ಮಗನ ಸಿನಿಮಾದಿಂದ ನಿರ್ದೇಶಕನಿಗೆ ಗೇಟ್​ಪಾಸ್ ಕೊಟ್ಟ ಪ್ರಿಯಾಂಕಾ ಉಪೇಂದ್ರ

ಉಪೇಂದ್ರ ಪುತ್ರ ಆಯುಷ್ ನಟಿಸುತ್ತಿದ್ದ ಮೊದಲ ಸಿನಿಮಾ ಅನ್ನು ನಿರ್ದೇಶನ ಮಾಡುತ್ತಿದ್ದ ಪುರುಷೋತ್ತಮ್ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಮಾಧ್ಯಮಗಳ ಬಳಿ ಅಳಲು ತೋಡಿಕೊಂಡಿದ್ದು, ಉಪೇಂದ್ರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಮೇಲೆ ಆರೋಪ ಮಾಡಿದ್ದಾರೆ. ಪುರುಷೋತ್ತಮ್ ಅವರು ಹೇಳಿರುವಂತೆ, ಅವರು ಉಪೇಂದ್ರ ಪುತ್ರ ಆಯುಷ್ ಅವರ ಮೊದಲ ಸಿನಿಮಾದ ಚಿತ್ರವನ್ನು ಕಳೆದ ಕೆಲವು ತಿಂಗಳುಗಳಿಂದಲೂ ನಿರ್ದೇಶನ ಮಾಡುತ್ತಿದ್ದರಂತೆ.

ಮಗನ ಸಿನಿಮಾದಿಂದ ನಿರ್ದೇಶಕನಿಗೆ ಗೇಟ್​ಪಾಸ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
Upendra Priyanka

Updated on: Nov 07, 2026 | 3:16 PM

ಮುಖ್ಯಾಂಶಗಳು

  • ಉಪೇಂದ್ರ ಪುತ್ರನ ಸಿನಿಮಾ ವಿವಾದದಲ್ಲಿ
  • ಉಪೇಂದ್ರ ಪುತ್ರ ಆಯುಷ್ ನಟಿಸುತ್ತಿರುವ ಮೊದಲ ಸಿನಿಮಾ
  • ಸಿನಿಮಾ ನಿರ್ದೇಶಕನ ಹೊರಗಟ್ಟಿದ ಪ್ರಿಯಾಂಕಾ ಉಪೇಂದ್ರ

ಉಪೇಂದ್ರ ಪುತ್ರ ಆಯುಷ್ ನಟಿಸುತ್ತಿದ್ದ ಮೊದಲ ಸಿನಿಮಾ ಅನ್ನು ನಿರ್ದೇಶನ ಮಾಡುತ್ತಿದ್ದ ಪುರುಷೋತ್ತಮ್ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಮಾಧ್ಯಮಗಳ ಬಳಿ ಅಳಲು ತೋಡಿಕೊಂಡಿದ್ದು, ಉಪೇಂದ್ರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಮೇಲೆ ಆರೋಪ ಮಾಡಿದ್ದಾರೆ. ಪುರುಷೋತ್ತಮ್ ಅವರು ಹೇಳಿರುವಂತೆ, ಅವರು ಉಪೇಂದ್ರ ಪುತ್ರ ಆಯುಷ್ ಅವರ ಮೊದಲ ಸಿನಿಮಾದ ಚಿತ್ರವನ್ನು ಕಳೆದ ಕೆಲವು ತಿಂಗಳುಗಳಿಂದಲೂ ನಿರ್ದೇಶನ ಮಾಡುತ್ತಿದ್ದರಂತೆ. ಸಿನಿಮಾದ 50% ಚಿತ್ರೀಕರಣವೂ ಪೂರ್ಣವಾಗಿದೆ ಆದರೆ ಇದ್ದಕ್ಕಿದ್ದಂತೆ ಸಿನಿಮಾದಿಂದ ಅವರನ್ನು ತೆಗೆದು ಹಾಕಿದ್ದು, ಖುದ್ದು ಪ್ರಿಯಾಂಕಾ ಉಪೇಂದ್ರ ಅವರೇ ನಿರ್ದೇಶನ ಮಾಡುತ್ತಿದ್ದಾರಂತೆ.

‘ನಾನು 12 ವರ್ಷದ ಹಿಂದೆ ಕತೆ ಮಾಡಿಕೊಂಡಿದ್ದೆ. ಕತೆ ಕೇಳಿದ ಉಪೇಂದ್ರ ಅವರು ಸಹ ಮೆಚ್ಚಿಕೊಂಡಿದ್ದರು. ನಾನೇ ನಿರ್ಮಾಪಕರನ್ನು ಹುಡುಕಿ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದೆವು. ಆಯುಷ್ ಅವರ ಮೊದಲ ಸಿನಿಮಾ ಆಗಿರುವ ಕಾರಣ ‘ಆಯುಷ್’ ಎಂದೇ ಸಿನಿಮಾಕ್ಕೆ ಹೆಸರು ಇರಿಸಿದ್ದೆವು ಆದರೆ ಘೋಷಣೆ ಮಾಡಿರಲಿಲ್ಲ. ಕಾಶ್ಮೀರ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದೆ. ಆದರೆ ಈಗ ಪ್ರಿಯಾಂಕಾ ಅವರು ನನ್ನನ್ನು ಹಾಗೂ ಸಿನಿಮಾದ ಕ್ಯಾಮೆರಾಮ್ಯಾನ್ ಆಗಿದ್ದ ಹಿರಿಯ ಕ್ಯಾಮೆರಾಮ್ಯಾನ್ ವೇಣು (ನಟಿ ತಾರಾ ಅವರ ಪತಿ) ಅವರನ್ನು ಸಿನಿಮಾದಿಂದ ಹೊರಗೆ ಹಾಕಿದ್ದಾರೆ’ ಎಂದಿದ್ದಾರೆ.

Loading...

‘ಮಗನಿಗೆ ಬಿಲ್ಡ್ ಅಪ್ ಬೇಕು ಅಂದಿದ್ದರು, ಆದರೆ ನಾನು ನನ್ನ ಕಥೆಗೆ ಬೇಕಾದ ಹಾಗೇ ಚಿತ್ರೀಕರಣ ಮಾಡುತ್ತಾ ಹೋದೆ, ಅದು ಅವರಿಗೆ ಇಷ್ಟ ಆಗಿಲ್ಲ ಅನಿಸುತ್ತೆ. ಈಗ ನೋಡಿದರೆ ನನಗೆ ತಿಳಿಸದೆ ಮೂರನೇ ಷೆಡ್ಯೂಲ್ ಸ್ಟಾರ್ಟ್ ಮಾಡಿದ್ದಾರೆ ನವೆಂಬರ್ 2 ರಿಂದ ಪ್ರಿಯಾಂಕಾ ಅವರೇ ಡೈರೆಕ್ಟ್ ಮಾಡ್ತಿದ್ದಾರೆ. ನನಗೆ ಅಡ್ವಾನ್ಸ್ ಕೊಟ್ಟಿರೋದು ಬಿಟ್ಟರೆ ಏನೂ ಕೊಟ್ಟಿಲ್ಲ, ನಾನೂ ಸಹ ಏನೂ ಕೇಳಿಲ್ಲ, ಇಲ್ಲಿಯವರೆಗೂ 50 ಪರ್ಸೆಂಟ್ ಶೂಟ್ ಆಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ತಮಿಳು ಸಿನಿಮಾ ನೋಡಿ ನಿರ್ದೇಶಕನ ಕೊಂಡಾಡಿದ ಉಪೇಂದ್ರ

ಈ ವರೆಗೆ ನಾನು ಮಾಡಿರುವ ಕೆಲಸಕ್ಕೆ ನನಗೆ ಸಂಭಾವನೆ ಕೊಡಬೇಕು, ಹಾಗೂ ನಾನು ಮಾಡಿಕೊಂಡಿರುವ ಕತೆಯನ್ನು ಅವರು ಬಳಸಬಾರದು ಎಂಬುದೇ ನನ್ನ ಬೇಡಿಕೆ. ಉಪೇಂದ್ರ ಅವರು ಕತೆ ಕೇಳಿದಾಗ, ‘ಒಳ್ಳೆಯ ಕತೆ ಮಾಡಿದ್ದೀಯ ಅಂದಿದ್ದರು. ಅವರೂ ಸ್ವತಃ ಒಬ್ಬ ನಿರ್ದೇಶಕ ಹಾಗಿರುವಾಗ ಒಬ್ಬ ನಿರ್ದೇಶಕನಿಗೆ ಅನ್ಯಾಯ ಆಗುತ್ತಿರುವಾಗ ಅವರು ಪ್ರತಿಕ್ರಿಯಿಸಬೇಕು. ನಾನು ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದೆ ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Sat, 7 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us