AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ಚಿತ್ರಕ್ಕೆ ಉಪೇಂದ್ರ ಮೆಚ್ಚುಗೆ: ರಿಯಲ್ ಸ್ಟಾರ್ ಹೇಳಿದ್ದೇನು?

‘ಪ್ರೇಮದ ಊರಲಿ’ ಸಿನಿಮಾ ಅನ್ನು ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಚಿತ್ರರಂಗದ ದಿಗ್ಗಜರವರೆಗೆ ಎಲ್ಲರೂ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಈಗಾಗಲೇ ಕೆಲವಾರು ಸ್ಟಾರ್ ನಟ-ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಉಪೇಂದ್ರ, ‘ಪ್ರೇಮದ ಊರಲಿ’ ಸಿನಿಮಾದ ಬಗ್ಗೆ ಮಾತನಾಡಿದ್ದು, ಸಿನಿಮಾ ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

‘ಪ್ರೇಮದ ಊರಲಿ’ ಚಿತ್ರಕ್ಕೆ ಉಪೇಂದ್ರ ಮೆಚ್ಚುಗೆ: ರಿಯಲ್ ಸ್ಟಾರ್ ಹೇಳಿದ್ದೇನು?
Premada Oorali
ಮಂಜುನಾಥ ಸಿ.
|

Updated on:Oct 14, 2026 | 11:56 AM

Share

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಸಿನಿಮಾ ಕೊಂಡಾಡಿದ ಉಪೇಂದ್ರ
  • ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಉಪೇಂದ್ರ ಆಡಿಯೋ ಸಂದೇಶ
  • ನೇರವಾಗಿ ಭೇಟಿಯಾಗಿ ಅಭಿನಂದಿಸಬೇಕು ಎಂದ ನಟ

‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. ಕನ್ನಡ ಸಿನಿಮಾಗಳು ಒಳ್ಳೆಯ ಪ್ರದರ್ಶನ ಕಾಣುವುದಿಲ್ಲ, ಕನ್ನಡ ಪ್ರೇಕ್ಷಕರು ಕನ್ನಡ ಸಿನಿಮಾ ನೋಡುವುದಿಲ್ಲ ಎಂಬ ದೂರುಗಳ ನಡುವೆಯೇ ಈ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಚಿತ್ರರಂಗದ ದಿಗ್ಗಜರವರೆಗೆ ಎಲ್ಲರೂ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಈಗಾಗಲೇ ಕೆಲವಾರು ಸ್ಟಾರ್ ನಟ-ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಉಪೇಂದ್ರ, ‘ಪ್ರೇಮದ ಊರಲಿ’ ಸಿನಿಮಾದ ಬಗ್ಗೆ ಮಾತನಾಡಿದ್ದು, ಸಿನಿಮಾ ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ನಿರ್ದೇಶಕರ ಪರಿಶ್ರಮಕ್ಕೆ ಮಾರುಹೋಗಿರುವ ನಟ ಉಪೇಂದ್ರ, ನಿರ್ದೇಶಕರಿಗೆ ಆಡಿಯೋ ಸಂದೇಶ ಕಳಿಸಿದ್ದು, ‘ನಿಮ್ಮ ಸಿನಿಮಾ ‘ಪ್ರೇಮದ ಊರಲಿ’ ನೋಡಿ ತುಂಬಾ ಖುಷಿಯಾಯಿತು. ನಿಮಗೆ ಬಿಡುವಿದ್ದಾಗ ಖುದ್ದಾಗಿ ಭೇಟಿಯಾಗಿ, ತಬ್ಬಿಕೊಂಡು ಅಭಿನಂದನೆ ತಿಳಿಸಬೇಕು ಎಂದಿದ್ದಾರೆ’ ಚಿತ್ರದ ಮೇಕಿಂಗ್ ಹಾಗೂ ತಾಂತ್ರಿಕ ಶ್ರೀಮಂತಿಕೆಯನ್ನು ಕೊಂಡಾಡಿದ ಅವರು, ಇದೊಂದು ಅಚ್ಚುಕಟ್ಟಾದ ಕಾವ್ಯಾತ್ಮಕ ಕೃತಿ ಎಂದು ಬಣ್ಣಿಸಿದ್ದಾರೆ.

‘ಈ ಸಿನಿಮಾ ನೋಡಿದಾಗ ನನಗೆ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು’ ಎಂದು ವರ್ಣಿಸಿದ್ದಾರೆ. ನಿಮ್ಮ ನಿರ್ದೇಶನ ಮತ್ತು ಕಥೆಗಾರಿಕೆಯ ಶೈಲಿ ನೋಡಿದರೆ ಚಿತ್ರರಂಗದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಎಂದು ಬೆನ್ನುತಟ್ಟಿದ್ದಾರೆ. ಉಪೇಂದ್ರ ಅವರ ಈ ಮಾತುಗಳು ಚಿತ್ರತಂಡದ ಉತ್ಸಾಹವನ್ನು ಇಮ್ಮಡಗೊಳಿಸಿದೆ. ಹೊಸತನದ ಹಾದಿಯಲ್ಲಿ ಸಾಗುತ್ತಿರುವ ‘ಪ್ರೇಮದ ಊರಲಿ’ ತಂಡಕ್ಕೆ ಈ ಪ್ರಶಂಸೆಯು ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ.

ಇದನ್ನೂ ಓದಿ:ಬಾಕ್ಸ್‌ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಅಬ್ಬರ: 19ನೇ ದಿನ 4 ಕೋಟಿ ರೂ. ಗಳಿಕೆ

‘ಪ್ರೇಮದ ಊರಲಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಬಿಡುಗಡೆ ಆದ ನಾಲ್ಕು ವಾರದಲ್ಲಿ ಸುಮಾರು 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಸಿನಿಮಾ ಅನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ನಾಯಕನಾಗಿ ಶ್ರೀರಾಮ್, ನಾಯಕಿಯರಾಗಿ ರಮಿಕಾ ಮತ್ತು ತೇಜಸ್ವಿನಿ ಪೂಣಚ್ಚ ನಟನೆ ಮಾಡಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟನೆ ಮಾಡಿದ್ದಾರೆ. ಸಿನಿಮಾ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಭಾರಿ ಗಳಿಕೆಯನ್ನು ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Wed, 14 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ