ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ; ಆತಂಕ್ಕೆ ಒಳಗಾದ ಟಾಲಿವುಡ್ ಫ್ಯಾನ್ಸ್

ಟಾಲಿವುಡ್‌ನ ಖ್ಯಾತ ನಟರಾದ ಎನ್‌ಟಿಆರ್, ರಾಮ್ ಚರಣ್, ಬಾಲಕೃಷ್ಣ ಮತ್ತು ಪವನ್ ಕಲ್ಯಾಣ್ ಸಾಲು ಸಾಲಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನೆಚ್ಚಿನ ತಾರೆಯರ ಆರೋಗ್ಯದ ಏರುಪೇರಿನಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಘಟನೆಗಳು ಸಿನಿಮಾ ಸೆಟ್‌ಗಳಲ್ಲಿನ ಸುರಕ್ಷತಾ ಕ್ರಮಗಳ ಜಾಗೃತಿಗೆ ಎಚ್ಚರಿಕೆಯ ಗಂಟೆಯಾಗಿವೆ.

ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ; ಆತಂಕ್ಕೆ ಒಳಗಾದ ಟಾಲಿವುಡ್ ಫ್ಯಾನ್ಸ್
ಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ

Updated on: Jul 28, 2026 | 1:35 PM

ಮುಖ್ಯಾಂಶಗಳು

  • ಟಾಲಿವುಡ್ ಸ್ಟಾರ್ ನಟರಿಗೆ ಸಾಲು ಸಾಲು ಗಾಯ
  • ಶಸ್ತ್ರಚಿಕಿತ್ಸೆ ಮುಗಿಸಿ ವಿಶ್ರಾಂತಿಯಲ್ಲಿ ತಾರೆಯರು
  • ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ ಅಪಘಾತಗಳು

ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಗಾಯಗೊಳ್ಳೋದು ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಟಾಲಿವುಡ್‌ನ ಸ್ಟಾರ್ ನಟರು ಶೂಟಿಂಗ್ ವೇಳೆ ಸಾಲು ಸಾಲಾಗಿ ಗಾಯಗೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ನೆಚ್ಚಿನ ನಟರ ಆರೋಗ್ಯದ ಸ್ಥಿತಿ ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ. ಎನ್‌ಟಿಆರ್ (NTR), ರಾಮ್ ಚರಣ್ ಮತ್ತು ಬಾಲಕೃಷ್ಣ ಸಿನಿಮಾ ಸೆಟ್‌ಗಳಲ್ಲಿ ಗಾಯಗೊಂಡಿರುವ ಪ್ರಮುಖರು. ಎಲ್ಲರೂ ಸರ್ಜರಿಗೆ ಒಳಗಾಗಿದ್ದು ಒಂದಷ್ಟು ಸಮಯ ವಿಶ್ರಾಂತಿ ಪಡೆಯುವ ಅಗತ್ಯವಿದೆ.

ಇತ್ತೀಚೆಗಷ್ಟೇ ನಟ ಜೂನಿಯರ್ ಎನ್‌ಟಿಆರ್ ‘ಡ್ರಾಗನ್’ ಸಿನಿಮಾ ಶೂಟಿಂಗ್ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ. ವೈದ್ಯರು ಅವರಿಗೆ ಆರರಿಂದ ಎಂಟು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಇದರಿಂದಾಗಿ ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ, ಸಿನಿಮಾ ಶೂಟ್ ಮುಂದಕ್ಕೆ ಹೋಗುವ ಭಯ ಕಾಡಿದೆ.

ಮತ್ತೊಂದೆಡೆ ನಟ ರಾಮ್ ಚರಣ್ ‘ಪೆದ್ದಿ’ ಚಿತ್ರದ ಕುಸ್ತಿ ದೃಶ್ಯಗಳ ಚಿತ್ರೀಕರಣದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಅವರಿಗೆ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಕೂಡ ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಹಿರಿಯ ನಟ ನಂದಮೂರಿ ಬಾಲಕೃಷ್ಣ ‘NBK111’ ಚಿತ್ರದ ಸಾಹಸ ದೃಶ್ಯದ ವೇಳೆ ಮೊಣಕಾಲಿಗೆ ತೀವ್ರವಾಗಿ ಗಾಯ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಅವರಿಗೆ ಮೂರು ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಕೂಡ ಹಲವು ವಾರಗಳ ವಿಶ್ರಾಂತಿಪಡೆಯಬೇಕಿದೆ.

ಇತ್ತೀಚೆಗೆ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಕೂಡ ಮುಂಬೈನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜಕೀಯ ಪ್ರಚಾರ ಮತ್ತು ಸಿನಿಮಾ ಶೂಟ್ ಕಾರಣಕ್ಕೆ ಹಳೆಯ ಗಾಯಗಳು ಉಲ್ಬಣಗೊಂಡಿತ್ತು. ಇನ್ನೂ ವಿಳಂಬ ಮಾಡೋದು ಬೇಡ ಎಂಬ ಕಾರಣಕ್ಕೆ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಡ್ರ್ಯಾಗನ್’ ಶೂಟಿಂಗ್ ವೇಳೆ ಜೂ. ಎನ್​ಟಿಆರ್​ ಭುಜಕ್ಕೆ ಗಾಯ; 2 ತಿಂಗಳು ವಿಶ್ರಾಂತಿ ಅಗತ್ಯ

ಸಿನಿಮಾಗಳ ಬಜೆಟ್ ಕೋಟಿ ದಾಟುತ್ತಿರುವ ಈ ಸಮಯದಲ್ಲಿ ಶೂಟಿಂಗ್ ವಿಳಂಬವಾದರೆ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಹೀಗಾಗಿ ಸಿನಿಮಾ ಸೆಟ್‌ಗಳಲ್ಲಿ ಸ್ಟಾರ್ ನಟರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಈಗ ಅನಿವಾರ್ಯವಾಗಿದೆ. ನೆಚ್ಚಿನ ನಟರು ಗಾಯಗೊಂಡರೆ ಅಭಿಮಾನಿಗಳಲ್ಲೂ ಸಹಜವಾಗಿಯೇ ಆತಂಕ ಹೆಚ್ಚುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us