57ನೇ ವಯಸ್ಸಿಗೆ ತಂದೆ ಆಗುತ್ತಿದ್ದಾರೆ ಸಲ್ಲು ಸಹೋದರ ಅರ್ಬಾಜ್ ಖಾನ್
Arbaz Khan: ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಒಂದೂವರೆ ವರ್ಷಗಳ ಮದುವೆಯ ನಂತರ ಈ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ. ಶುರಾ ಖಾನ್ ಅವರ ಗರ್ಭಿಣಿ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಸುದ್ದಿ ಬಾಲಿವುಡ್‌ನಲ್ಲಿ ಸಂತೋಷದ ಅಲೆಯನ್ನು ತಂದಿದೆ. ಅರ್ಬಾಜ್ ಖಾನ್ 57ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ.

ನಟಿ ಮಲೈಕಾ ಅರೋರಾ ಅವರಿಗೆ ವಿಚ್ಛೇದನ ನೀಡಿದ ನಂತರ, ಅರ್ಬಾಜ್ ಖಾನ್ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಆದರೆ, ಹೆಚ್ಚು ದಿನ ಅವರು ಒಂಟಿಯಾಗಿ ಇರೋಕೆ ಸಾಧ್ಯವಾಗಿಲ್ಲ. 2023ರ ಡಿಸೆಂಬರ್ನಲ್ಲಿ ಅವರು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ವಿವಾಹ ಆದರು. ಇದು ಅವರಿಗೆ ಎರಡನೇ ಮದುವೆ. ಈಗ ಇವರು ಹೊಸ ಸುದ್ದಿ ನೀಡಲು ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ.
ಅರ್ಬಾಜ್ ಹಾಗೂ ಶುರಾ ಜೊತೆ ಹೊಸ ಜೀವನ ನಡೆಸುತ್ತಿದ್ದಾರೆ. ಇಬ್ಬರೂ ತಮ್ಮ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆಂದು ತೋರುತ್ತದೆ. ಈಗ ಒಂದೂವರೆ ವರ್ಷಗಳ ಮದುವೆಯ ನಂತರ ಶುರಾ ಒಳ್ಳೆಯ ಸುದ್ದಿ ನೀಡಿದ್ದಾರೆ. ಖಾನ್ ಕುಟುಂಬಕ್ಕೆ ಶೀಘ್ರದಲ್ಲೇ ಒಬ್ಬ ಪುಟ್ಟ ಸದಸ್ಯ ಬರಲಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಶುರಾ ಖಾನ್ ಗರ್ಭಿಣಿ ಎಂಬ ಬಲವಾದ ವದಂತಿಗಳು ಹಬ್ಬಿದ್ದವು. ಆದರೆ ಅವರಿಬ್ಬರೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಶುರಾ ತಾವು ಗರ್ಭಿಣಿ ಎಂಬುದಕ್ಕೆ ನೇರ ಪುರಾವೆ ನೀಡಿದ್ದಾರೆ.
ಮಂಗಳವಾರ, ಮುಂಬೈನ ಅಂಗಡಿಯೊಂದರ ಹೊರಗೆ ಶುರಾ ಕಾಣಿಸಿಕೊಂಡರು. ಈ ಬಾರಿ ಅವರು ಕಡು ನೀಲಿ ಬಣ್ಣದ ಬಾಡಿಕಾನ್ ಡ್ರೆಸ್ ಮತ್ತು ಅದರ ಮೇಲೆ ಡೆನಿಮ್ ಜಾಕೆಟ್ ಧರಿಸಿದ್ದರು. ಈ ಡ್ರೆಸ್‌ನಲ್ಲಿ, ಅವರ ಮಗುವಿನ ಉಬ್ಬು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಇದನ್ನೂ ಓದಿ:ವಿಜಯೇಂದ್ರ ಮತ್ತು ನಾನು ಬೇರೆ ಬೇರೆ ಪಕ್ಷದವರಾಗಿದ್ದರೂ ಸಮುದಾಯದ ವಿಷಯದಲ್ಲಿ ಒಂದೇ: ಎಂಬಿ ಪಾಟೀಲ್
ಈ ಸಮಯದಲ್ಲಿ, ಶುರಾ ಬಹಳ ಎಚ್ಚರಿಕೆಯಿಂದ ನಡೆಯುತ್ತಿರುವುದು ಕಂಡುಬಂದಿದೆ. ಅರ್ಬಾಜ್ ಖಾನ್ ಈ ಒಳ್ಳೆಯ ಸುದ್ದಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಅರ್ಬಾಜ್ 1998 ರಲ್ಲಿ ಮಲೈಕಾ ಅವರನ್ನು ವಿವಾಹವಾದರು. ಇಬ್ಬರಿಗೂ ಅರ್ಹಾನ್ ಎಂಬ ಮಗನಿದ್ದಾನೆ. ಕೆಲ ವರ್ಷಗಳ ಹಿಂದೆ ಇವರು ಬೇರೆ ಆದರು.
ಶುರಾ ಖಾನ್ ಅವರಿಗೂ ಚಿತ್ರರಂಗದ ಜೊತೆ ನಂಟಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಅವರ ಮಗಳು ರಾಶಾ ತಡಾನಿ ಅವರ ಮೇಕಪ್ ಆರ್ಟಿಸ್ಟ್ ಆಗಿ ಶುರಾ ಕಾರ್ಯನಿರ್ವಹಿಸುತ್ತಿದ್ದಾರೆ. ‘ಪಾಟ್ನಾ ಶುಕ್ಲಾ’ ಸಿನಿಮಾದಲ್ಲಿ ಅರ್ಬಾಜ್ ಹಾಗೂ ರವೀನಾ ಒಟ್ಟಾಗಿ ನಟಿಸಿದ್ದರು. ಆಗ ಶುರಾ ಅವರನ್ನು ಭೇಟಿ ಆಗಿದ್ದರು ಅರ್ಬಾಜ್. ಇಬ್ಬರ ಮಧ್ಯೆ ಪ್ರೀತಿ ಬೆಳೆಯಿತು. ನಂತರ ಮದುವೆ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



