AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ಸಿನಿಮಾ ನೋಡಿ ನಿರ್ದೇಶಕನ ಕೊಂಡಾಡಿದ ಉಪೇಂದ್ರ

ಈಗ ಸ್ಟಾರ್ ನಿರ್ದೇಶಕರಾಗಿ ಮೆರೆಯುತ್ತಿರುವ ಹಲವು ನಿರ್ದೇಶಕರುಗಳಿಗೆ ಮೆಚ್ಚಿನ ನಿರ್ದೇಶಕ ನಮ್ಮ ಉಪೇಂದ್ರ. ಆದರೆ ಕಳೆದ ಹಲವು ವರ್ಷಗಳಿಂದ ನಟನೆಗೆ ಮಾತ್ರ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಆಗೊಮ್ಮೆ-ಈಗೊಮ್ಮೆ ಸಿನಿಮಾ ನಿರ್ದೇಶಿಸುತ್ತಾರೆ. ಇದೀಗ ಉಪೇಂದ್ರ ಅವರು ತಮಿಳಿನ ಸಿನಿಮಾ ಒಂದನ್ನು ವೀಕ್ಷಿಸಿದ್ದು, ಸಿನಿಮಾ ಅನ್ನು ಹಾಗೂ ಸಿನಿಮಾದ ನಿರ್ದೇಶಕರನ್ನು ಬಹುವಾಗಿ ಕೊಂಡಾಡಿದ್ದಾರೆ. ‘ನಿಜವಾದ ಕಲ್ಟ್ ನಿರ್ದೇಶಕ ನೀವು’ ಎಂದಿದ್ದಾರೆ ಉಪೇಂದ್ರ.

ತಮಿಳು ಸಿನಿಮಾ ನೋಡಿ ನಿರ್ದೇಶಕನ ಕೊಂಡಾಡಿದ ಉಪೇಂದ್ರ
Upendra Karthik Subbaraju
ಮಂಜುನಾಥ ಸಿ.
|

Updated on: Oct 11, 2026 | 6:55 PM

Share

ಮುಖ್ಯಾಂಶಗಳು

  • ತಮಿಳು ಸಿನಿಮಾ ನೋಡಿ ಮೆಚ್ಚಿಕೊಂಡ ಉಪೇಂದ್ರ
  • ತಮಿಳು ನಿರ್ದೇಶಕನನ್ನು ಸಹ ಕೊಂಡಾಡಿದ್ದಾರೆ
  • ಉಪೇಂದ್ರ ಮೆಚ್ಚಿಕೊಂಡಿರುವ ಸಿನಿಮಾ ಯಾವುದು?

ಉಪೇಂದ್ರ ಭಾರತದಾದ್ಯಂತ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಲ್ಟ್ ಫಾಲೋವಿಂಗ್ ಹೊಂದಿರುವ ನಟ ಮತ್ತು ನಿರ್ದೇಶಕ. ಈಗ ಸ್ಟಾರ್ ನಿರ್ದೇಶಕರಾಗಿ ಮೆರೆಯುತ್ತಿರುವ ಹಲವು ನಿರ್ದೇಶಕರುಗಳಿಗೆ ಮೆಚ್ಚಿನ ನಿರ್ದೇಶಕ ನಮ್ಮ ಉಪೇಂದ್ರ. ಆದರೆ ಕಳೆದ ಹಲವು ವರ್ಷಗಳಿಂದ ನಟನೆಗೆ ಮಾತ್ರ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಆಗೊಮ್ಮೆ-ಈಗೊಮ್ಮೆ ಸಿನಿಮಾ ನಿರ್ದೇಶಿಸುತ್ತಾರೆ. ಇದೀಗ ಉಪೇಂದ್ರ ಅವರು ತಮಿಳಿನ ಸಿನಿಮಾ ಒಂದನ್ನು ವೀಕ್ಷಿಸಿದ್ದು, ಸಿನಿಮಾ ಅನ್ನು ಹಾಗೂ ಸಿನಿಮಾದ ನಿರ್ದೇಶಕರನ್ನು ಬಹುವಾಗಿ ಕೊಂಡಾಡಿದ್ದಾರೆ. ‘ನಿಜವಾದ ಕಲ್ಟ್ ನಿರ್ದೇಶಕ ನೀವು’ ಎಂದಿದ್ದಾರೆ ಉಪೇಂದ್ರ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಡೊರತಿ’ ಚಿತ್ರವನ್ನು ಉಪೇಂದ್ರ ಇತ್ತೀಚೆಗಷ್ಟೆ ವೀಕ್ಷಣೆ ಮಾಡಿದ್ದು, ಸಿನಿಮಾ ಅನ್ನು ಕೊಂಡಾಡಿದ್ದಾರೆ. ಈಗಾಗಲೇ ಇದೇ ಸಿನಿಮಾ ಅನ್ನು ಸ್ಟಾರ್ ನಟರಾದ ರಜನೀಕಾಂತ್, ಸೂರ್ಯ, ಮಮ್ಮುಟಿ ಹಲವು ದಿಗ್ಗಜರು ಹೊಗಳಿದ್ದಾರೆ. ಈಗ ಕನ್ನಡದ ನಟ-ನಿರ್ದೇಶಕ ಉಪೇಂದ್ರ ಅವರು ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿಶೇಷ ಪ್ರದರ್ಶನದ ಬಳಿಕ ಕಾರ್ತಿಕ್ ಸುಬ್ಬರಾಜ್ ಅವರೊಟ್ಟಿಗೆ ಮಾತನಾಡಿರುವ ಉಪೇಂದ್ರ, ಚಿತ್ರದ ಮೇಕಿಂಗ್ ಹಾಗೂ ಕಥಾಹಂದರವನ್ನು ಕೊಂಡಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾರ್ತಿಕ್ ಸುಬ್ಬರಾಜ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಉಪೇಂದ್ರ ಅವರು ನಿರ್ದೇಶಕರ ಬೆನ್ನುತಟ್ಟುತ್ತಿದ್ದು. ‘ಅತಿ ಸಂವೇದನಾಶೀಲ ವಿಷಯವನ್ನು ಕಲಾತ್ಮಕ, ವಾಣಿಜ್ಯ ಹಾಗೂ ಕಾವ್ಯಾತ್ಮಕ ಅಂಶಗಳೊಂದಿಗೆ ನಿರ್ದೇಶಕರು ಅತ್ಯಂತ ಬಲವಾಗಿ ತೆರೆಮೇಲೆ ತಂದಿದ್ದಾರೆ. ನೀವು ಇಂತಹ ಆಸಕ್ತಿದಾಯಕ ಸಿನಿಮಾವನ್ನು ತೆಗೆದುಕೊಂಡು ಅತ್ಯದ್ಭುತವಾಗಿ ಮಾಡಿದ್ದೀರಿ, ನಿಮಗೆ ಹ್ಯಾಟ್ಸ್ ಆಫ್ ಸರ್. ನಿಜವಾಗಿಯೂ ಕಲ್ಟ್ ನಿರ್ದೇಶಕ’ ಎಂದು ಅವರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ:ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ

ಚಿತ್ರದಲ್ಲಿ ನಟಿಸಿರುವ ಯುವ ನಟರಾದ ರಿಷಿಕಾಂತ್ ಹಾಗೂ ಸನಾಂತ್ ಅವರ ಅಭಿನಯವನ್ನೂ ಉಪೇಂದ್ರ ವಿಶೇಷವಾಗಿ ಸ್ಮರಿಸಿದ್ದಾರೆ. ನಟ ರಿಷಿಕಾಂತ್ ಅವರನ್ನು ಕುರಿತು ಮಾತನಾಡುತ್ತಾ, “ನೀವು ಒಬ್ಬ ಕಮರ್ಷಿಯಲ್ ಮಾಸ್ ಹೀರೋ ತರಹ ಕಾಣಿಸುತ್ತೀರಿ ಮತ್ತು ಬಹಳ ಸುಂದರವಾಗಿ ನಟಿಸಿದ್ದೀರಿ” ಎಂದಿದ್ದಾರೆ. ಅಲ್ಲದೆ, ಸನಾಂತ್ ಅವರ ನಟನೆಯನ್ನು ಕೊಂಡಾಡುತ್ತಾ, “ನೀವು ಅಸಾಧಾರಣವಾದ ಅಭಿನಯವನ್ನು ನೀಡಿದ್ದೀರಿ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ, ಕಾರ್ತಿಕ್ ಸುಬ್ಬರಾಜ್ ಅವರು ತಮ್ಮ ಕಲ್ಟ್ ಸಿನಿಮಾಗಳ ದೊಡ್ಡ ಅಭಿಮಾನಿ ಎಂಬ ಸಂಗತಿಯನ್ನು ಉಪೇಂದ್ರ ನೆನಪಿಸಿಕೊಂಡರು. ‘ಡೊರತಿ’ ಚಿತ್ರವನ್ನು ನೋಡಿದ ನಂತರವೇ ಕಾರ್ತಿಕ್ ತಮಗೆ ಯಾಕೆ ಅಷ್ಟು ದೊಡ್ಡ ಅಭಿಮಾನಿಯಾಗಿದ್ದಾರೆ ಎಂಬುದು ತಮಗೆ ಸಂಪೂರ್ಣವಾಗಿ ಅರ್ಥವಾಯಿತು ಎಂದು ಉಪೇಂದ್ರ ಹರ್ಷ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಈ ಸಿನಿಮಾವು ಇನ್ನೂ ಹಲವಾರು ಚಲನಚಿತ್ರೋತ್ಸವಗಳಿಗೆ ಪ್ರಯಾಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಉಪೇಂದ್ರ, ಕಾರ್ತಿಕ್ ಸುಬ್ಬರಾಜ್ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದರು. ಇತ್ತೀಚೆಗಷ್ಟೇ ಈ ಚಿತ್ರವು ಕೆನಡಾದಲ್ಲಿ ನಡೆದ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ನಿಂತು ಗೌರವ ಸೂಚಿಸುವ ಅಪರೂಪದ ಗೌರವವನ್ನು ಪಡೆದುಕೊಂಡಿದೆ ಎಂಬುದು ಗಮನಾರ್ಹ.

ಅಂದಹಾಗೆ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿರು ಹೊಸ ತಮಿಳು ಸಿನಿಮಾನಲ್ಲಿ ಉಪೇಂದ್ರ ನಟನೆ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ಉಪೇಂದ್ರ ಮಾತ್ರವೇ ಅಲ್ಲದೆ ಅವರೊಟ್ಟಿಗೆ ನಟ ಪ್ರಭುದೇವ ಸಹ ನಟನೆ ಮಾಡಲಿದ್ದಾರೆ. ಇನ್ನು ‘ಡೋರತಿ’ ಸಿನಿಮಾದ ವಿಷಯಕ್ಕೆ ಬರುವುದಾದರೆ ಕೀರ್ತಿ ಸುರೇಶ್ ಮತ್ತು ಇತರರು ನಟಿಸಿರುವ ಈ ಸಿನಿಮಾನಲ್ಲಿ ಕೆಲ ಸೂಕ್ಷ್ಮ ವಿಷಯಗಳನ್ನು ಭಿನ್ನ ಕೋನದಲ್ಲಿ ತೋರಿಸಲಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!