AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಮಂಜುಗೆ ಮಣ್ಣು ಮುಕ್ಕಿಸಿದ ಹೆಣ್ಮಕ್ಕಳು! ಇದು ಯಾರೂ ನಿರೀಕ್ಷಿಸದ ಹೀನಾಯ ಸೋಲು

ಇಷ್ಟು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಸೋಲಿಲ್ಲದ ಸರದಾರನಂತೆ ಓಡಾಡಿಕೊಂಡಿದ್ದ ಲ್ಯಾಗ್ ಮಂಜು ಈಗ ಹೆಣ್ಣುಮಕ್ಕಳ ಎದುರ ಹೀನಾಯವಾಗಿ ಸೋತಿದ್ದಾರೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ.

BBK8: ಮಂಜುಗೆ ಮಣ್ಣು ಮುಕ್ಕಿಸಿದ ಹೆಣ್ಮಕ್ಕಳು! ಇದು ಯಾರೂ ನಿರೀಕ್ಷಿಸದ ಹೀನಾಯ ಸೋಲು
ಬಿಗ್​ ಬಾಸ್​ ಕನ್ನಡ ಸೀಸನ್​ 8
ಮದನ್​ ಕುಮಾರ್​
|

Updated on: Mar 16, 2021 | 12:22 PM

Share

ದಿನದಿಂದ ದಿನಕ್ಕೆ ಬಿಗ್​ ಬಾಸ್​ ಮನೆಯೊಳಗಿನ ಆಟ ರಂಗೇರುತ್ತಿದೆ. ಸಿಕ್ಕಾಪಟ್ಟೆ ಟ್ವಿಸ್ಟ್​ ಇರುವಂತಹ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಪ್ರೇಕ್ಷಕರ ಮನ ಗೆಲ್ಲಲು ಎಲ್ಲರೂ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ ಟಾಸ್ಕ್​ನಲ್ಲಿ ಮುನ್ನಡೆ ಸಾಧಿಸುತ್ತ, ಎಲ್ಲರನ್ನೂ ನಗಿಸುತ್ತ ಮೆಚ್ಚುಗೆ ಗಳಿಸಿಕೊಂಡಿದ್ದ ಲ್ಯಾಗ್​ ಮಂಜು ಅಲಿಯಾಸ್​ ಮಂಜು ಪಾವಗಡ ಅವರಿಗೆ ಒಂದು ಟಾಸ್ಕ್​ನಲ್ಲಿ ತೀವ್ರ ಹಿನ್ನಡೆ ಆಗಿದೆ. ಹೆಣ್ಣುಮಕ್ಕಳ ಎದುರು ಮಂಜು ಸೋತಿದ್ದಾರೆ.

7 ಹೆಂಗಸರು ಹಾಗೂ 7 ಗಂಡಸರನ್ನು ಒಳಗೊಂಡ ಎರಡು ಟೀಮ್​ ಮಾಡಲಾಯಿತು. ಹೆಣ್ಣುಮಕ್ಕಳಲ್ಲಿ ಯಾರಾದರೂ ನಾಲ್ಕು ಜನರನ್ನು ಟಾರ್ಗೆಟ್​ ಮಾಡಿ, ಅವರನ್ನು ಅಳಿಸಬೇಕು ಅಥವಾ ನಗಿಸಬೇಕು ಎಂದು ಗಂಡುಮಕ್ಕಳಿಗೆ ಬಿಗ್​ ಬಾಸ್​ ಟಾಸ್ಕ್​ ನೀಡಿದರು. ಈ ಟಾಸ್ಕ್​ನಲ್ಲಿ ಗೆದ್ದವರಿಗೆ ಪಿಜ್ಜಾ ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಿದ ಬಳಿಕ ಎಲ್ಲರ ಉತ್ಸಾಹ ತೀವ್ರವಾಯಿತು.

ಕಾಮಿಡಿ ಮಾಡುವುದರಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಮಂಜು, ಈ ಆಟದಲ್ಲಿ ಹೆಣ್ಮಕ್ಕಳನ್ನು ನಗಿಸಿ, ತಮ್ಮ ತಂಡವನ್ನು ತುಂಬ ಸುಲಭವಾಗಿ ಗೆಲ್ಲಿಸುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಇಷ್ಟು ದಿನಗಳ ಕಾಲ ಮಂಜನ ಮಾತಿಗೆ ಬಿದ್ದು ಬಿದ್ದು ನಗುತ್ತಿದ್ದ ಹೆಣ್ಮಕ್ಕಳು ಟಾಸ್ಕ್​ ವಿಚಾರ ಬಂದಾಗ ಕಿಂಚಿತ್ತೂ ನಗಲೇ ಇಲ್ಲ! ಮಾತು ಮಾತಿಗೂ ನಕ್ಕು ನಲಿಯುತ್ತಿದ್ದ ಶುಭಾ ಪೂಂಜಾ ಕೂಡ ಸ್ವಲ್ಪವೂ ನಗಲಿಲ್ಲ. ತಮ್ಮೆಲ್ಲ ಪ್ರತಿಭೆಯನ್ನು ಬಳಸಿದರೂ ಮಂಜು ಯಶಸ್ವಿ ಆಗಲೇ ಇಲ್ಲ.

ಹೆಣ್ಮಕ್ಕಳನ್ನು ನಗಿಸುವುದರಲ್ಲಿ ಮಂಜು ಹೀಗೆ ಹೀನಾಯವಾಗಿ ವಿಫಲರಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಅಂತಿಮವಾಗಿ ಆಟದ ಅವಧಿ ಮುಗಿಯುವವರೆಗೂ ಹೆಣ್ಣುಮಕ್ಕಳ ತಂಡದ ಯಾರೊಬ್ಬರೂ ನಗಲಿಲ್ಲ. ದಿವ್ಯಾ ಉರುಡುಗ ಅವರಂತೂ ಪಿಜಾ ಆಸೆಯಾಗಿ ನಗುವನ್ನು ತಡೆದಿಟ್ಟುಕೊಂಡಿದ್ದ ತುಂಬ ತಮಾಷೆಯಾಗಿತ್ತು. ಕಡೆಗೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ ಎಂಬುದು ಸಾಬೀತಾಯಿತು. ಟಾಸ್ಕ್​ ಗೆದ್ದ ಅವರಿಗೆ ಬಹುಮಾನವಾಗಿ ಪಿಜ್ಜಾ ಕೂಡ ಸಿಕ್ಕಿತು. ಇಂಥ ಹಲವು ಗೇಮ್​ಗಳಿಂದಾಗಿ ಬಿಗ್​ ಬಾಸ್​ ಮನೆಯ ವಾತಾವರಣ ರಂಗೇರಿದೆ.

ಇದನ್ನೂ ಓದಿ: ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!

BBK8: ಈ ಬಾರಿಯ ಬಿಗ್​ ಬಾಸ್​ 9 ಸದಸ್ಯರ ಮೇಲೆ ಎಲಿಮಿನೇಷನ್​ ತೂಗುಗತ್ತಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ