ಬೆಂಗಳೂರು: ಎಣ್ಣೆ ಸಪ್ಲೈ ತಡವಾಗಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ; 23 ದಿನದ ಬಳಿಕ ಯುವಕ ಸಾವು

ಬಾರ್​ನಲ್ಲಿ ಸಪ್ಲೈ ತಡವಾಗಿದ್ದಕ್ಕೆ ಸಿಬ್ಬಂದಿ ಬಸವರಾಜು (39) ಎಂಬುವವರ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಬೆಂಗಳೂರು: ಎಣ್ಣೆ ಸಪ್ಲೈ ತಡವಾಗಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ; 23 ದಿನದ ಬಳಿಕ ಯುವಕ ಸಾವು
ಬಾರ್​ ಸಿಬ್ಬಂದಿ ಮೇಲೆ ಹಲ್ಲೆ, ಯುವಕ ಸಾವು
Edited By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2023 | 12:07 PM

ಬೆಂಗಳೂರು: ಬಾರ್​ನಲ್ಲಿ ಸಪ್ಲೈ ತಡವಾಗಿದ್ದಕ್ಕೆ ಸಿಬ್ಬಂದಿ ಬಸವರಾಜು (39) ಎಂಬುವವರ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ ನಿರ್ಲಕ್ಷ್ಯವಹಿಸಿದ್ದಾನೆ. ಬಳಿಕ ಮಾರನೇ ದಿನ ತಲೆ ತಿರುಗುವಂತಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ 23 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಾದ ಸುರೇಶ್(29), ವಿನೋದ್ ಕುಮಾರ್ ( 28) ಎಂಬುವವರನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಇನ್ನು ವಾಟರ್ ಫಿಲ್ಟರ್ ,ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಜನವರಿ‌ 23 ರ ಸಂಜೆ ಕೆ.ಎಸ್ ಲೇಔಟ್​ನ ಎಸ್.ಆರ್.ಆರ್ ಬಾರ್​ಗೆ ಕುಡಿಯಲು ಬಂದಿದ್ದರು. ಈ ವೇಳೆ ಸಪ್ಲೈ ಕೊಡಲು ತಡ ಮಾಡಿದ್ದ ಸಿಬ್ಬಂದಿ ಬಸವರಾಜನ ಜೊತೆ ಗಲಾಟೆ ಮಾಡಿ, ಬಾರ್​ನಿಂದ ಎದ್ದು ಹೋಗಿದ್ದ ಸುರೇಶ್ ಮತ್ತು ವಿನೋದ್, ನಂತರ ಬೇರೆ ಬಾರ್​ನಲ್ಲಿ ಕುಡಿದು ಇದೇ ಬಾರ್ ಬಳಿ ಬಂದಿದ್ದಾರೆ. ರಾತ್ರಿ 10.30 ಕ್ಕೆ ಸಿಬ್ಬಂದಿ ಮಲಗಿದ್ದಾಗ ಗಲಾಟೆ ಮಾಡಿ, ಬಸವರಾಜನ ತಲೆ‌ ಹಿಡಿದು ಗೋಡೆಗೆ ಗುದ್ದಿದ್ದಾರೆ. ಈ ವೇಳೆ ಬಸವರಾಜ ತಲೆಗೆ ಗಾಯವಾಗಿತ್ತು. ಸ್ಕ್ಯಾನ್ ಮಾಡಿ ನೋಡಿದಾಗ ಬ್ಲಡ್ ಕ್ಲಾಟ್ ಆಗಿರೋದು ಗೊತ್ತಾಗಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಕೋಮಾಗೆ ತೆರಳಿದ್ದಾನೆ. 25 ನೇ ತಾರೀಕಿನಂದು ಕೋಮಾಗೆ ಹೋಗಿದ್ದ ಬಸವರಾಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಫೆಬ್ರವರಿ 15 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us