Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​! ಆದರೆ

Bigg Boss Kannada Updates (Day 5) : ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಆರಂಭವಾಗಿ ಈಗತಾನೆ ಒಂದು ವಾರ ಕಳೆಯುತ್ತಿದೆ. ಅಷ್ಟರಲ್ಲಾಗಲೇ ವಿನ್ನರ್​ ಆಗುವವರು ಯಾರು ಎಂದು ಶಂಕರ್ ಅಶ್ವತ್ಥ್​ ಭವಿಷ್ಯ ನುಡಿದಿದ್ದಾರೆ.

Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​!  ಆದರೆ
ಮಂಜು ಪಾವಗಡ ಮತ್ತು ಶಂಕರ್​ ಅಶ್ವತ್ಥ್​
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Mar 06, 2021 | 12:45 PM

ಬಿಗ್​ ಬಾಸ್​ ಆಟದ ಲೆಕ್ಕಾಚಾರವೇ ಬೇರೆ. ಪ್ರೇಕ್ಷಕರು ನಿರೀಕ್ಷೆಯೇ ಮಾಡಿರದ ಸ್ಪರ್ಧಿ ಏಕಾಏಕಿ ಹೈಲೈಟ್ ಆಗಿಬಿಡಬಹುದು. ಸದ್ಯ ಈ ಹೊಸ ಸೀಸನ್​ನಲ್ಲಿ ಅದೇ ರೀತಿ ಆಗುತ್ತಿದೆ. ಹಾಸ್ಯ ಕಲಾವಿದ ಮಂಜು ಪಾವಗಡ ಸಿಕ್ಕಾಪಟ್ಟೆ ಹೈಪ್​ ಪಡೆದುಕೊಳ್ಳುತ್ತಿದ್ದಾರೆ. ಹಲವು ಕಾರಣಗಳಿಗಾಗಿ ಅವರನ್ನು ಜನರು ಇಷ್ಟ ಪಡುತ್ತಿದ್ದಾರೆ. ಮನೆಯೊಳಗಿನ ಸದಸ್ಯರಿಗೂ ಅದೇ ಭಾವನೆ ವ್ಯಕ್ತವಾಗುತ್ತಿದೆ. ಎಷ್ಟರಮಟ್ಟಿಗೆಂದರೆ ಈ ಬಾರಿ ಬಿಗ್​ ಬಾಸ್​ ಗೆಲ್ಲುವುದು ಮಂಜು ಪಾವಗಡೆ ಅವರೇ ಎಂದು ಹಿರಿಯ ನಟ ಶಂಕರ್​ ಅಶ್ವತ್ಥ್​ ಭವಿಷ್ಯ ನುಡಿದಿದ್ದಾರೆ!

ಬಿಗ್​ ಬಾಸ್​ನಲ್ಲಿ 5ನೇ ದಿನ ಎಲ್ಲರೂ ತಮಗೆ ಇಷ್ಟ ಆಗುವ ಮತ್ತು ಇಷ್ಟ ಆಗದ ಸದಸ್ಯರ ಹೆಸರು ಹೇಳಿ, ಅವರಿಗೆ ಲೈಕ್​ ಹಾಗೂ ಡಿಸ್ಲೈಕ್​ ಬ್ಯಾಡ್ಜ್​ ನೀಡಬೇಕು ಎಂದು ಬಿಗ್​ ಬಾಸ್​ ಆದೇಶಿಸಿದರು. ಆ ಸಂದರ್ಭದಲ್ಲಿ ಮಂಜು ಪಾವಗಡ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ಈ ಮನೆಯಲ್ಲಿ ಎಲ್ಲರೂ ಅವರನ್ನೇ ಇಷ್ಟಪಡುತ್ತಾರೆ. ಪ್ರಾಯಶಃ ಅವರೇ ವಿನ್​ ಆಗುತ್ತಾರೆ ಎಂದು ನನ್ನ ಮನಸ್ಸು ಹೇಳುತ್ತಿದೆ. ಇಲ್ಲಿ ಹೆಚ್ಚು ಜನರು ಅದನ್ನೇ ಒಪ್ಪಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ಶಂಕರ್​. ಹಾಗಂತ ಮಂಜುಗೆ ಅವರು ಲೈಕ್​ ಬ್ಯಾಡ್ಜ್​ ನೀಡಿಲ್ಲ. ಬದಲಿಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದಾರೆ!

ಮಂಜು ವಿನ್​ ಆಗುತ್ತಾರೆ ಎಂದು ಭರವಸೆ ಮೂಡುವ ಮಟ್ಟಕ್ಕೆ ಅವರು ಎಲ್ಲರಿಗೂ ಇಷ್ಟವಾಗಿದ್ದಾರೆ. ಆದರೂ ಕೂಡ ಶಂಕರ್​ ಅಶ್ವತ್ಥ್​ ಅವರು ಮಂಜುಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದಕ್ಕೆ ಒಂದು ಬಲವಾದ ಕಾರಣ ಇದೆ. ಅದು ಕೂಡ ತುಂಬ ಫನ್ನಿ. ’ಯಾರಿಗೂ ಗೊತ್ತಿರದ ವಿಷಯದಲ್ಲಿ ಒಂದು ತೊಂದರೆ ಆಗಿದೆ. ಅದನ್ನು ಹೇಳುತ್ತೇನೆ. ಮಂಜು ರಾತ್ರಿ ಹೊತ್ತು ಒಳ್ಳೇ ಮೋಟಾರ್​ ಬೋಟ್​. ಅಷ್ಟು ಗೊರಕೆ ಹೊಡೆಯುತ್ತಾರೆ. ಅದಕ್ಕಾಗಿ ನಾನು ಅವರಿಗೆ ಡಿಸ್ಲೈಕ್​ ನೀಡುತ್ತೇನೆ’ ಎಂದು ಶಂಕರ್​ ಅಶ್ವತ್ಥ್​ ಹೇಳಿದ್ದಾರೆ.

ತಮ್ಮನ್ನು ಎಲ್ಲರೂ ಇಷ್ಟಪಡುತ್ತಿರುವುದಕ್ಕೆ ಮಂಜು ಸಂತಸ ವ್ಯಕ್ತಪಡಿಸಿದ್ದಾರೆ. ‘ಬಹಳ ಖುಷಿ ಆಗುತ್ತದೆ. ನನ್ನ ಕಲ್ಪನೆಯಲ್ಲಿ ಬಿಗ್​ ಬಾಸ್​ ಎಂದರೆ ಹೊಡೆದಾಟ, ಜಗಳ ಎಂದುಕೊಂಡಿದ್ದೆ. ನಾನು ಟಿವಿಯಲ್ಲಿ ನೋಡಿದ್ದು ಹಾಗೆಯೇ. ನನಗೆ ಈ ಬಾರಿ ಆಫರ್​ ಬಂದಾಗ ಅಯ್ಯಯ್ಯೋ ಎನಿಸಿತ್ತು. ಒಳಗಡಗೆ ಬಂದಾಗ ಎಲ್ಲರೂ ಅವರವರ ಪಾಡಿಗೆ ಊಟ ಮಾಡುತ್ತಿದ್ದರು. ಅಲ್ಲಿಂದಲೇ ಜಳಗ ಶುರು ಅಂದುಕೊಂಡಿದ್ದೆ. ಆದರೆ ಇಷ್ಟು ಬೇಗ ಹೊಂದಾಣಿಕೆಯೊಂದಿಗೆ ಎಲ್ಲರೂ ಖುಷಿಖುಷಿಯಾಗಿ ಇದ್ದೇವೆ’ ಎಂದಿದ್ದಾರೆ ಮಂಜು.

ಇದನ್ನೂ ಓದಿ: Bigg Boss Kannada: ಮಂಜು ಕಂಡರೆ ದಿವ್ಯಾಗೆ ಯಾಕಿಷ್ಟು ಲವ್​? ಬಯಲಾಯ್ತು ಅಸಲಿ ವಿಷಯ!

Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ