ಮಗುವಿನ ನಿರೀಕ್ಷೆಯಲ್ಲಿದ್ದಾರಾ ಬೆಂಗಾಳಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್?
ಬೆಂಗಾಳಿ ನಟಿ, ಟಿಎಂಸಿ ಸಂಸದೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೆಂಗಾಳಿ ಬೆಡಗಿ, ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 31 ವರ್ಷದ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೆಲವು ತಿಂಗಳುಗಳ ಹಿಂದೆ, ನುಸ್ರತ್ ಜಹಾನ್ ಅವರ ಕೆಲವೊಂದು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ನುಸ್ರತ್ ಕೂಡಾ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ಅಧಿಕೃತವಾಗಿ ತಿಳಿಸಿರಲಿಲ್ಲ. ಇಂಡಿಯಾ ಟುಡೆ ವರದಿ ಮಾಡಿರುವ ಪ್ರಕಾರ, ನುಸ್ರತ್ ಆಗಸ್ಟ್ ಮಾಸಾಂತ್ಯಕ್ಕೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಇಂದು (ಆಗಸ್ಟ್ 25) ಆಸ್ಪತ್ರೆಗೆ ಭೇಟಿ ನೀಡಿದ್ದ ನುಸ್ರತ್, ಚೆಕಪ್ ಮಾಡಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಅವರು ಸದ್ಯದಲ್ಲೇ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಇಂಡಿಯಾ ಟುಡೆ ತಿಳಿಸಿದೆ. ನುಸ್ರತ್ ಜಹಾನ್ ಅವರ ವೈಯಕ್ತಿಕ ಬದುಕು ಗಾಸಿಪ್ಗಳಿಗೆ ಆಹಾರವಾಗಿತ್ತು. ಕಾರಣ, ಅವರು ಟರ್ಕಿಯಲ್ಲಿ 2019ರಂದು ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದರು. ಆದರೆ ಕೆಲವು ಸಮಯದ ನಂತರ 2020ರಲ್ಲಿ ನುಸ್ರತ್, ತಮ್ಮೀರ್ವರ ಮದುವೆ ಭಾರತದ ಕಾನೂನಿನ ಅನ್ವಯ ನಡೆದಿಲ್ಲ ಎಂದಿದ್ದರು.
ಪತಿ ನಿಖಿಲ್ ಅವರಿಂದ ಬೇರೆಯಾಗಿದ್ದರ ಕುರಿತು ಹೇಳಿಕೆಯೊಂದನ್ನು ನೀಡಿದ್ದ ನುಸ್ರತ್, ನಿಖಿಲ್ ಜೈನ್ರೊಂದಿಗೆ ತನ್ನ ವಿವಾಹವು ಭಾರತದ ಕಾನೂನು ವ್ಯವಸ್ಥೆ ಅಡಿಯಲ್ಲಿ ಯಾವತ್ತೂ ಮಾನ್ಯವಾಗಿರದ ಕಾರಣ ವಿಚ್ಛೇದನ ಪಡೆಯುವ ಅಗತ್ಯ ಸೃಷ್ಟಿಯಾಗದು. ತಮ್ಮ ಮದುವೆ ಅಂತರ್-ಧರ್ಮೀಯ ಮತ್ತು ಟರ್ಕಿ ದೇಶದ ಮದುವೆ ನಿಯಮಗಳ ಪ್ರಕಾರ ಆ ದೇಶದಲ್ಲಿ ನಡೆದಿದ್ದ ಕಾರಣ ಭಾರತದ ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ಅದು ಅಮಾನ್ಯವಾಗುತ್ತದೆ ಎಂದು ಆಕೆ ಹೇಳಿದ್ದರು.
ನುಸ್ರತ್ ಜಹಾನ್ ಹಂಚಿಕೊಂಡಿದ್ದ ಚಿತ್ರ:
View this post on Instagram
ಪ್ರಸ್ತುತ ನುಸ್ರತ್ ನಟ ಯಶ್ದಾಸ್ ಗುಪ್ತಾ ಅವರೊಂದಿಗೆ ಓಡಾಡುತ್ತಿದ್ದಾರೆ. ಆದರೆ ಈ ಕುರಿತು ಈರ್ವರು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ:
Emraan Hashmi: ‘ಸೀರಿಯಲ್ ಕಿಸ್ಸರ್ ಎಂಬ ಬಿರುದು ನನಗೆ ಸಾಕಾಗಿ ಹೋಗಿತ್ತು’ ಎಂದ ಇಮ್ರಾನ್ ಹಶ್ಮಿ; ಏಕಂತೆ?
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್ ಬಾಸ್ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ
(Bengali actress and TMC MP Nusrat Jahaan expecting child soon says reports)