‘ದಯವಿಟ್ಟು ಎಲ್ಲರೂ ಮೈಮೇಲೆ ಬೀಳಬೇಡಿ’; ಎಲ್ಲರಿಗೂ ಆಹಾರ ಆಗ್ತಿದ್ದಾರೆ ಪ್ರತಾಪ್

ಮೊದಲಿಗೆ ಪ್ರತಾಪ್ ನಾಯಕನಾಗೋದು ಅನೇಕರಿಗೆ ಇಷ್ಟ ಇರಲಿಲ್ಲ. ಆದಾರೂ ಅವರು ಹಠದಿಂದ ಲೀಡರ್ ಆದರು. ಮೊದಲ ಎರಡು ಟಾಸ್ಕ್ ಗೆದ್ದು ಅವರು ವಿಶೇಷ ಅಧಿಕಾರ ಪಡೆದರು. ಈ ಅಧಿಕಾರದಿಂದ ಅವರು ಸಂಗೀತಾ ಹಾಗೂ ಭಾಗ್ಯಶ್ರೀ ಅವರನ್ನು ಸೇವ್ ಮಾಡಿದರು.

‘ದಯವಿಟ್ಟು ಎಲ್ಲರೂ ಮೈಮೇಲೆ ಬೀಳಬೇಡಿ’; ಎಲ್ಲರಿಗೂ ಆಹಾರ ಆಗ್ತಿದ್ದಾರೆ ಪ್ರತಾಪ್
ಸಂತೋಷ್-ಪ್ರತಾಪ್
Updated By: ರಾಜೇಶ್ ದುಗ್ಗುಮನೆ

Updated on: Nov 08, 2023 | 2:55 PM

ಡ್ರೋನ್ ಪ್ರತಾಪ್ (Drone Prathap) ಅವರ ಜನಪ್ರಿಯತೆ ಹೆಚ್ಚಿದೆ. ಅವರನ್ನು ಹೊರಗೆ ನೋಡಿದ್ದಕ್ಕೂ, ಬಿಗ್ ಬಾಸ್ ಒಳಗೆ ನೋಡಿದ್ದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅವರ ನಿಜವಾದ ವ್ಯಕ್ತಿತ್ವ ಗೊತ್ತಾದ ಬಳಿಕ ಜನರಿಗೆ ಅವರು ಇಷ್ಟ ಆಗೋಕೆ ಶುರುವಾದರು. ಆದರೆ, ದೊಡ್ಮನೆಯಲ್ಲಿ ಅವರನ್ನೇ ಅನೇಕರು ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ದೊಡ್ಡ ಕಿತ್ತಾಟ ನಡೆದಿದೆ. ಪ್ರತಾಪ್ ತಂಡದವರೇ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಇದು ಪ್ರತಾಪ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಬಿಗ್ ಬಾಸ್​ನಲ್ಲಿ ಈ ವಾರ ಎರಡು ತಂಡ ಮಾಡಲಾಗಿದೆ. ಅಸಲಿಗೆ ಹೇಳಬೇಕು ಎಂದರೆ ಇದು ಹಿಂದಿನ ವಾರ ಮಾಡಿರುವ ತಂಡವೇ. ಆದರೆ, ಕ್ಯಾಪ್ಟನ್ ಮಾತ್ರ ಬದಲಾಗಿದ್ದಾರೆ. ಕಳೆದ ವಾರ ಸಂಗೀತಾ ಕ್ಯಾಪ್ಟನ್ ಆಗಿದ್ದ ತಂಡವನ್ನು ಪ್ರತಾಪ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಿನಯ್ ಕ್ಯಾಪ್ಟನ್ ಆಗಿದ್ದ ತಂಡ ಸಿರಿ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ಈಗ ಪ್ರತಾಪ್ ವಿರುದ್ಧ ಅವರ ತಂಡದವರು ಮುಗಿಬಿದ್ದಿದ್ದಾರೆ.

ಮೊದಲಿಗೆ ಪ್ರತಾಪ್ ನಾಯಕನಾಗೋದು ಅನೇಕರಿಗೆ ಇಷ್ಟ ಇರಲಿಲ್ಲ. ಆದಾರೂ ಅವರು ಹಠದಿಂದ ಲೀಡರ್ ಆದರು. ಮೊದಲ ಎರಡು ಟಾಸ್ಕ್ ಗೆದ್ದು ಅವರು ವಿಶೇಷ ಅಧಿಕಾರ ಪಡೆದರು. ಈ ಅಧಿಕಾರದಿಂದ ಅವರು ಸಂಗೀತಾ ಹಾಗೂ ಭಾಗ್ಯಶ್ರೀ ಅವರನ್ನು ಸೇವ್ ಮಾಡಿದರು. ಸ್ನೇಹಿತ್ ನಾಮಿನೇಷನ್​ನಿಂದ ತಪ್ಪಿಸಿಕೊಳ್ಳದಂತೆ ನಿರ್ಬಂಧ ಹೇರಿದರು.

ಈಗ ನವೆಂಬರ್ 8ರ ಎಪಿಸೋಡ್​ನಲ್ಲಿ ಎಲ್ಲರೂ ಪ್ರತಾಪ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಅವರು ಸೈಲೆಂಟ್ ಆಗಿದ್ದಾರೆ ಎನ್ನುವ ಕಾರಣಕ್ಕೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಬಂದರು. ಇದರಿಂದ ಪ್ರತಾಪ್ ಸಿಟ್ಟಾದರು. ‘ದಯವಿಟ್ಟು ಎಲ್ಲರೂ ಮೈಮೇಲೆ ಬೀಳಬೇಡಿ’ ಎಂದು ಅವರು ಕೋರಿದ್ದಾರೆ. ಅವರು ಸಿಟ್ಟಿನಿಂದ ಎದ್ದು ಹೋಗಿದ್ದಾರೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಕೆಟ್ಟ ದೃಷ್ಠಿಯಿಂದ ನೋಡುತ್ತಾರೆಯೇ? ಬಿಗ್​ಬಾಸ್ ಮನೆ ಮಹಿಳೆಯರು ಹೇಳಿದ್ದೇನು?

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಬಾರಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಸದ್ಯ ಇರುವ ಸ್ಪರ್ಧಿಗಳ ಪೈಕಿ ಪ್ರತಾಪ್ ಫೇವರಿಟ್ ಕ್ಯಾಂಡಿಡೇಟ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ