ಅಥಿಯಾ ಶೆಟ್ಟಿ, ಕೆ.ಎಲ್. ರಾಹುಲ್ ಇಂಗ್ಲೆಂಡ್‌ನಲ್ಲಿದ್ದಾರೆ ಎಂದು ಖಚಿತಪಡಿಸುತ್ತವೆ ಈ ಫೋಟೋಗಳು?

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ 2019 ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಏಪ್ರಿಲ್ನಲ್ಲಿ, ಕೆಎಲ್ ರಾಹುಲ್ ಅವರ ಜನ್ಮದಿನದಂದು, ಅಥಿಯಾ - “ನಿಮಗಾಗಿ ಕೃತಜ್ಞರಾಗಿರಬೇಕು, ಜನ್ಮದಿನದ ಶುಭಾಶಯಗಳು.” ಎಂದು ಬರೆದ್ದಿದ್ದರು.

ಅಥಿಯಾ ಶೆಟ್ಟಿ, ಕೆ.ಎಲ್. ರಾಹುಲ್ ಇಂಗ್ಲೆಂಡ್‌ನಲ್ಲಿದ್ದಾರೆ ಎಂದು ಖಚಿತಪಡಿಸುತ್ತವೆ ಈ ಫೋಟೋಗಳು?
Athiya Shetty - KL Rahul
Follow us
TV9 Web
| Updated By: Digi Tech Desk

Updated on:Jul 13, 2021 | 2:51 PM

ಕೆಲವು ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿರಲು ಇಷ್ಟಪಡುತ್ತಾರೆ ಮತ್ತು ಕೆಲವರು ಅದನ್ನು ರಹಸ್ಯವಾಗಿಡಲು ಇಷ್ಟಪಡುತ್ತಾರೆ. ನಿಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮದಿಂದ ಮತ್ತು ಸಾರ್ವಜನಿಕರಿಂದ ದೂರವಿರಿಸುವುದು ಖಂಡಿತವಾಗಿಯೂ ನಿಮ್ಮ ಹಕ್ಕು, ಆದರೆ ನೀವು ಜನಪ್ರಿಯ ವ್ಯಕ್ತಿಯಾಗಿದ್ದಾಗ ಅದು ಸ್ವಲ್ಪ ಕಷ್ಟಕರವಾಗುತ್ತದೆ. ಮತ್ತು ಅದಕ್ಕಿಂತ ಹೆಚ್ಚಾಗಿ, ಸಿನೆಮಾವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮತ್ತು ಅವರ ನೆಚ್ಚಿನ ತಾರೆಗಳನ್ನು ಚಾಚು ತಪ್ಪದೆ ಅನುಸರಿಸುವ ಫ್ಯಾನ್ಗಳನ್ನು ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಯಾಗಿದ್ದರಂತು ಇದು ಅಸಾಧ್ಯ.

ಕೆಲವು ದಿನಗಳ ಹಿಂದೆ, ನಟಿ ಅಥಿಯಾ ಶೆಟ್ಟಿ (Athiya Shetty) ಅವರು ಇನ್ಸ್ಟಾಗ್ರಾಮ್​ನಲ್ಲಿ ಒಂದು ಚಿತ್ರವನ್ನು ಹಂಚಿಕೊಂಡರು. ಇದರಿಂದಾಗಿ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇಂಗ್ಲೆಂಡ್ನಲ್ಲಿನಲ್ಲಿ ಒಟ್ಟಿಗಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದರು, ಏಕೆಂದರೆ ಆಗಸ್ಟ್ನಲ್ಲಿ ಪ್ರಾರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಜೊತೆ ರಾಹುಲ್ ಕೂಡ ಇದ್ದರು. ಇಬ್ಬರೂ ಒಟ್ಟಿಗೆ ಇಂಗ್ಲೆಂಡ್‌ನಲ್ಲಿದ್ದಾರೆ ಎಂದು ಸೂಚಿಸಿದ ಮತ್ತೊಂದು ಅಂಶವೆಂದರೆ ಸೌತಾಂಪ್ಟನ್‌ನಲ್ಲಿ ಒಂದೇ ಸ್ಥಳದಲ್ಲಿ ಇಬ್ಬರೂ ಚಿತ್ರವನ್ನು ಹಂಚಿಕೊಂಡಿದ್ದರು. ಈಗ, ಅಂತಿಮವಾಗಿ ಇವರಿಬ್ಬರೂ ತಮ್ಮ ಸ್ನೇಹಿತೆಯ ಜೊತೆಗಿರುವಂತಹ ವೈಯಕ್ತಿಕ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರಿಂದ ಅವರು ನಿಜವಾಗಿಯೂ ಒಟ್ಟಿಗೆ ಇದ್ದಾರೆ ಎಂದು ದೃಢಪಡಿಸಿಲಾಗಿದೆ. ಹಾಗೆಯೇ ಅವರೊಂದಿಗೆ ಚಿತ್ರಗಳಲ್ಲಿರುವ ಆ ಸ್ನೇಹಿತೆ ಹೆಸರು ಸೋನಾಲಿ ಫ್ಯಾಬಿಯಾನಿ, ಇವರು ಆಲ್ಟ್ರಿ: ಗಿಫ್ಟ್ಸ್ ದಟ್ ಮ್ಯಾಟರ್ ಎಂಬ ಎನ್‌ಜಿಒ ಸಂಸ್ಥಾಪಕರಾಗಿದ್ದಾರೆ.

ಅಥಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ಅವರು ಬಹಳ ಸಮಯದಿಂದ ಜೊತೆಗಿದ್ದಾರೆ ಎಂದು ವದಂತಿಗಳಿವೆ. ಅವರು ಪರಸ್ಪರ ಡೇಟಿಂಗ್ ಮಾಡುವುದನ್ನು ಅಧಿಕೃತವಾಗಿ ದೃಡೀಕರಿಸಿಲ್ಲ. ಆದರೆ ಇಬ್ಬರೂ ಸಾಮಾಜಿಕ ಮಾಧ್ಯಮ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಬುಧವಾರದಂದು, ಅಥಿಯಾ ಕ್ರಿಕೆಟಿಗನೊಂದಿಗೆ ಒಂದೆರಡು ಸೊಗಸಾದ ಚಿತ್ರಗಳನ್ನು ಹಂಚಿಕೊಂಡರು. ಈ ಚಿತ್ರಗಳು ನುಮಿ ಪ್ಯಾರಿಸ್‌ನ ಬ್ರಾಂಡ್ ಶೂಟ್‌ನಿಂದ ಬಿಡುಗಡೆಯಾಗಿದ್ದವು, ಅಲ್ಲಿ ಅಥಿಯಾ ಮತ್ತು ರಾಹುಲ್ ಸನ್ಗ್ಲಾಸ್ಗಳನ್ನು ಅನುಮೋದಿಸುತ್ತಿದ್ದಾರೆ.

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್

ಇವರಿಬ್ಬರು 2019 ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಏಪ್ರಿಲ್ನಲ್ಲಿ, ಕೆಎಲ್ ರಾಹುಲ್ ಅವರ ಜನ್ಮದಿನದಂದು, ಅಥಿಯಾ – “ನಿಮಗಾಗಿ ಕೃತಜ್ಞರಾಗಿರಬೇಕು, ಜನ್ಮದಿನದ ಶುಭಾಶಯಗಳು.” ಎಂದು ಬರೆದ್ದಿದ್ದರು. ಅಥಿಯಾ ಶೆಟ್ಟಿ ನಟ ಸುನಿಯೆಲ್ ಶೆಟ್ಟಿ ಮತ್ತು ಮಾನ ಶೆಟ್ಟಿ ಅವರ ಪುತ್ರಿ. ಹೊಸಬ ಸೂರಜ್ ಪಾಂಚೋಲಿ ಜೊತೆಯಾಗಿ ನಟಿಸಿರುವ 2015 ರ ಹೀರೋ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಥಿಯಾ ಕೊನೆಯ ಬಾರಿಗೆ ಮೋತಿಚೂರ್ ಚಕ್ನಾಚೂರ್ನಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವರು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಕೆಲಸ ಮಾಡಿದರು.

Published On - 2:51 pm, Tue, 13 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ