AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಹಿಟ್ ಸಿನಿಮಾ ಸೀಕ್ವೆಲ್ ಮೂಲಕ ಎಂಟ್ರಿ ಕೊಡಲಿರುವ ಬಾಲಯ್ಯ ಪುತ್ರ

Nandamuri Balakrishna: ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸುದ್ದಿ ಹಳೆಯದ್ದು. ಆದರೆ ಅವರು ನಟಿಸಬೇಕಿದ್ದ ಸಿನಿಮಾ ನಿಂತು ಹೋಗಿದ್ದು ಇದೀಗ ಅವರ ತಂದೆ ನಂದಮೂರಿ ಬಾಲಕೃಷ್ಣ ಅವರೇ ಬರೆದಿರುವ ಕತೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಸಿನಿಮಾ ಮೂಲಕ ಎಂಟ್ರಿ ನೀಡಲಿದ್ದಾರೆ. ವಿಶೇಷವೆಂದರೆ ಬಾಲಯ್ಯ 1991ರಲ್ಲಿ ನಟಿಸಿ ಸೂಪರ್ ಹಿಟ್ ಆಗಿದ್ದ ಸಿನಿಮಾದ ಸೀಕ್ವೆಲ್​​ ಮೂಲಕವೇ ಮೋಕ್ಷಜ್ಞ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.,

ಅಪ್ಪನ ಹಿಟ್ ಸಿನಿಮಾ ಸೀಕ್ವೆಲ್ ಮೂಲಕ ಎಂಟ್ರಿ ಕೊಡಲಿರುವ ಬಾಲಯ್ಯ ಪುತ್ರ
Mokshagna Balayya
ಮಂಜುನಾಥ ಸಿ.
|

Updated on:Nov 25, 2025 | 11:26 AM

Share

ನಂದಮೂರಿ (Nandamuri) ಕುಟುಂಬ ತೆಲುಗು ಚಿತ್ರರಂಗ ಹಾಗೂ ರಾಜಕೀಯದ ಮೇಲೆ ದಶಕಗಳಿಂದಲೂ ಹಿಡಿತ ಸಾಧಿಸಿಟ್ಟುಕೊಂಡಿದೆ. ನಂದಮೂರಿ ಕುಟುಂಬದ ಹಲವಾರು ಮಂದಿ ತೆಲುಗು ಚಿತ್ರರಂಗವನ್ನು ಆಳಿದ್ದಾರೆ. ಈಗಲೂ ಆಳುತ್ತಿದ್ದಾರೆ. ರಾಜಕೀಯದಲ್ಲಿಯೂ ಸಹ ಈ ಕುಟುಂಬಕ್ಕೆ ದೊಡ್ಡ ಯಶಸ್ಸು ದೊರೆತಿದೆ. ಇದೀಗ ಇದೇ ಕುಟುಂಬದ ಮತ್ತೊಬ್ಬ ಸದಸ್ಯ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸ್ಟಾರ್ ಹೀರೋ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಾಜ್ಞ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಮೊದಲೇ ಸಿನಿಮಾ ಒಂದರ ಘೋಷಣೆ ಮಾಡಿದ್ದರು. ಆದರೆ ಆ ಸಿನಿಮಾವನ್ನು ಪಕ್ಕಕ್ಕಿರಿಸಿ ಈಗ ಮತ್ತೊಂದು ಸಿನಿಮಾ ಅನ್ನು ಕೈಗೆತ್ತಿಕೊಂಡಿದ್ದಾರೆ.

ಮೋಕ್ಷಾಜ್ಞ, ತಮ್ಮ ತಂದೆ ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್ ಮೂಲಕ ಮೋಕ್ಷಜ್ಞ ನಾಯಕ ನಟನಾಗಿ ತೆಲುಗು ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷವೆಂದರೆ ಇದೇ ಸಿನಿಮಾನಲ್ಲಿ ಮೋಕ್ಷಜ್ಞ ತಂದೆ ಬಾಲಕೃಷ್ಣ ಸಹ ನಟಿಸಲಿದ್ದಾರೆ. ಈ ವಿಷಯವನ್ನು ಸ್ವತಃ ನಂದಮೂರಿ ಬಾಲಕೃಷ್ಣ ಖಾತ್ರಿ ಪಡಿಸಿದ್ದಾರೆ. ‘ನಾನು ಹಾಗೂ ನನ್ನ ಮಗ ಮೋಕ್ಷ, ‘ಆದಿತ್ಯ’ ಸಿನಿಮಾದ ಸೀಕ್ವೆಲ್​​​ನಲ್ಲಿ ಒಟ್ಟಿಗೆ ನಟಿಸಲಿದ್ದೇವೆ’ ಎಂದಿದ್ದಾರೆ.

‘ಆದಿತ್ಯ 369’ ಹೆಸರಿನ ಸಿನಿಮಾನಲ್ಲಿ ಬಾಲಯ್ಯ ನಟಿಸಿದ್ದರು. ಈ ಸಿನಿಮಾ 1991 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾನಲ್ಲಿ ಅಂಬರೀಶ್ ಪುರಿ ಸೇರಿದಂತೆ ಹಲವು ಜನಪ್ರಿಯ ನಟರುಗಳು ಇದ್ದರು. ಸಿನಿಮಾ ಮಾಯಾ ಲೋಕ, ವಿಜ್ಞಾನ ಅಂಶಗಳನ್ನು ಒಳಗೊಂಡಿದ್ದ ಫ್ಯಾಂಟಸಿ ಸಿನಿಮಾ ಆಗಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈಗಲೂ ಸಹ ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಸಿನಿಮಾ ಅನ್ನು ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ನಿರ್ದೇಶನ ಮಾಡಿದ್ದರು. ಈಗ ಇದೇ ಸಿನಿಮಾದ ಸೀಕ್ವೆಲ್ ನಲ್ಲಿ ಬಾಲಯ್ಯ ಪುತ್ರ ನಟಿಸಲಿದ್ದಾರೆ.

ಇದನ್ನೂ ಓದಿ:ಮೊದಲ ಬಾರಿಗೆ ತೆಲುಗು ಬಿಟ್ಟು ಹೊರಬಂದ ಬಾಲಕೃಷ್ಣ: ಗೆಲುವು ಸಾಧ್ಯವಾ?

ಈಗ ನಂದಮೂರಿ ಬಾಲಕೃಷ್ಣ ಮತ್ತು ಮೋಕ್ಷಜ್ಞ ನಟಿಸಲಿರುವ ಸಿನಿಮಾ ‘ಆದಿತ್ಯ 999 ಮ್ಯಾಕ್ಸ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಕತೆಯನ್ನು ಬಾಲಕೃಷ್ಣ ಅವರೇ ಬರೆದಿದ್ದಾರಂತೆ ಅದೂ ಕೇವಲ ಒಂದು ರಾತ್ರಿಯಲ್ಲಿ. ಈ ಸಿನಿಮಾವನ್ನು ಕೃಷ್ ಜಗರ್ಲಮುಡಿ ಅವರು ನಿರ್ದೇಶನ ಮಾಡಲಿದ್ದಾರೆ. ಕೃಷ್ ಅವರು ಈ ಹಿಂದೆ ಬಾಲಕೃಷ್ಣ ನಟನೆಯ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದು, ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಬಾಲಯ್ಯ ತನ್ನ ಮಗಲ ಲಾಂಚಿಂಗ್ ಸಿನಿಮಾದ ಜವಾಬ್ದಾರಿಯನ್ನು ಕ್ರಿಷ್​​ಗೆ ನೀಡಿದ್ದಾರೆ.

ಇದರ ಹೊರತಾಗಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಬಾಲಯ್ಯ ಉಗ್ರರೂಪಿ ಋಷಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಬೊಯಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಲಯ್ಯ ಅವರದ್ದು ದ್ವಿಪಾತ್ರ. ಈ ಸಿನಿಮಾದ ಬಳಿಕ ‘ಆದಿತ್ಯ 999 ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಬಾಲಯ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Tue, 25 November 25

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ