ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ರಮ್ಯಾ, ಕಂಗನಾ ಸೇರಿದಂತೆ ಚಿತ್ರರಂಗದ ಕಂಬನಿ
Harsha Death: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.
ಬಜರಂಗದಳ ಕಾರ್ಯಕರ್ತ ಹರ್ಷ (Harsha) ಹತ್ಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಖಂಡನೆ, ಸಂತಾಪ ವ್ಯಕ್ತವಾಗಿದೆ. ಹಲವೆಡೆ ಪ್ರತಿಭಟನೆ, ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಚಿತ್ರರಂಗದ ಸೆಲೆಬ್ರಿಟಿಗಳೂ ಪ್ರಕರಣದ ಕುರಿತು ಮಾತನಾಡಿದ್ದಾರೆ. ಕೊಲೆ ಪ್ರಕರಣಕ್ಕೆ ನ್ಯಾಯ ಸಿಕ್ಕಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಹರ್ಷ ಅವರ ತಾಯಿ ಪದ್ಮ ಮಗನನ್ನು ನೆನದು ದುಃಖಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿರುವ ಅವರು, ‘ಕರುಳು ಹಿಂಡುವ ದೃಶ್ಯವಿದು’ ಎಂದು ಬರೆದು ದುಃಖ ತೋಡಿಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟಿ ರಮ್ಯಾ (Ramya) ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹರ್ಷ ಹತ್ಯೆಯ ಕುರಿತು ಸಂತಾಪ ಸೂಚಿಸಿದ್ದಾರೆ. ‘‘ಒಡೆದು ಆಳುವ ರಾಜಕೀಯಕ್ಕೆ ಇನ್ನೆಷ್ಟು ಜನರನ್ನು ನಾವು ಕಳೆದುಕೊಳ್ಳಬೇಕು?’’ ಎಂದು ಪ್ರಶ್ನಿಸಿರುವ ರಮ್ಯಾ, ‘‘ಶಾಂತಿ, ಏಕತೆ ಹಾಗೂ ಸಾಮರಸ್ಯ ಮಾತ್ರ ಮುಂದಿನ ಆಯ್ಕೆ’’ ಎಂದು ಅವರು ಹೇಳಿದ್ದಾರೆ.
ರಮ್ಯಾ ಹಂಚಿಕೊಂಡ ಸ್ಟೋರಿ ಇಲ್ಲಿದೆ:
ಬಹುಭಾಷಾ ನಟಿ ನಟಿ ರವೀನಾ ಟಂಡನ್ ಘಟನೆಯ ಕುರಿತು ಟ್ವೀಟ್ ಮಾಡಿದ್ದು, ‘ಹರ್ಷ ಅವರ ಸಾವಿಗೆ ನ್ಯಾಯ ಸಿಗಬೇಕು’ ಎಂದು ಬರೆದುಕೊಂಡಿದ್ದಾರೆ.
ರವೀನಾ ಟಂಡನ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
#JusticeForHarsha ?????
— Raveena Tandon (@TandonRaveena) February 21, 2022
ಸ್ಯಾಂಡಲ್ವುಡ್ ನಟ ಪ್ರಥಮ್ ಹರ್ಷ ಅವರ ಕುಟುಂಬಕ್ಕೆ ಧನಸಹಾಯ ಮಾಡಿದ್ದಾರೆ. ಹುಡುಗನ ಕುಟುಂಬಕ್ಕೆ ₹ 25,000 ರೂಗಳನ್ನು ನೀಡಿರುವ ಅವರು, ‘ಪ್ರಸ್ತುತ ಕಷ್ಟದಲ್ಲಿದ್ದೇನೆ. ನಟಭಯಂಕರ ಚಿತ್ರ ರಿಲೀಸ್ ಆದ ನಂತರ ಮತ್ತಷ್ಟು ಸಹಾಯ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಥಮ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಹಿರಿಯ ನಟಿ ಮಾಳವಿಕಾ ಅವಿನಾಶ್ ಘಟನೆಯ ಕುರಿತು ಪ್ರತಿಕ್ರಿಯಿಸಿ, ಹರ್ಷ ಅವರಿಗೆ ಸದ್ಗತಿ ದೊರೆಯಲಿ ಎಂದು ಕಂಬನಿ ಮಿಡಿದಿದ್ದು, ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಇದರೊಂದಿಗೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಹರ್ಷ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇದನ್ನೂ ಓದಿ:
Shivamogga Violence Live: ವಿರೋಧ ಪಕ್ಷದ ಗದ್ದಲವೇ ಹರ್ಷ ಕೊಲೆಗೆ ಕಾರಣ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಆರೋಪ
ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್