ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss OTT Kannada) ದಿನಕಳೆದಂತೆ ನಾನಾ ತಿರುವು ಪಡೆದುಕೊಳ್ಳಲಾರಂಭಿಸಿದೆ. ಮೊದಲೆರಡು ದಿನ ಅನೋನ್ಯವಾಗಿದ್ದ ಸ್ಪರ್ಧಿಗಳು ಇದೀಗ ನಿಧಾನಕ್ಕೆ ಜಗಳಕ್ಕಿಳಿಯುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸ್ಟಾರ್ ಸೋನು ಗೌಡರ (Sonu Gowda) ಕಿರಿಕ್ ಶುರುವಾಗಿದೆ. ಹೀಗೆ ಸ್ಪೂರ್ತಿ ಗೌಡ ಜೊತೆ ಕಿರಿಕ್ ಮಾಡಿಕೊಂಡು ಕಣ್ಣೀರು ಹಾಕಿಕೊಂಡ ಪ್ರಸಂಗ ಕೂಡ ನಡೆದಿದೆ. ದೊಡ್ಮನೆ ಅಂಗಳದ 4ನೇ ದಿನ ಸ್ಪೂರ್ತಿ ಗೌಡ ಹಾಗೂ ರಾಕೇಶ್ ಅಡಿಗನ ಮಾತುಕತೆಯನ್ನು ಅಪಾರ್ಥ ಮಾಡಿಕೊಂಡ ಸೋನು ಗೌಡ ಕಿರಿಕ್ ತೆಗೆದಿದ್ದರು.
ಸ್ಪೂರ್ತಿ ಜೊತೆ ಮಾತನಾಡಿದ ಸೋನು, ನೀವು ಸುಮ್ಮನೆ ನಗುತ್ತಿರುವುದು ಸರಿಯಿಲ್ಲ. ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ತಕರಾರು ತೆಗೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ಅತ್ತ ಸ್ಪೂರ್ತಿ ಗೌಡ ಕೂಡ ಸೋನುಗೆ ನನ್ನ ವಿಷಯಕ್ಕೆ ಬರದಂತೆ ತಾಕೀತು ಮಾಡಿದರು. ಇದೇ ವೇಳೆ ರಾಕೇಶ್ ಅಡಿಗ ಕೂಡ ಆಗಮಿಸಿದ್ದು, ಸೋನು ಗೌಡರ ಮನವೊಲಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ನಾವು ಯಾರನ್ನೂ ಹೀಯಾಳಿಸಿರಲಿಲ್ಲ. ನಾವಿಬ್ಬರೇ ತಮಾಷೆ ಮಾಡಿಕೊಂಡು ನಕ್ಕಿದ್ದೆವು. ನೀನು ತಪ್ಪು ತಿಳಿದುಕೊಂಡಿದ್ದೀಯಾ ಎಂದು ತಿಳಿಸಿದರು.
ಇದೇ ವೇಳೆ ನಗುವುದು ಬಿಡುವುದು ನನ್ನ ಇಷ್ಟ ಎಂದು ಸ್ಪೂರ್ತಿ ಗೌಡ ಸೋನು ಗೌಡರ ಬೆಂಡೆತ್ತಿದರು. ಈ ವೇಳೆ ಇಬ್ಬರ ನಡುವಣ ಜಗಳ ಕೂಡ ತಾರಕ್ಕೇರಿತ್ತು. ಇದೇ ಸಂದರ್ಭದಲ್ಲಿ ಇತರೆ ಸ್ಪರ್ಧಿಗಳು ಇಬ್ಬರನ್ನು ದೂರ ಮಾಡಿದರು.
ಇತ್ತ ಯಾರು ಕೂಡ ಸಪೋರ್ಟ್ ಮಾಡದ ಕಾರಣ ಬೇಜಾರಿಂದ ಸೋನು ಗೌಡ ಕಣ್ಣೀರು ಹಾಕುತ್ತಾ ಸಾಗಿದರು. ಇದೇ ವೇಳೆ ರಾಕೇಶ್ ಸೋನು ಗೌಡರನ್ನು ಸಾಮಾಧಾನಪಡಿಸಲು ಯತ್ನಿಸಿದರು. ಅಲ್ಲದೆ ಬೆಳಬೆಳ್ಳಿಗ್ಗೆನೇ ಮೂಡ್ ಆಫ್ ಆಗ್ಬೇಡ ಎಂದರು. ಇದೇ ವೇಳೆ ಕೋಪದಿಂದ ಮರುತ್ತರ ನೀಡಿದ ಸೋನು ಗೌಡ, ನಾನು ಯಾವತ್ತೂ ಮೂಡ್ ಆಫ್ ಆಗಲ್ಲ ಎಂದು ಉತ್ತರಿಸಿದರು. ಈ ವೇಳೆ ಕೋಪ ಮಾಡಿಕೊಂಡಿದ್ದೀಯಾ ಎಂದು ರಾಕೇಶ್ ಮತ್ತೊಮ್ಮೆ ಕಾಲೆಳೆಯುವ ಪ್ರಯತ್ನ ಮಾಡಿದರು. ಆದರೆ ಅತ್ತ ಅದಾಗಲೇ ಮುನಿಸಿಕೊಂಡಿದ್ದ ಸೋನು ಗೌಡ, ತಾನು ಒಳ್ಳೆಯ ಮೂಡ್ನಲ್ಲಿದ್ದೀನಿ ಎಂದು ತೋರಿಸಲು ಪ್ರಯತ್ನಿಸಿದರು.
ಒಟ್ಟಿನಲ್ಲಿ ಮೊದಲ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡರ ಹವಾ ಜೋರಾಗಿದ್ದು, ಹಲವು ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಳ್ಳುವ ಮೂಲಕ ಕೆಲ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.