Bigg Boss Kannada: ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿದ್ದು ಹೇಗೆ? ಹೊತ್ತಿಕೊಂಡಿದೆ ಅಸಮಾಧಾನದ ಬೆಂಕಿ!

ಮೊದಲ ವಾರ ಕ್ಯಾಪ್ಟನ್​ ಆಗಿದ್ದ ಶಮಂತ್​ ಗೌಡ ಅವರಿಗೆ ಎರಡನೇ ವಾರವೂ ಬಂಪರ್​ ಚಾನ್ಸ್​ ಸಿಕ್ಕಿದೆ. ಆದರೆ ಇದರಿಂದ ಮನೆಯಲ್ಲಿ ಕೆಲವು ಸದಸ್ಯರ ಮುಖ ಕೆಂಪಾಗಿದೆ.

Bigg Boss Kannada: ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿದ್ದು ಹೇಗೆ? ಹೊತ್ತಿಕೊಂಡಿದೆ ಅಸಮಾಧಾನದ ಬೆಂಕಿ!
ಶಮಂತ್​ ಬ್ರೋ ಗೌಡ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 05, 2021 | 7:37 PM

ವೀಕೆಂಡ್​ ಹತ್ತಿರ ಆಗುತ್ತಿದ್ದಂತೆಯೇ ಬಿಗ್​ ಬಾಸ್​ ಸ್ಪರ್ಧಿಗಳ ಎದೆಯೊಳಗೆ ಢವಢವ ಶುರು ಆಗುತ್ತದೆ. ಆದರೆ ಕ್ಯಾಪ್ಟನ್​ ಆದವರಿಗೆ ಎಲಿಮಿನೇಷನ್​ ಭೀತಿ ಇರುವುದಿಲ್ಲ. ಹಾಗಾಗಿ ಕ್ಯಾಪ್ಟನ್​ ಸ್ಥಾನಕ್ಕಾಗಿ ಎಲ್ಲರೂ ಪೈಪೋಟಿ ನಡೆಸುತ್ತಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಶಮಂತ್​ ಬ್ರೋ ಗೌಡ ಅವರಿಗೆ ಎರಡನೇ ವಾರ ಕೂಡ ಕ್ಯಾಪ್ಟನ್​ ಆಗುವ ಅವಕಾಶ ಸಿಕ್ಕಿದೆ. ಇದರಿಂದ ಮನೆಯೊಳಗಿನ ವಾತಾವರಣ ಕೂಡ ಸ್ವಲ್ಪ ಬ್ಯಾನೆಲ್ಸ್​ ತಪ್ಪಿದೆ!

ಮೊದಲ ವೀಕೆಂಡ್​ ಹತ್ತಿರ ಆಗುತ್ತಿದ್ದಂತೆಯೇ ಎಲ್ಲ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಆಯ್ಕೆ ನೀಡಿದರು. ಎರಡನೇ ವಾರವೂ ಶಮಂತ್​ ಕ್ಯಾಪ್ಟನ್​ ಆಗಿ ಮುಂದುವರಿಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ವೋಟಿಂಗ್​ ಮಾಡಿಸಲಾಯಿತು. ಮೊದಲಿಗೆ 8 ಜನ ‘ಬೇಡ’ ಎಂದು, ಇನ್ನುಳಿದ 8 ಜನರು ‘ಬೇಕು’ ಎಂದು ವೋಟ್​ ಮಾಡಿದರು. ಸರಿಯಾಗಿ ಇನ್ನೊಮ್ಮೆ ಯೋಚಿಸಿನೋಡಿ ಎಂದು ಬಿಗ್ ಬಾಸ್​ ಹೇಳಿದಾಗ ನಿರ್ಮಲಾ ಚೆನ್ನಪ್ಪ ಮನಸ್ಸು ಬದಲಾಯಿಸಿ ‘ಬೇಕು’ ಎಂದು ವೋಟ್​ ಮಾಡಿದರು. ಹಾಗಾಗಿ ಎರಡನೇ ವಾರವೂ ಕ್ಯಾಪ್ಟನ್​ ಆಗುವ ಅವಕಾಶ ಶಮಂತ್​ಗೆ ಸಿಕ್ಕಿದೆ.

ಎರಡನೇ ವಾರ ಶಮಂತ್​ ಕ್ಯಾಪ್ಟನ್​ ಆಗಿ ಮುಂದುವರಿಯುವುದು ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ರಘು, ವಿಶ್ವನಾಥ್​, ಶುಭಾಪೂಂಜಾ, ರಾಜೀವ್​, ದಿವ್ಯಾ ಉರುಡುಗ ಮುಂತಾದವರಿಗೆ ಕಿಂಚಿತ್ತೂ ಇಷ್ಟ ಇರಲಿಲ್ಲ. ಎಲ್ಲರಿಗೂ ಕ್ಯಾಪ್ಟನ್​ ಆಗುವ ಅವಕಾಶ ಸಿಗಬೇಕು ಎಂಬುದು ಇವರೆಲ್ಲರ ಆಶಯ ಆಗಿತ್ತು. ಆದರೆ ಅಂತಿಮವಾಗಿ ಹೆಚ್ಚು ವೋಟ್​ಗಳು ಶಮಂತ್​ ಪರವಾಗಿ ಬಂದಿದ್ದರಿಂದ ಅವರೇ ಕ್ಯಾಪ್ಟನ್​ ಆದರು.

ಮನೆಯೊಳಗಿನ ಕೆಲಸವನ್ನು ಶಮಂತ್​ ಸರಿಯಾಗಿ ಎಲ್ಲರಿಗೂ ಹಂಚಿಲ್ಲ. ಅವರಿಗೆ ಹೆಚ್ಚು ತಿಳುವಳಿಕೆ ಇಲ್ಲ ಎಂದು ಸಂಬರಗಿ ಆರೋಪಿಸಿದ್ದಾರೆ. ಅನೇಕ ಟೀಕೆಗಳನ್ನು ಶಮಂತ್​ ಎದುರಿಸಬೇಕಾಗಿದೆ. ಅದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಎರಡನೇ ವಾರ ಅವರು ಯಾವ ರೀತಿ ತಂತ್ರ ಮಾಡುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ. ಎಲಿಮಿನೇಷನ್​ಗೆ ನಾಮಿನೇಟ್​ ಆಗಿರುವ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ವಿಶ್ವನಾಥ್​, ಧನುಶ್ರೀ ಪೈಕಿ ಯಾರು ಮೊದಲ ವಾರ ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ವೀಕೆಂಡ್​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​

Bigg Boss Kannada Day 1: ಬ್ರೋ ಗೌಡಗೆ ದಿವ್ಯಾ ಸುರೇಶ್ ಮೇಲೆ ಪ್ರೀತಿ?; ಬಿಗ್​ ಬಾಸ್​ ಮನೆಯಲ್ಲಿ ತ್ರಿಕೋನ ಪ್ರೇಮ ಕಥೆ!

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ