ಲ್ಯಾಗ್ ಮಂಜು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ವಿನ್ನರ್ ಆಗುವುದು ಖಚಿತ ಎಂದು ಇಷ್ಟು ದಿನ ಅನೇಕರು ಹೇಳುತ್ತಿದ್ದರು. ಮನೆಯೊಳಗಿನ ಸ್ಪರ್ಧಿಗಳು ಕೂಡ ಇದನ್ನು ಒಪ್ಪಿಕೊಂಡಿದ್ದರು. ಆದರೆ ಒಂದೇ ದಿನದಲ್ಲಿ ಈ ಇಮೇಜ್ ಬದಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಮಂಜು ಯಾರಿಗೂ ಬೇಡವಾದ ವ್ಯಕ್ತಿ ಆಗುತ್ತಿದ್ದಾರೆ. ಅವರ ಮಾತುಗಳೇ ಈಗ ಅವರಿಗೆ ಮುಳುವಾಗುತ್ತಿದೆ. ಹಾಗಾಗಿ ಅವರ ಭವಿಷ್ಯ ಅತಂತ್ರವಾಗಿದೆ.
ಬಿಗ್ ಬಾಸ್ನಲ್ಲಿ ಮಂಜು ಪ್ರಬಲ ಸ್ಪರ್ಧಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಈಗ ಮನೆಯ ಸದಸ್ಯರು ಅವರ ವ್ಯಕ್ತಿತ್ವವನ್ನು ದ್ವೇಷಿಸಲು ಶುರುಮಾಡಿದ್ದಾರೆ ಎನಿಸುತ್ತಿದೆ. ಇದಕ್ಕೆ ಸಾಕ್ಷಿ ನೀಡುವಂತಹ ಒಂದು ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಮಂಜು ಪಾವಗಡ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ವೈಷ್ಣವಿ, ಶಮಂತ್ ಮುಂತಾದವರು ನೇರವಾಗಿ ಹೇಳಿರುವುದು ಈ ಪ್ರೋಮೋ ಮೂಲಕ ಗೊತ್ತಾಗಿದೆ.
‘ಮಂಜು ಮಾತಾಡೋಕೆ ಶುರು ಮಾಡಿದರೆ ಬೇರೆಯವರು ದೂರ ಹೊರಟುಹೋಗುತ್ತಾರೆ’ ಎಂದು ವೈಷ್ಣವಿ ನೇರವಾಗಿ ಹೇಳಿದ್ದಾರೆ. ‘ಮಂಜು ಮಾತಿನ ವಾಲ್ಯೂಮ್ ಕಮ್ಮಿ ಮಾಡಿಕೊಂಡರೆ ಒಳ್ಳೆಯದು ಅನಿಸುತ್ತೆ’ ಎಂದು ಶಮಂತ್ ಹೇಳಿದ್ದಾರೆ. ‘ಮಂಜು ಮಾತು ನನಗೆ ತುಂಬ ಇಷ್ಟ. ಆದರೆ ಒಮ್ಮೊಮ್ಮೆ ನನಗೆ ತಲೆನೋವು ಆಗುತ್ತದೆ’ ಎಂದು ನಿಧಿ ನಗುತ್ತಲೇ ತಿವಿದಿದ್ದಾರೆ. ಮನೆಯವರ ಈ ಮಾತುಗಳನ್ನು ಕೇಳಿ ಮಂಜು ಕಣ್ಣೀರು ಹಾಕಿದ್ದಾರೆ. ಅವರ ಜನಪ್ರಿಯತೆ ಈಗ ಕಮ್ಮಿ ಆಗಿದೆ.
ಅಷ್ಟಕ್ಕೂ ಏಕಾಏಕಿ ಮಂಜುಗೆ ಈ ಗತಿ ಯಾಕೆ ಬಂತು? ಅದಕ್ಕೆ ಕಾರಣ ಪ್ರಶಾಂತ್ ಸಂಬರಗಿ! ಹೌದು, ಚದುರಂಗದ ಟಾಸ್ಕ್ನಲ್ಲಿ ಮಂಜು ಮತ್ತು ಪ್ರಶಾಂತ್ ನಡುವೆ ಜಗಳ ಆಗಿತ್ತು. ಆಗಿನಿಂದಲೇ ಮಂಜು ವಿರುದ್ಧ ಪ್ರಶಾಂತ್ ಕತ್ತಿ ಮಸೆಯಲು ಆರಂಭಿಸಿದ್ದಾರೆ. ಎಲ್ಲರ ಬಳಿಗೂ ಹೋಗಿ ಮಂಜು ಬಗ್ಗೆ ಚಾಡಿ ಹೇಳಿದ್ದಾರೆ. ‘ಅವರ ಜನಪ್ರಿಯತೆಗಾಗಿ ನಿನ್ನನ್ನು ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅಂತ ನನಗೆ ಅನಿಸುತ್ತದೆ’ ಎಂದು ಮಂಜುವಿನ ಕುರಿತು ದಿವ್ಯಾ ಸುರೇಶ್ ಕಿವಿಯಲ್ಲಿ ಪ್ರಶಾಂತ್ ಗೊಣಗಿದ್ದಾರೆ. ‘ನನಗೂ ಹಾಗೇ ಅನಿಸುತ್ತಿದೆ’ ಎಂದು ದಿವ್ಯಾ ಸುರೇಶ್ ಒಪ್ಪಿಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರಶಾಂತ್ ಸಂಬರಗಿ ಮನೆಯವರ ಮೈಂಡ್ ವಾಶ್ ಮಾಡಿರುವುದು ವರ್ಕೌಟ್ ಆಗಿದೆ. ಎಲ್ಲರೂ ಈಗ ಮಂಜನ ಮೈನಸ್ ಪಾಯಿಂಟ್ ಗುರುತಿಸಿ ಹೇಳುತ್ತಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಮಂಜು ಹವಾ ಕಮ್ಮಿ ಆಗಲಿದೆ. ಪ್ರಶಾಂತ್ ಸಂಬರಗಿ ಇನ್ನೂ ಬಲವಾಗಿ ಸ್ಟ್ರಾಟಜಿ ಮಾಡಿದರೆ ಮಂಜು ಭವಿಷ್ಯಕ್ಕೆ ತೊಂದರೆ ಆಗಬಹುದು. ಎಲಿಮಿನೇಷನ್ ಹಂತಕ್ಕೂ ತಲುಪಬಹುದು. ಆದರೆ ವೀಕ್ಷಕರಿಗೆ ಮಂಜು ಇಷ್ಟವಾಗುತ್ತಿದ್ದಾರೆ. ಎಲ್ಲಿಯವರೆಗೂ ಮಂಜು ಪರವಾಗಿ ಹೆಚ್ಚು ವೋಟ್ ಬರುತ್ತೋ ಅಲ್ಲಿಯವರೆಗೂ ಅವರು ಸೇಫ್ ಆಗಿರುತ್ತಾರೆ.
ಇದನ್ನೂ ಓದಿ: BBK8: ಬಿಗ್ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!
ಬಿಗ್ ಬಾಸ್ ಮನೆಗೆ ದೆವ್ವದ ಕಾಟ? ರಾಜೀವ್ ಬಿಚ್ಚಿಟ್ರು ಭಯಾನಕ ಅನುಭವ