AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾನ್ಸಿ ನಂಬರ್ ಪಡೆಯಲು ಮತ್ತೊಂದು ಕಾರಿಗೆ ಕೊಡವಷ್ಟೇ ಹಣ ಕೊಟ್ಟ ಬಾಲಯ್ಯ

ನಟ ಹಾಗೂ ಶಾಸಕ ಬಾಲಕೃಷ್ಣ ಅವರು ತಮ್ಮ ಹೊಸ ಬಿಎಂಡಬ್ಲ್ಯೂ ಕಾರಿಗೆ TG09 F001 ನಂಬರ್ ಪ್ಲೇಟ್ ಪಡೆದುಕೊಂಡಿದ್ದಾರೆ. ಇದಕ್ಕಾಗಿ 7.75 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಇದು ಸೆಲೆಬ್ರಿಟಿಗಳು ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ.

ಫ್ಯಾನ್ಸಿ ನಂಬರ್ ಪಡೆಯಲು ಮತ್ತೊಂದು ಕಾರಿಗೆ ಕೊಡವಷ್ಟೇ ಹಣ ಕೊಟ್ಟ ಬಾಲಯ್ಯ
ಬಾಲಯ್ಯ
Follow us
ರಾಜೇಶ್ ದುಗ್ಗುಮನೆ
|

Updated on: Apr 20, 2025 | 3:07 PM

ತಮ್ಮ ಕಾರುಗಳಿಗೆ ಫ್ಯಾನ್ಸಿ ನಂಬರ್ ಪಡೆದುಕೊಳ್ಳಲು ಅನೇಕರು ಬಯಸುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ತಮ್ಮ ಲಕ್ಕಿ ನಂಬರ್ ಪಡೆಯಲು ಲಕ್ಷಾಂತರ ರೂಪಾಯಿ ನೀಡಲು ರೆಡಿ ಇರುತ್ತಾರೆ. ಕೆಲವರು ತಮ್ಮ ಎಲ್ಲ ಕಾರುಗಳಿಗೆ ಒಂದೇ ರೀತಿಯ ಸಂಖ್ಯೆ ನೀಡುತ್ತಾರೆ. ಈಗ ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಕೂಡ ಒಂದು ಕಾರಿನ ನಂಬರ್​ ಪ್ಲೇಟ್​ಗೆ ಬರೋಬ್ಬರಿ 7 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ಬಾಲಕೃಷ್ಣ ಅವರು ಇತ್ತೀಚೆಗೆ ಹೊಸ ಬಿಎಂಡಬ್ಲ್ಯೂ ಕಾರನ್ನು ಖರೀದಿ ಮಾಡಿದ್ದಾರೆ. ಅವರು ಕಾರಿನ ಸಂಖ್ಯೆ ಪಡೆಯಲು ಆಕ್ಷನ್​ಗೆ ಹೋಗಿದ್ದಾರೆ. TG09 F001 ಇದು ಅವರ ಹೊಸ ಕಾರಿನ ಸಂಖ್ಯೆ. ನಂಬರ್ 1 ಇದೆ ಎಂಬ ಕಾರಣಕ್ಕೆ ಅವರಿಗೆ 7.75 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಈ ಹಣದಲ್ಲಿ ಮತ್ತೊಂದು ಕಾರೇ ಬರುತ್ತಿತ್ತು ಎಂದು ಅನೇಕರು ಹೇಳಿದ್ದಾರೆ.

ಖೈರಾತಾಬಾದ್ ಆರ್​ಟಿಒನಲ್ಲಿ ಈ ಆಕ್ಷನ್ ನಡೆದಿದೆ. ಒಂದೇ ದಿನ ಆಕ್ಷನ್​ನಿಂದ ಈ ಆರ್​ಟಿಒಗೆ ಬರೋಬ್ಬರಿ 37.15 ಲಕ್ಷ ರೂಪಾಯಿ ಗಳಿಕೆ ಆಗಿದೆ. ಇದರಲ್ಲಿ ಬಾಲಕೃಷ್ಣ ಅವರು ಪಾವತಿಸಿದ್ದು ದೊಡ್ಡ ಮೊತ್ತ ಎನ್ನಲಾಗುತ್ತಿದೆ. ವೈಯಕ್ತಿವಾಗಿ ಮಾತ್ರವಲ್ಲದೆ, ಅನೇಕ ಕಂಪನಿಗಳು ಕೂಡ ಈ ಸಂಖ್ಯೆಯನ್ನು ಖರೀದಿ ಮಾಡಿವೆ ಅನ್ನೋದು ವಿಶೇಷ. ಫ್ಯಾನ್ಸಿ ಸಂಖ್ಯೆಯ ಹುಚ್ಚು ಕೇವಲ ಬಾಲಕೃಷ್ಣ ಅವರಿಗೆ ಮಾತ್ರ ಸೀಮಿತ ಆಗಿಲ್ಲ. ಜೂನಿಯರ್ ಎನ್​ಟಿಆರ್, ಯಶ್ ಸೇರಿದಂತೆ ಅನೇಕರು ಈ ರೀತಿ ಫ್ಯಾನ್ಸಿ ನಂಬರ್ ಖರೀದಿ ಮಾಡಿದ್ದಾರೆ. ಜೂನಿಯರ್ ಎನ್​ಟಿಆರ್ ಕಾರಿನಲ್ಲಿ ನಂಬರ್​ ಪ್ಲೇಟ್ 9999 ಇರುತ್ತದೆ. ಯಶ್ ಅವರ ಕಾರಿನ ಸಂಖ್ಯೆ 8055 (BOSS) ಕೂಡ ಗಮನ ಸೆಳೆದಿತ್ತು.

ಇದನ್ನೂ ಓದಿ
Image
ಭೀಕರ ಅಪಘಾತಕ್ಕೆ ಒಳಗಾದ ನಟ ಅಜಿತ್ ಕುಮಾರ್; ಶಾಕಿಂಗ್ ವಿಡಿಯೋ ವೈರಲ್
Image
ಉಪೇಂದ್ರ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ; ಐಶ್ವರ್ಯಾಗೆ ಈಗೆಷ್ಟು ವರ್ಷ?
Image
ಬಿಗ್ ಬಾಸ್ ಮನೆಯಲ್ಲಿದ್ದಾಗ ವೋಟ್ ಹಾಕಿದ ಫ್ಯಾನ್ಸ್​ಗೆ ತ್ರಿವಿಕ್ರಂ ಅವಮಾನ
Image
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ

ಇದನ್ನೂ ಓದಿ: ತೆಲುಗು ಯುವನಟನಿಗೆ ದುರಹಂಕಾರ ಎನ್ನುತ್ತಿರುವ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು

ಸಿನಿಮಾ ವಿಚಾರಕ್ಕೆ ಬರೋದಾದರೆ ಬಾಲಯ್ಯ ಅವರು ‘ಡಾಕು ಮಹರಾಜ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿಗೆ ರಿಲೀಸ್​ ಆಗಿ ಸೂಪರ್ ಹಿಟ್ ಆಯಿತು. ಈಗ ಅವರು ‘ಅಖಂಡ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಅಖಂಡ’ ಸಿನಿಮಾ ಹಿಟ್ ಆದ ಬಳಿಕ ಇದಕ್ಕೆ ಸೀಕ್ವೆಲ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ