ಬಿಗ್​ ಬಾಸ್​ 2ನೇ ಇನ್ನಿಂಗ್ಸ್​ ಮೊದಲ ವಾರವೇ ಯಾರ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ?

Bigg Boss Elimination: ಬಿಗ್​ ಬಾಸ್​ ಮನೆಯಲ್ಲಿ ಬಹುತೇಕರು ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಸುದೀಪ್​ ಅವರು ಬಹುದಿನಗಳ ಬಳಿಕ ಪಂಚಾಯಿತಿ ಮಾಡಲು ಬರುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಬಿಗ್​ ಬಾಸ್​ 2ನೇ ಇನ್ನಿಂಗ್ಸ್​ ಮೊದಲ ವಾರವೇ ಯಾರ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ?
ಬಿಗ್​ ಬಾಸ್​ ಕನ್ನಡ ಸೀಸನ್​ 8

Updated on: Jun 26, 2021 | 9:06 AM

ಎಲ್ಲರ ನಿರೀಕ್ಷೆಯನ್ನೂ ಮೀರಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರ ಎರಡನೇ ಇನ್ನಿಂಗ್ಸ್​ ಶುರು ಆಯಿತು. ಇಷ್ಟು ವರ್ಷಗಳ ಬಿಗ್​ ಬಾಸ್​ ಇತಿಹಾಸದಲ್ಲಿ ಈ ರೀತಿ ಆಗಿದ್ದು ಇದೇ ಮೊದಲು. 12 ಸ್ಪರ್ಧಿಗಳಿಗೆ ಮತ್ತೊಮ್ಮೆ ದೊಡ್ಮನೆ ಪ್ರವೇಶಿಸುವ ಅವಕಾಶ ಸಿಕ್ಕಿದೆ. ಇದಕ್ಕೆ ಎರಡನೇ ಇನ್ನಿಂಗ್ಸ್​ ಎಂದು ಕರೆಯಲಾಗಿದ್ದರೂ, ಶುರುವಿನಲ್ಲೇ ಪೈಪೋಟಿ ಜೋರಾಗಿದೆ. ಈಗ ನೋಡನೋಡುತ್ತಿದ್ದಂತೆಯೇ ಎಲಿಮಿನೇಷನ್​ ಸಮಯ ಬಂದೇ ಬಿಟ್ಟಿದೆ. ಈ ವಾರ ನಾಮಿನೇಟ್​ ಆದವರ ಎದೆಯಲ್ಲಿ ಢವಢವ ಶುರು ಆಗಿದೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರಲ್ಲಿ ಸದ್ಯ 12 ಜನರು ಸ್ಪರ್ಧಿಸುತ್ತಿದ್ದಾರೆ. ಒಂದು ದೀರ್ಘ ಗ್ಯಾಪ್​ನಲ್ಲಿ ಎಲ್ಲ ಎಪಿಸೋಡ್​ಗಳನ್ನು ನೋಡಿಕೊಂಡು, ಎಲ್ಲರ ಬಗ್ಗೆ ಇರುವ ಅಭಿಪ್ರಾಯನ್ನು ತಿಳಿದುಕೊಂಡು ದೊಡ್ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳು ನಿಷ್ಠುರವಾಗಿಯೇ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ರಘು ಗೌಡ, ಮಂಜು ಪಾವಗಡ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರು ಈ ವಾರ ನಾಮಿನೇಟ್​ ಆಗಿದ್ದಾರೆ.

ಈ 7 ಜನರ ಪೈಕಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಇಂದು (ಜೂ.26) ಸಂಜೆ 9 ಗಂಟೆಗೆ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ ಪ್ರಸಾರ ಆಗಲಿದೆ. ಸುದೀಪ್​ ಅವರು ಬಹುದಿನಗಳ ಬಳಿಕ ಪಂಚಾಯಿತಿ ಮಾಡಲು ಬರುತ್ತಿರುವುದರಿಂದ ಆ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಬಹುತೇಕರು ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಸದಾ ಕಾಲ ದಿವ್ಯಾ ಸುರೇಶ್​ ಅವರ ಹಿಂದೆ ಸುತ್ತುತ್ತಿದ್ದ ಮಂಜು ಪಾವಗಡ ಈಗ ಆಟದ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಬರುವುದರಿಂದ ಟ್ರೋಫಿ ಗೆಲ್ಲುವತ್ತ ಎಲ್ಲರೂ ಗುರಿ ಇರಿಸಿಕೊಂಡಿದ್ದಾರೆ.

ಇದನ್ನೂ ಓದಿ:

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us