ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?

ಪ್ರಸಿದ್ಧ ನಟ ಆಶಿಶ್ ವಿದ್ಯಾರ್ಥಿ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಅವರು ಫುಡ್ ವ್ಲಾಗಿಂಗ್‌ನಲ್ಲಿ ತೊಡಗಿದ್ದಾರೆ. 'ಎಕೆ-47', 'ವಂದೇ ಮಾತರಂ', 'ಬಚ್ಚನ್' ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ವಿವಿಧ ನಗರಗಳಲ್ಲಿ ವಿಶೇಷ ತಿಂಡಿಗಳನ್ನು ಹುಡುಕಿ ಹೋಗುತ್ತಾರೆ.

ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?
ಆಶಿಶ್
Edited By:

Updated on: Jun 19, 2025 | 7:47 AM

ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಬಗ್ಗೆ ಅನೇಕರಿಗೆ ತಿಳಿದಿದೆ. ಅವರಿಗೆ ಇಂದು (ಜೂನ್ 19) ಜನ್ಮದಿನ. ಅವರು 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಶಿಶ್ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಅವರು ಇತ್ತೀಚೆಗೆ ನಟನೆಯ ಜೊತೆಗೆ ಫುಡ್​ವ್ಲಾಗ್ ಕೂಡ ಮಾಡುತ್ತಿದ್ದಾರೆ. 90ರ ದಶಕದಿಂದ ನಟನೆಯಲ್ಲಿ ಬ್ಯುಸಿ ಇರೋ ಅವರು ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ಅವರು ಫುಡ್​ ವ್ಲಾಗರ್ ಆಗಲು ಕಾರಣ ತಿಂಡಿ ಬಗ್ಗೆ ಅವರಿಗೆ ಇರೋ ಪ್ರೀತಿ.

1991ರಲ್ಲಿ ‘ಕಾಲ್ ಸಂಧ್ಯಾ’ ಹೆಸರಿನ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ಮೊದಲು ಕನ್ನಡಕ್ಕೆ ಕಾಲಿಟ್ಟಿದ್ದು 1999ರ ‘ಎಕೆ-47’ ಚಿತ್ರದ ಮೂಲಕ. ಆ ಬಳಿಕ ‘ವಂದೇ ಮಾತರಂ’, ‘ಕೋಟಿಗೊಬ್ಬ’, ‘ದುರ್ಗಿ’, ‘ಸುಂಟರಗಾಳಿ’ ರೀತಿಯ ಹಲವು ಸಿನಿಮಾಗಳನ್ನು ಮಾಡಿದರು. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲ ಚ್ಯೂಸಿ ಆಗಿದ್ದಾರೆ. 2024ರಲ್ಲಿ ರಿಲೀಸ್ ಆದ ‘ಕಿಲ್’ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈಗ ಅವರು ಫುಡ್ ವ್ಲಾಗಿಂಗ್ ಕೂಡ ಮಾಡುತ್ತಾರೆ.

‘ತಿಂಡಿಗಳನ್ನು ನಾನು ಯಾವಾಗಲೂ ಇಷ್ಪಡುತ್ತೇನೆ. ನನ್ನ ತಾಯಿ ವಿವಿಧ ಖಾದ್ಯಗಳನ್ನು ಮಾಡುತ್ತಿದ್ದರು. ನಾನು ಈಗ ಬೇರೆ ಬೇರೆ ಜಾಗಗಳಿಗೆ ಹೋಗಿ ಅಲ್ಲಿನ ತಿಂಡಿಗಳನ್ನು ಹುಡುಕುತ್ತಿದ್ದೇನೆ. ನಾನು ತಿಂಡಿಗಳನ್ನು ಹುಡುಕಿ, ಮೆಚ್ಚುಗೆ ಸೂಚಿಸುತ್ತೇನೆ. ನನಗೆ ಇದು ಇಷ್ಟ’ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
ಅಂಬಿ ಬೈಕ್ ಮೇಲೆ ಸುದೀಪ್; ಅಪರೂಪದ ಫೋಟೋ ಇಲ್ಲಿದೆ
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ಆಶಿಶ್ ಅವರು ಕಾಮಿಡಿ ಶೋ, ಟಾಕ್ ಶೋಗಳನ್ನು ಮಾಡಿದ್ದಾರೆ. ಅವರು ಈಗ ವಿವಿಧ ನಗರಗಳಿಗೆ ತೆರಳಿ ಅಲ್ಲಿನ ವಿಶೇಷ ರೆಸ್ಟೋರೆಂಟ್, ರಸ್ತೆ ಬದಿಯ ಅಂಗಡಿಗಳಿಗೆ ಭೇಟಿ ನಿಡಿ ಅಲ್ಲಿನ ತಿಂಡಿಗಳನ್ನು ಮೆಚ್ಚಿ ಹೊಗಳುವ ಕೆಲಸ ಮಾಡುತ್ತಿದ್ದಾರೆ. ಅವರು ಫೇಮಸ್ ಆಗಿರುವುದರಿಂದ ಅವರ ಯೂಟ್ಯೂಬ್​ಗೆ ಸಬ್​ಸ್ಕ್ರೈಬ್​ಗಳು ಕೂಡ ಸುಲಭವಾಗಿ ಸಿಗುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮುದ್ದೆ ಊಟ ಸವಿದ ಆಶಿಶ್ ವಿದ್ಯಾರ್ಥಿ; ಏನು ವಿಶೇಷ? ಇಲ್ಲಿದೆ ನೋಡಿ

ಆಶಿಶ್ ಅವರು ವಿಲನ್ ಪಾತ್ರಗಳ ಮೂಲಕ ಫೇಮಸ್ ಆದವರು. ಅವರು ಪೊಲೀಸ್ ಪಾತ್ರ ಮಾಡಿದರೂ ಅಲ್ಲಿಯೂ ನೆಗೆಟಿವ್ ಶೇಡ್ ಇರುತ್ತಿತ್ತು. ಆ ರೀತಿಯಲ್ಲಿ ಆಶಿಶ್ ಅವರು ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಕನ್ನಡದಲ್ಲಿ ಅವರು ಸುದೀಪ್​ ಜೊತೆ ‘ಬಚ್ಚನ್’ ಹೆಸರಿನ ಚಿತ್ರ ಮಾಡಿದ್ದರು. ಈ ಸಿನಿಮಾ ಗಮನ ಸೆಳೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.