AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss: ಇದೊಂದು ನಡೆಸಿಕೊಡಿ; ಮಂಜು ಬಳಿ ಹೊಸ ಬೇಡಿಕೆ ಇಟ್ಟ ಕಿಚ್ಚ ಸುದೀಪ್​!

ಮಂಜು ಬಳಿ ಕಿಚ್ಚ ಸುದೀಪ್​ ಹೊಸ ಬೇಡಿಕೆ ಇಟ್ಟಿದ್ದಾರೆ. ವೀಕೆಂಡ್​ನಲ್ಲಿ ಮನೆ ಸದಸ್ಯರ ಜತೆ ಮಾತನಾಡುವಾಗ ಈ ಬೇಡಿಕೆ ಬಗ್ಗೆ ಹೇಳಿದ್ದಾರೆ. ಅಷ್ಟಕ್ಕೂ ಸುದೀಪ್​ ಹೇಳಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

Bigg Boss: ಇದೊಂದು ನಡೆಸಿಕೊಡಿ; ಮಂಜು ಬಳಿ ಹೊಸ ಬೇಡಿಕೆ ಇಟ್ಟ ಕಿಚ್ಚ ಸುದೀಪ್​!
ಬಿಗ್ ಬಾಸ್ ಕನ್ನಡ ಸೀಸನ್​ 8
ರಾಜೇಶ್ ದುಗ್ಗುಮನೆ
| Edited By: |

Updated on: Mar 28, 2021 | 7:18 AM

Share

ಬಿಗ್​ ಬಾಸ್​ ಮನೆಯ ಸದಸ್ಯರು ಕಿಚ್ಚ ಸುದೀಪ್​ ಬಳಿ ಮತ್ತು ಬಿಗ್​ ಬಾಸ್​ ಬಳಿ ಹೊಸ ಬೇಡಿಕೆ ಇಡೋದು ಕಾಮನ್​. ಇದು ತುಂಬಾ ಮೊದಲಿನಿಂದ ನಡೆದುಕೊಂಡು ಬಂದಿದೆ. ಅಚ್ಚರಿ ಎಂದರೆ, ಈಗ ಸುದೀಪ್​ ಅವರೇ ಮಂಜು ಬಳಿ ಹೊಸ ಬೇಡಿಕೆ ಇಟ್ಟಿದ್ದಾರೆ. ವೀಕೆಂಡ್​ನಲ್ಲಿ ಮನೆಯ ಸದಸ್ಯರ ಜತೆ ಮಾತನಾಡುವಾಗ ಈ ಬೇಡಿಕೆ ಬಗ್ಗೆ ಹೇಳಿದ್ದಾರೆ. ಅಷ್ಟಕ್ಕೂ ಸುದೀಪ್​ ಹೇಳಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಸೀಸನ್​ 8ರ ವೇದಿಕೆ ಏರಿದಾಗ ಅವರ ಕೂದಲನ್ನು ನೋಡಿ ಕಿಚ್ಚ ಸುದೀಪ್​ ಅಚ್ಚರಿ ವ್ಯಕ್ತಪಡಿಸಿದ್ದರು. ಬಿಗ್​ ಬಾಸ್​ ಮನೆ ಸೇರಿದ ನಂತರವೂ ಶಮಂತ್​ ತಮ್ಮ ಕೂದಲು ಹಾಗೂ ಗಡ್ಡದ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಇನ್ನು ಶಮಂತ್​ಗೆ ಕೂಡ ಕೂದಲು ಎಂದರೆ ತುಂಬಾನೇ ಪ್ರೀತಿ ಎಂದಿದ್ದರು. ಅಷ್ಟೇ ಅಲ್ಲ, ನಾನು ಅಧಿಕವಾಗಿ ಪ್ರೀತಿಸೋ ಕೂದಲನ್ನು ನಿನಗೆ ಕೊಡ್ತಾ ಇದಿನೀ ಎಂದು ಮಂಜುಗೆ ಹೇಳಿದ್ದರು. ಅಂತೆಯೇ, ಮಂಜು ಅದ್ಭುತವಾಗಿ ಶಮಂತ್​ ಕೂದಲನ್ನು ಕಟ್​ ಮಾಡಿದ್ದರು.

ಈ ವಿಚಾರ ವಾರಾಂತ್ಯದಲ್ಲಿ ಚರ್ಚೆಗೆ ಬಂದಿದೆ. ಶಮಂತ್​ ಬಳಿ ಸುದೀಪ್​, ಕೂದಲು ಕಟ್​ ಮಾಡಿದ್ದು ಹೇಗನ್ನಿಸಿತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, ಅದ್ಭುತವಾಗಿತ್ತು. ನಿಜಕ್ಕೂ ಮಂಜು ಅದ್ಭುತವಾಗಿ ಕಟ್​ ಮಾಡಿದ್ದಾರೆ ಎಂದು ಹೇಳಿದ್ದರು. ಆಗ ಮಂಜುಗೆ ಸುದೀಪ್ ಹೊಸ ಮನವಿ ಇಟ್ಟಿದ್ದಾರೆ.

ಮಂಜು ಈ ಬಾರಿ ಅದ್ಭುತವಾಗಿ ಕೂದಲು ಕತ್ತರಿಸಿದ್ದೀರಾ. ಇದರಿಂದ ಒಂದಷ್ಟು ಮಂದಿಗೆ ನಿಮ್ಮ ಮೇಲೆ ಭರವಸೆ ಬಂದಿದೆ ಎಂದು ಭಾವಿಸುತ್ತೇನೆ ಎಂದು ಶ್ಲಾಘಿಸಿದರು. ಜತೆಗೆ, ರಾಜೀವ್​ ಕೂದಲಿಗೆ ಕತ್ತರಿ ಹಾಕಿ, ಅವರಿಗೆ ಬೇರೆಯದೇ ಲುಕ್​ ಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಮಂಜು ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇನಾ?

ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​