AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಯುವನಟನಿಗೆ ದುರಹಂಕಾರ ಎನ್ನುತ್ತಿರುವ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು

Nandamuri Balakrishna: ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ತೆಲುಗಿನ ಯುವನಟನ ಮೇಲೆ ಸಿಟ್ಟಾಗಿದ್ದಾರೆ ಕಾರಣವೇನು.

ತೆಲುಗು ಯುವನಟನಿಗೆ ದುರಹಂಕಾರ ಎನ್ನುತ್ತಿರುವ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು
ಮಂಜುನಾಥ ಸಿ.
|

Updated on: Mar 07, 2024 | 6:09 PM

Share

ತೆಲುಗು ಚಿತ್ರರಂಗದಲ್ಲಿ (Tollywood) ನಂದಮೂರಿ ಬಾಲಕೃಷ್ಣ (Nandamuri Balakrishna) ತುಸು ರಫ್ ಆಂಡ್ ಟಫ್ ನಟ. ನಯ-ವಿನಯ ಕಡಿಮೆ, ಅನಿಸಿದ್ದು ಅಂದುಬಿಡುವುದು ಅವರ ಜಾಯಮಾನ. ಬಾಲಕೃಷ್ಣರ ಇದೇ ವ್ಯಕ್ತಿತ್ವ ಅವರ ಅಭಿಮಾನಿಗಳಿಗೂ ಇಷ್ಟ. ತಮ್ಮ ಮೆಚ್ಚಿನ ನಟನಂತೆ ಬಾಲಕೃಷ್ಣ ಅಭಿಮಾನಿಗಳೂ ಸಹ ತುಸು ಒರಟು ವ್ಯಕ್ತಿತ್ವದವರೇ ಎಂಬುದು ಚಿತ್ರರಂಗದ ಮಾತು. ಇದೀಗ ಬಾಲಕೃಷ್ಣ ಅಭಿಮಾನಿಗಳು ತೆಲುಗು ಯುವ ನಟನ ಹಿಂದೆ ಬಿದ್ದಿದ್ದು, ಯುವ ನಟನಿಗೆ ನಖ-ಶಿಖಾಂತ ನಿಂದಿಸುತ್ತಿದ್ದಾರೆ. ಆ ಯುವನಟ ವಿಶ್ವಕ್ ಸೇನ್.

ವಿಶ್ವಕ್ ಸೇನ್ ತೆಲುಗು ಚಿತ್ರರಂಗದಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೆ ವಿಶ್ವಕ್ ಸೇನ್ ಗೆ  ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸುವ ಅವಕಾಶ ಒದಗಿ ಬಂದಿತ್ತು. ಆದರೆ ವಿಶ್ವಕ್ ಸೇನ್ ಆ ಅವಕಾಶವನ್ನು ತಳ್ಳಿಹಾಕಿದ್ದಾರೆ. ಇದು ಬಾಲಕೃಷ್ಣ ಅಭಿಮಾನಿಗಳಿಗೆ ಹಾಗೂ ಸ್ವತಃ ಬಾಲಕೃಷ್ಣಗೆ ಬೇಸರ ತರಿಸಿದೆ. ಹಾಗಾಗಿ ಸಹಜವಾಗಿಯೇ ಬಾಲಕೃಷ್ಣ ಅಭಿಮಾನಿಗಳು ವಿಶ್ವಕ್ ಸೇನ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ತಮ್ಮ ಹೊಸ ಸಿನಿಮಾದ ಪ್ರಚಾರ ಸಂದರ್ಭದಲ್ಲಿ  ತಾವು ಬಾಲಕೃಷ್ಣರ ಸಿನಿಮಾದಲ್ಲಿ ಏಕೆ ನಟಿಸಲಿಲ್ಲ ಎಂಬ ಬಗ್ಗೆ ಮಾತನಾಡಿರುವ ವಿಶ್ವಕ್ ಸೇನ್, ‘ನಾನು ನನ್ನ ಮೆಚ್ಚಿನ‌ ಹೀರೋ ಜೊತೆ ನಟಿಸುವ ಸಿನಿಮಾ ಸಾಮಾನ್ಯವಾಗಿರಬಾರದು ಅದು ಅತ್ಯುತ್ತಮವಾಗಿರಬೇಕು ಎಂಬುದು ನನ್ನ ಆಸೆ ಹಾಗಾಗಿ ಈಗ ಬಂದ ಅವಕಾಶವನ್ನು ನಾನು ಒಪ್ಪಿಕೊಳ್ಳಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಮತ್ತೆ ಜೂ ಎನ್​ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು

ವಿಶ್ವಕ್‌ಸೇನ್ ರ ಈ ಉತ್ತರ ಬಾಲಯ್ಯ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿದೆ. ಈಗ ಬಂದಿರುವ ಕತೆ ಚೆನ್ನಾಗಿಲ್ಲ ಎನ್ನುವುದಾದರೆ ಬಾಲಯ್ಯ ಕೆಟ್ಟ ಕತೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಅರ್ಥವೇ? ಎಂಬುದು ಬಾಲಯ್ಯ ಅಭಿಮಾನಿಗಳ ಪ್ರಶ್ನೆ. ಅಲ್ಲದೆ ವಿಶ್ವಕ್ ಸೇನ್ ತಮ್ಮ ಜೊತೆ ನಟಿಸಲಿ ಎಂಬುದು ಬಾಲಯ್ಯ ಅವರ ಇಚ್ಛೆಯೂ ಆಗಿತ್ತು ಹಾಗಾಗಿಯೇ ವಿಶ್ವಕ್ ಸೇನ್ ಗೆ ಕತೆ ಹೇಳುವಂತೆ ಹೇಳಿದ್ದರು. ಆದರೆ ಬಾಲಯ್ಯನ ಸಿನಿಮಾ ಅವಕಾಶ ತಿರಸ್ಕರಿಸಿ ವಿಶ್ವಕ್ ಸೇನ್ ಬಾಲಯ್ಯಗೆ ಅಪಮಾನ ಮಾಡಿದ್ದಾರೆ ಎಂದು ಬಾಲಯ್ಯ ಅಭಿಮಾನಿಗಳು ಕುಪಿತಗೊಂಡಿದ್ದಾರೆ.

ವಿಶ್ವಕ್ ಸೇನ್ ಹೀಗೆ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಅರ್ಜುನ್ ಸರ್ಜಾ ಅವರು ನಿರ್ದೇಶಿಸಬೇಕಿದ್ದ ಸಿನಿಮಾಕ್ಕೂ ಹೀಗೆ ಮಾಡಿದ್ದ. ಅಡ್ವಾನ್ಸ್ ಎಲ್ಲ ಪಡೆದ ಬಳಿಕ ಇನ್ನೇನು ಮುಹೂರ್ತ ಮಾಡಬೇಕು ಎಂದಾಗ ಸಿನಿಮಾದಿಂದ ಹಿಂದೆ ಸರಿದಿದ್ದರು ವಿಶ್ವಕ್ ಸೇನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ