ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

Bigg Boss Kannada: ‘ಮೊದಲು ಶಮಂತ್​ ನನಗೆ ಲೈನ್​ ಹೊಡೀತಿದ್ದ. ಆದರೆ ಈಗ ಅಕ್ಕ ಅಂತಿದ್ದಾನೆ. ಅದು ಗಲೀಜು ಅಲ್ಲವಾ?’ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆ ಆಗಿದೆ.

ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!
ಶಮಂತ್​ ಬ್ರೋ ಗೌಡ - ದಿವ್ಯಾ ಉರುಡುಗ

Updated on: Apr 12, 2021 | 12:22 PM

ಬಿಗ್​ ಬಾಸ್​ ಮನೆಯಲ್ಲಿ ಏನು ಬೇಕಾದರೂ ನಡೆಯಬಹುದು. ಎಂಥ ಟ್ವಿಸ್ಟ್​ ಸಿಕ್ಕರೂ ಕೂಡ ಅದನ್ನು ಸ್ವೀಕರಿಸಲು ಪ್ರೇಕ್ಷಕರು ಸಿದ್ಧರಾಗಿರಬೇಕು. ಏ.12ರ ಎಪಿಸೋಡ್​ನಲ್ಲಿ ಶಮಂತ್​ ಬ್ರೋ ಗೌಡ ಅವರು ಅಂಥ ಒಂದು ಸಡನ್​ ಟ್ವಿಸ್ಟ್​ ನೀಡಿದ್ದಾರೆ. ಅದರ ಬಗ್ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಪ್ರಾರಂಭದಲ್ಲಿ ದಿವ್ಯಾ ಉರುಡುಗ ಬಗ್ಗೆ ಬೇರೆ ರೀತಿಯ ಭಾವನೆ ಇಟ್ಟುಕೊಂಡಿದ್ದ ಅವರು ಈಗ ಏಕಾಏಕಿ ಅಕ್ಕ ಎಂದು ಕರೆಯುವ ಮೂಲಕ ವರಸೆ ಬದಲಾಯಿಸಿದ್ದಾರೆ! ಆ ಮಾತಿಗೆ ದಿವ್ಯಾ ಉರುಡುಗ ಕೊಟ್ಟ ಪ್ರತಿಕ್ರಿಯೆ ಕೂಡ ಅಷ್ಟೇ ಖಡಕ್​ ಆಗಿತ್ತು.

ಇತ್ತೀಚೆಗೆ ಶಮಂತ್​ ಬ್ರೋ ಗೌಡ ಅವರಿಗೆ ಕುತ್ತಿಗೆ ನೋವಾಗಿತ್ತು. ಅದನ್ನು ಸರಿಪಡಿಸುತ್ತೇನೆ ಎಂದು ದಿವ್ಯಾ ಉರುಡುಗ ಪ್ರಯತ್ನಿಸುತ್ತಿದ್ದರು. ಆಗ ದಿವ್ಯಾಗೆ ಶಮಂತ್​ ಅವರು ಅಕ್ಕ ಎಂದು ಕರೆದರು. ‘ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದೀಯ. ಮೊದಲು ನನ್ನನ್ನು ಹೇಗೆ ಮಾತನಾಡಿಸುತ್ತಿದ್ದೆ? ಆದರೆ ಈಗ ಈ ರೀತಿ ಹೇಳುತ್ತಿದ್ದೀಯ’ ಎಂದು ದಿವ್ಯಾ ತಕ್ಷಣ ತಿರುಗೇಟು ನೀಡಿದರು. ಅದನ್ನೆಲ್ಲ ನಟಿ ವೈಜಯಂತಿ ಅಡಿಗ ನೋಡುತ್ತಿದ್ದರು.

‘ಮೊದಲು ಶಮಂತ್​ ನನಗೆ ಲೈನ್​ ಹೊಡೀತಿದ್ದ. ಆದರೆ ಈಗ ಅಕ್ಕ ಅಂತಿದ್ದಾನೆ. ಅದು ಗಲೀಜು ಅಲ್ಲವಾ? ಅದರ ಬದಲು ಫ್ರೆಂಡ್​ ಅಂತ ಹೇಳಬಹುದು. ಅವನು ತುಂಬ ಮುಗ್ಧ ಎಂದು ನನಗೆ ಅನಿಸುತ್ತದೆ. ತುಂಬ ಒಳ್ಳೆಯವನು. ನನಗಿಂತ ಚಿಕ್ಕವನು’ ಎಂದು ವೈಜಯಂತಿಗೆ ದಿವ್ಯಾ ಉರುಡುಗ ಎಲ್ಲವನ್ನೂ ಬಿಡಿಸಿ ಹೇಳಿದ್ದಾರೆ.

ಆರಂಭದ ದಿನಗಳಲ್ಲಿ ಶಮಂತ್​ ಅವರು ದೊಡ್ಮನೆಯ ಹುಡುಗಿಯರ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದರು. ಆದರೆ ಅವರಿಗೆ ಯಾರೂ ಮನಸೋಲಲೇ ಇಲ್ಲ. ಇದು ಬಿಗ್​ ಬಾಸ್​ ಮನೆಯಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಒಬ್ಬಳನ್ನಾದರೂ ಪಟಾಯಿಸಿ ತೋರಿಸು ಅಂತ ಶಮಂತ್​ಗೆ ಶುಭಾ ಪೂಂಜಾ ಬಹಿರಂಗ ಸವಾಲು ಹಾಕಿದ್ದರು. ಅದರಲ್ಲೂ ಶಮಂತ್​ ವಿಫಲರಾದರು. ಈಗ ಅವರು ದಿವ್ಯಾಗೆ ಅಕ್ಕ ಎಂದು ಹೇಳಿರುವುದು ಸುದೀಪ್​ ಗಮನಕ್ಕೂ ಬಂದಿದೆ. ವೀಕೆಂಡ್​ ಎಪಿಸೋಡ್​ನಲ್ಲಿ ಶಮಂತ್​ಗೆ ಇದೇ ವಿಚಾರವಾಗಿ ಸುದೀಪ್​ ಪ್ರಶ್ನಿಸಿದರು.

ಅದೇನೇ ಇರಲಿ, ಸದ್ಯಕ್ಕಂತೂ ಅರವಿಂದ್​ ಕೆಪಿ ಜೊತೆಗೆ ದಿವ್ಯಾ ಉರುಡುಗ ಅವರ ಆಪ್ತತೆ ಹೆಚ್ಚಾಗಿದೆ. ಇಬ್ಬರ ನಡುವಿನ ಸ್ನೇಹ-ಪ್ರೀತಿ ಕಂಡು ಮನೆಯ ಸದಸ್ಯರು ಅಚ್ಚರಿಪಡುತ್ತಿದ್ದಾರೆ. ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ಅವರಿಬ್ಬರು ಮದುವೆ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಜೊತೆಗೆ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ಕೂಡ ಜೋಡಿಹಕ್ಕಿಗಳ ರೀತಿಯಲ್ಲಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

(Bigg Boss Kannada 8 : Shamanth Bro Gowda calls Divya Uruduga as his sister BBK8)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us