅನುಭವ. ನಾನು ಉತ್ಸುಕನಾಗಿದ್ದೇನೆ. ನಾನು ಸಂತೋಷವಾಗಿದ್ದೇನೆ. ಇದು ನನಗೆ ಹೊಸ ಜವಾಬ್ದಾರಿಯ ಭಾವನೆ ನೀಡಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 57ನೇ ವಯಸ್ಸಿಗೆ ತಂದೆ ಆಗುತ್ತಿದ್ದಾರೆ ಸಲ್ಲು ಸಹೋದರ ಅರ್ಬಾಜ್ ಖಾನ್

ಅರ್ಬಾಜ್ ಖಾನ್ ಅವರು ಈ ಮೊದಲು ಮಲೈಕಾ ಅರೋರಾ ಅವರನ್ನು ವಿವಾಹ ಆದರು. ಈ ದಂಪತಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಅರ್ಹಾನ್ ಶೀಘ್ರವೇ ಬಾಲಿವುಡ್​ಗೆ ಪಾದರ್ಪಣೆ ಮಾಡಲಿದ್ದಾರೆ. ಅರ್ಹಾನ್ ಬೆಳೆಸೋ ಜವಾಬ್ದಾರಿಯನ್ನು ಇಬ್ಬರೂ ಪಡೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.