Bigg Boss Kannada: ‘ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’: ಪುರುಷ ಸ್ಪರ್ಧಿಗಳ ಬಗ್ಗೆ ಸುದೀಪ್​ ಎದುರು ಶುಭಾ ಅಳಲು!

| Updated By: ರಾಜೇಶ್ ದುಗ್ಗುಮನೆ

Updated on: Mar 28, 2021 | 4:46 PM

Shubha Poonja: ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆಯಲ್ಲಿ ನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಐದನೇ ವಾರಕ್ಕೆ ಅವರ ಪಯಣ ಮುಂದುವರಿಸಿದೆ. ಈ ಸಂದರ್ಭದಲ್ಲಿ ಅವರು ಕೆಲವರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.

Bigg Boss Kannada: ‘ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’: ಪುರುಷ ಸ್ಪರ್ಧಿಗಳ ಬಗ್ಗೆ ಸುದೀಪ್​ ಎದುರು ಶುಭಾ ಅಳಲು!
ಶುಭಾ ಪೂಂಜಾ
Follow us on

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ನಟಿ ಶುಭಾ ಪೂಂಜಾ ಹಲವು ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಚಿಕ್ಕ ಮಗುವಿನ ರೀತಿ ಅವರು ವರ್ತಿಸುತ್ತಾರೆ. ಆ ಕಾರಣಕ್ಕಾಗಿ ಅವರು ಕ್ಯೂಟ್​ ಆಗಿ ಕಾಣುತ್ತಾರೆ ಎಂಬುದು ಮನೆಯ ಸದಸ್ಯರ ಭಾವನೆ. ಹೀಗೆ ನಗುನಗುತ್ತಾ ಕಾಲ ಕಳೆಯುತ್ತಿರುವ ಶುಭಾ ಪೂಂಜಾ ಯಾವಾಗ ಅಳುತ್ತಾರೆ ಎಂಬುದು ಕೂಡ ಗೊತ್ತಾಗುವುದಿಲ್ಲ. ಈ ವಿಚಾರ ಕೂಡ ಬಿಗ್​ ಬಾಸ್​ ಮನೆಯಲ್ಲಿ ಆಗಾಗ ಚರ್ಚೆ ಆಗುತ್ತದೆ. ಮೂರವೇ ವಾರದ ವೀಕೆಂಡ್​ ಪಂಚಾಯಿತಿಯಲ್ಲಿ ಶುಭಾ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಕಳೆದ ವಾರ ಒಂದು ಟಾಸ್ಕ್​ ನಿಭಾಯಿಸುವ ಸಂದರ್ಭದಲ್ಲಿ ಶುಭಾ ಪೂಜಾ ಅವರ ಕಾಲಿಗೆ ಗಾಯ ಆಗಿತ್ತು. ಆಗ ಅವರು ಚಿಕ್ಕ ಮಕ್ಕಳಂತೆ ಅಳಲು ಶುರು ಮಾಡಿದರು. ಅಂಗಾಲಿನಲ್ಲಿ ಗಾಯ ಆಗಲು ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ರಾಜೀವ್​ ಮತ್ತು ಮಂಜು ಪ್ರಯತ್ನಿಸಿದರು. ಕಾಲಿಗೆ ಮುಳ್ಳು ಅಥವಾ ಗ್ಲಾಸ್​ ಚುಚ್ಚಿಕೊಂಡಿರಬಹುದು ಎಂದು ಅವರು ಪರಿಶೀಲಿಸುತ್ತಿದ್ದರು. ಆದರೆ ಆ ಗಾಯವನ್ನು ಮುಟ್ಟಲು ಶುಭಾ ಅವಕಾಶವೇ ನೀಡುತ್ತಿರಲಿಲ್ಲ. ಈ ಪ್ರಸಂಗ ಸಿಕ್ಕಾಪಟ್ಟೆ ಕಾಮಿಡಿ ಆಗಿತ್ತು.

ನಂತರ ಶುಭಾ ಅವರನ್ನು ಬಾತ್​ ರೂಮ್​ಗೆ ಕರೆದುಕೊಂಡು ಹೋಗಿ, ಗಾಯ ಆಗಿದ್ದ ಜಾಗವನ್ನು ಕ್ಲೀನ್​ ಮಾಡಲಾಯಿತು. ಆಗಲೂ ಶುಭಾ ಪೂಂಜಾ ಚಿಕ್ಕ ಹುಡುಗಿಯಂತೆ ಅಳುತ್ತಿದ್ದರು. ಅವರ ವರ್ತನೆ ನೋಡಿ ಮನೆಯ ಇನ್ನುಳಿದ ಸದಸ್ಯರು ಬಿದ್ದು ಬಿದ್ದು ನಗುತ್ತಿದ್ದರು. ಇದೇ ವಿಚಾರ ಸುದೀಪ್​ ಜೊತೆಗಿನ ವಾರದ ಪಂಚಾಯಿಯಲ್ಲಿ ಚರ್ಚೆಗೆ ಬಂತು. ಹೇಗಾದರೂ ಮಾಡಿ ಆ ಗಾಯದ ಚರ್ಮವನ್ನು ಕಿತ್ತು ಹಾಕಿ ಎಂದು ರಾಜೀವ್​ ಮತ್ತು ಮಂಜುಗೆ ಸುದೀಪ್​ ಸೂಚನೆ ನೀಡಿದರು. ಆ ಮಾತು ಕೇಳಿ ಶುಭಾಗೆ ಜೀವವೇ ಹಾರಿಹೋದಂತೆ ಆಯಿತು.

‘ಈಗಾಗಲೇ ಅವರಿಬ್ಬರು ನನಗೆ ತುಂಬ ಹಿಂಸೆ ಕೊಡ್ತಿದ್ದಾರೆ’ ಎಂದು ಮಂಜು ಪಾವಗಡ ಮತ್ತು ರಾಜೀವ್ ಬಗ್ಗೆ ಸುದೀಪ್​ ಬಳಿ ಶುಭಾ ಪೂಂಜಾ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ ಈ ಪ್ರಸಂಗ ಕಾಮಿಡಿ ಆಗಿತ್ತು. ಯಾವುದಾದರೂ ಟಾಸ್ಕ್​ ಇದ್ದಾಗ ಶುಭಾ ಕಾಲಿನ ಗಾಯದ ಚರ್ಮ ಕಿತ್ತು ಹಾಕಿ ಎಂದು ಕಿಚ್ಚ ಸುದೀಪ್​ ಕೂಡ ತಮಾಷೆ ಮಾಡುವ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ನಗುವಿನ ವಾತಾವರಣ ಮೂಡಿಸಿದರು.

ಇನ್ನು, ಬಾಯ್​ಫ್ರೆಂಡ್​ನನ್ನು ಮಿಸ್​ ಮಾಡಿಕೊಳ್ಳುತ್ತಿರುವ ಶುಭಾ ಪೂಂಜಾಗೆ ಬಿಗ್​ ಬಾಸ್​ ಮಾ.27ರ ವೀಕೆಂಡ್​​ ಶೋನಲ್ಲಿ ಅಚ್ಚರಿವೊಂದನ್ನು ನೀಡಿದರು. ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿಸಲಾಯಿತು. ‘ನೀನು ಬಿಗ್​ ಬಾಸ್​ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್​ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ’ ಎಂಬ ವಾಯ್ಸ್​ ಮೆಸೇಜ್​ ಕಳಿಸಿದ್ದರು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು ಮತ್ತು ಆನಂದ ಭಾಷ್ಪ ಸುರಿಸಿದರು.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಚಂದ್ರಕಲಾ ಮೋಹನ್​? ಎಲಿಮಿನೇಷನ್​ಗೆ ಆ ಒಂದು ವರ್ತನೆಯೇ ಕಾರಣ