AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವತಾರ್’ ಮ್ಯಾಜಿಕ್ ಕಡಿಮೆ ಆಯ್ತೆ, ಮುಂಗಡ ಬುಕಿಂಗ್ ಮಂಕು

Avatar Fire and Ash: ‘ಅವತಾರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ನಾಳೆ (ಡಿಸೆಂಬರ್ 19) ಬಿಡುಗಡೆ ಆಗಲಿದೆ. ಪ್ರತಿ ಬಾರಿ ‘ಅವತಾರ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಭಾರಿ ಕ್ರೇಜ್ ಸೃಷ್ಟಿಯಾಗುತ್ತಿತ್ತು. ಇದಕ್ಕೆ ಭಾರತ ಸಹ ಹೊರತಾಗಿರಲಿಲ್ಲ. ಆದರೆ ಈ ಬಾರಿ ಯಾಕೋ ಕ್ರೇಜ್ ಅಷ್ಟಾಗಿ ಕಾಣುತ್ತಿಲ್ಲ. ಇದೀಗ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್​​ನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ.

‘ಅವತಾರ್’ ಮ್ಯಾಜಿಕ್ ಕಡಿಮೆ ಆಯ್ತೆ, ಮುಂಗಡ ಬುಕಿಂಗ್ ಮಂಕು
Avatar 3
ಮಂಜುನಾಥ ಸಿ.
|

Updated on: Dec 18, 2025 | 12:41 PM

Share

‘ಅವತಾರ್’ ಸಿನಿಮಾ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳಲ್ಲಿ ಒಂದು. ಇದೀಗ ‘ಅವತಾರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ನಾಳೆ (ಡಿಸೆಂಬರ್ 19) ಬಿಡುಗಡೆ ಆಗಲಿದೆ. ಪ್ರತಿ ಬಾರಿ ‘ಅವತಾರ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಭಾರಿ ಕ್ರೇಜ್ ಸೃಷ್ಟಿಯಾಗುತ್ತಿತ್ತು. ಇದಕ್ಕೆ ಭಾರತ ಸಹ ಹೊರತಾಗಿರಲಿಲ್ಲ. ಆದರೆ ಈ ಬಾರಿ ಯಾಕೋ ಕ್ರೇಜ್ ಅಷ್ಟಾಗಿ ಕಾಣುತ್ತಿಲ್ಲ. ಇದೀಗ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್​​ನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಭಾರತದಲ್ಲಿ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ನಾಳೆ (ಡಿಸೆಂಬರ್ 19) ಬಿಡುಗಡೆ ಆಗಲಿದ್ದು, ಡಿಸೆಂಬರ್ 17ರ ವರೆಗೆ ಈ ಸಿನಿಮಾದ 2.25 ಲಕ್ಷಕ್ಕೂ ಹೆಚ್ಚು ಟಿಕೆಟ್​​ಗಳು ಮುಂಗಡವಾಗಿ ಬುಕಿಂಗ್ ಆಗಿವೆ. ಕೇಳಲು ಇದು ದೊಡ್ಡ ಸಂಖ್ಯೆಯಂತೆ ಕಂಡರೂ ಸಹ ‘ಅವತಾರ್ 2’ ಸಿನಿಮಾಕ್ಕೆ ಆಗಿದ್ದ ಮುಂಗಡ ಬುಕಿಂಗ್ ಮುಂದೆ ಇದು ಕಡಿಮೆ. 2022 ರ ಡಿಸೆಂಬರ್ ತಿಂಗಳಲ್ಲಿ ‘ಅವತಾರ್ 2’ ಸಿನಿಮಾ ಬಿಡುಗಡೆಗೆ ಮುಂಚೆಯೇ 3.30 ಲಕ್ಷ ಟಿಕೆಟ್​​ಗಳನ್ನು ಮಾರಾಟ ಮಾಡಿತ್ತು. ಅದಕ್ಕೆ ಹೋಲಿಸಿದರೆ ‘ಅವತಾರ್ 3’ಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ದೊರೆತಿಲ್ಲ.

ಇದನ್ನೂ ಓದಿ:‘ವಾರಣಾಸಿ’ ಸಿನಿಮಾದಲ್ಲಿ ಕನ್ನಡದ ಖ್ಯಾತ ಹೀರೋಗೆ ಅವಕಾಶ ಕೊಟ್ಟ ರಾಜಮೌಳಿ

ಕೋವಿಡ್ ಬಳಿಕ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂದರೆ ಅದು ‘ಸ್ಪೈಡರ್​ಮ್ಯಾನ್: ನೋ ವೇ ಹೋಮ್’ ಈ ಸಿನಿಮಾ ಬಿಡುಗಡೆಗೆ ಮುಂಚೆ 5.50 ಲಕ್ಷ ಟಿಕೆಟ್​​ಗಳನ್ನು ಮುಂಗಡವಾಗಿ ಮಾರಾಟ ಮಾಡಿತ್ತು. ‘ಅವತಾರ್’ ಸಿನಿಮಾಕ್ಕೆ ಭಾರತದಲ್ಲಿ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ‘ಅವತಾರ್ 2’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಚೆನ್ನಾಗಿರಲಿಲ್ಲವಾದ್ದರಿಂದ ಈಗ ‘ಅವತಾರ್ 3’ ಸಿನಿಮಾದ ಬಗ್ಗೆ ಭಾರತದ ಪ್ರೇಕ್ಷಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಂತಿಲ್ಲ.

‘ಟೈಟ್ಯಾನಿಕ್’, ‘ಟರ್ಮಿನೇಟರ್’, ‘ರ್ಯಾಂಬೊ’, ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಜೇಮ್ಸ್ ಕ್ಯಾಮರನ್, 2009 ರ ಬಳಿಕ ‘ಅವತಾರ್’ ಸಿನಿಮಾದ ಹೊರತಾಗಿ ಇನ್ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ತಮ್ಮ ಉಳಿದ ವೃತ್ತಿ ಜೀವನವನ್ನು ಅವರು ‘ಅವತಾರ್’ ಸಿನಿಮಾ ಸರಣಿಯ ಮೇಲೆಯೇ ಕಳೆಯಲು ನಿರ್ಧರಿಸಿದ್ದಾರೆ. ‘ಅವತಾರ್ 3’ ಸಿನಿಮಾದ ಬಳಿಕ ಇದೇ ಸರಣಿಯ ಇನ್ನೂ ಎರಡು ಸಿನಿಮಾಗಳು ಬಿಡುಗಡೆ ಆಗಲಿವೆ. ‘ಅವತಾರ್ 4’ ಸಿನಿಮಾ 2029 ರಲ್ಲಿ ಹಾಗೂ ‘ಅವತಾರ್ 5’ ಸಿನಿಮಾ 2031ರಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ