AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಟಚ್: ಒಂದು ಹೆಜ್ಜೆ ಮುಂದೆ ಇಟ್ಟ ಮಲಯಾಳಂ ಚಿತ್ರರಂಗ

Mollywood: ಮಲಯಾಳಂ ಚಿತ್ರರಂಗ ತನ್ನ ಕಲಾವಿದರಿಗೆ ಡಿಜಿಟಲ್ ಗುರುತಿನ ಚೀಟಿ ವಿತರಿಸಿದ್ದು ಬ್ಯಾಂಕಿಂಗ್, ವಿಮೆ ಇನ್ನಿತರೆ ಸೌಲಭ್ಯಗಳು ಸುಲಭಕ್ಕೆ ಲಭ್ಯವಾಗುವಂತೆ ಮಾಡಿದೆ.

ಡಿಜಿಟಲ್ ಟಚ್: ಒಂದು ಹೆಜ್ಜೆ ಮುಂದೆ ಇಟ್ಟ ಮಲಯಾಳಂ ಚಿತ್ರರಂಗ
ಮಲಯಾಳಂ ಚಿತ್ರರಂಗ
ಮಂಜುನಾಥ ಸಿ.
|

Updated on: Jun 28, 2023 | 5:54 PM

Share

ಎಲ್ಲ ಚಿತ್ರರಂಗಗಳಲ್ಲಿಯೂ (Movie Industry) ಅಲ್ಲಿನ ಕಲಾವಿದರು (Artist), ತಂತ್ರಜ್ಞರು ಸೇರಿಕೊಂಡು ಸಂಘಗಳನ್ನು ಕಟ್ಟಿಕೊಂಡು ಅದಕ್ಕೆ ನಿಯಮಗಳನ್ನು ರೂಪಿಸಿ ಒಗ್ಗಟ್ಟಿನಿಂದ ಒಬ್ಬರಿಗೊಬ್ಬರು ಆಗುತ್ತಾ ಕಲಾವಿದರ ಸುಖ, ನೆಮ್ಮದಿಗೆ ಬೇಕಾದ ಅಗತ್ಯ ಸೌಲಭ್ಯಗಳು, ನಿವೃತ್ತಿ ಭತ್ಯೆಗಳ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿಯೂ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಈ ಕಲಾವಿದರ ಸಂಘಗಳು ಹೆಚ್ಚು ಪರಿಣಾಮಕಾರಿಯಾಗಿಯೂ ಶಿಸ್ತಿನಿಂದಲೂ ಕಾರ್ಯಾಚರಣೆ ಮಾಡುತ್ತಿವೆ. ದಕ್ಷಿಣದ ಪ್ರಮುಖ ನಾಲ್ಕು ಚಿತ್ರರಂಗಗಳಲ್ಲಿಯೂ ಕಲಾವಿದರ ಸಂಘಗಳಿವೆ, ಅದರಲ್ಲಿಯೂ ಮಲಯಾಳಂ (Mollywood) ಚಿತ್ರರಂಗ ಒಂದು ಹೆಜ್ಜೆ ಮುಂದೆ ಹೋಗಿ ಸಂಘಕ್ಕೆ ಡಿಜಿಟಲ್ ಟಚ್ ತನ್ನ ಸದಸ್ಯರಿಗೆ ಸವಲತ್ತುಗಳ ಲಭ್ಯತೆಯನ್ನು ಸುಲಭಗೊಳಿಸಿದೆ.

ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (AMMA) ತನ್ನ ಸದಸ್ಯರಿಗೆ ಹೊಸ ಡಿಜಿಟಲ್ ಗುರುತಿನ ಚೀಟಿಗಳನ್ನು ವಿತರಿಸಿದೆ. ಹಲವು ಸೌಲಭ್ಯಗಳನ್ನು ಈ ಡಿಜಿಟಲ್ ಕಾರ್ಡ್​ಗೆ ಲಿಂಕ್ ಮಾಡಲಾಗಿದ್ದು, ಮೊತ್ತ ಮೊದಲ ಡಿಜಿಟಲ್ ಗುರುತಿನ ಚೀಟಿಯನ್ನು ಅಮ್ಮಾದ ಅಧ್ಯಕ್ಷ ಮೋಹನ್​ಲಾಲ್ ಅವರು ಮಲಯಾಳಂ ಚಿತ್ರರಂಗದ ಮತ್ತೊಬ್ಬ ದಿಗ್ಗಜ ನಟ, ಅಮ್ಮಾದ ಸದಸ್ಯ ಮಮ್ಮುಟಿಗೆ ನೀಡುವ ಮೂಲಕ ಡಿಜಿಟಲ್ ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಿದ್ದಾರೆ.

ಈ ಹೊಸ ಗುರುತಿನ ಚೀಟಿಯ ಮೂಲಕ ಬ್ಯಾಂಕಿಂಗ್, ವಿಮೆ ಇನ್ನಿತರ ಸೌಲಭ್ಯಗಳನ್ನು ಸುಲಭಕ್ಕೆ ಪಡೆಯಬಹುದಾಗಿದೆ. ಈ ಹೊಸ ಕಾರ್ಡ್​ ಅನ್ನು ಪರಿಚಯಿಸುವ ಹಿಂದೆ ಮಲಯಾಳಂ ಹಿರಿಯ ನಟ, ನಿರ್ಮಾಪಕ ಹಾಗೂ ಅಮ್ಮ ಪದಾಧಿಕಾರಿ ಎಡವೇಲ ಬಾಬು ಶ್ರಮ ಹೆಚ್ಚಿಗಿದೆ ಎಂದು ಅಧ್ಯಕ್ಷ ಮೋಹನ್​ಲಾಲ್ ಹೇಳಿದ್ದು, ಈ ಡಿಜಿಟಲ್ ಗುರುತಿನ ಚೀಟಿಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್​ಡೇಟ್ ಮಾಡಿ ಇನ್ನೂ ಹಲವು ಸೌಕರ್ಯಗಳನ್ನು ಇದರಿಂದ ಪಡೆಯುವಂತೆ ಮಾಡಲಾಗುವುದು ಎಂದಿದ್ದಾರೆ.

ಈಗ ವಿತರಣೆ ಮಾಡಿರುವ ಡಿಜಿಟಲ್ ಕಾರ್ಡ್​ನಲ್ಲಿ ಚಿಪ್ ಅಳವಡಿಸಲಾಗಿದ್ದು ಡಿಜಿಟಲ್ ಕ್ಯೂರ್ ಕೋಡ್ ಸಹ ಇದೆ. ಈ ಕಾರ್ಡ್​ಗೆ ಇನ್ನು ಮುಂದೆ ವಿಮಾನ ನಿಲ್ದಾಣದ ಲಾಂಚ್ ಸೌಲಭ್ಯದ ಆಕ್ಸಸ್ ಅನ್ನು ಮಾಡಿಕೊಡಲಾಗುವುದು, ಸದ್ಯಕ್ಕೆ ಬ್ಯಾಂಕಿಂಗ್, ವಿಮೆ, ಸಂಘದ ಕೆಲವು ನೋಟಿಫಿಕೇಷನ್​ಗಳು, ಅಮ್ಮಾ ಕಚೇರಿಯ ಡಿಜಿಟಲ್ ಸೈನಿಂಗ್​ಗೆ, ಚಿತ್ರೀಕರಣ ಸೆಟ್​ನ ಹಾಜರಾತಿ, ಕೆಲಸ ಮಾಡಿದ ದಿನಗಳು, ರಜೆ ಇನ್ನಿತರೆ ಸೌಲಭ್ಯಗಳು ಹಾಗೂ ಮಾಹಿತಿ ಮಾತ್ರವೇ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ಈ ಕಾರ್ಡ್​ಗೆ ಸೇರಿಸಲಾಗುತ್ತಿದೆ ಎಂದಿದ್ದಾರೆ.

ಮಲಯಾಳಂ ಚಿತ್ರರಂಗ ಇತ್ತೀಚೆಗೆ ಸುದ್ದಿಯಲ್ಲಿತ್ತು. ಅಶಿಸ್ತು ಪ್ರದರ್ಶಿಸಿದ ಇಬ್ಬರು ಜನಪ್ರಿಯ ನಟರ ಮೇಲೆ ನಿಷೇಧ ಹೇರಿ ಧೈರ್ಯ ಪ್ರದರ್ಶಿಸಿತ್ತು. ಆ ನಂತರ ಒಬ್ಬ ನಟನ ಮೇಲಿನ ನಿಷೇಧ ಹಿಂಪಡೆಯಲಾಯ್ತು. ಅದೇ ಸಮಯದಲ್ಲಿ ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘದ ಸದಸ್ಯರ, ಅಮ್ಮಾ ಸದಸ್ಯರು ಚಿತ್ರರಂಗದಲ್ಲಿ ಕೆಲವು ನಟರಿಗೆ ಡ್ರಗ್ಸ್ ಸೇವಿಸುವ ಚಟವಿದೆಯೆಂದು, ಸೆಟ್​ನಲ್ಲಿಯೇ ಕೆಲವರು ಡ್ರಗ್ಸ್ ಸೇವಿಸುತ್ತಾರೆಂದು ಅಂಥಹವರ ಪಟ್ಟಿ ತಮ್ಮ ಬಳಿ ಇದೆಯೆಂದು ಹೇಳಿದ್ದರು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು, ಕೇರಳ ಪೊಲೀಸರು ಸಹ ತನಿಖೆ ನಡೆಸುವುದಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್