ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ

ಆಮಿರ್ ಖಾನ್ ಮತ್ತು ರಣಬೀರ್ ಕಪೂರ್ ಅವರು ಒಟ್ಟಿಗೆ ಹೊಸ ಪ್ರಾಜೆಕ್ಟ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಆಲಿಯಾ ಭಟ್ ಅವರು ಬಹಿರಂಗಪಡಿಸಿದ್ದಾರೆ. ಇಬ್ಬರೂ ಬಾಲಿವುಡ್ ನಟರ ಈ ಸಹಯೋಗವು ಮಾರ್ಚ್ 12 ರಂದು ಬಹಿರಂಗಗೊಳ್ಳಲಿದೆ. ಈ ಸುದ್ದಿಯು ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ .

ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
ಆಮಿರ್-ರಣಬೀರ್
Updated By: ರಾಜೇಶ್ ದುಗ್ಗುಮನೆ

Updated on: Mar 22, 2025 | 8:05 AM

ಆಮಿರ್ ಖಾನ್ ಹಾಗೂ ರಣಬೀರ್ ಕಪೂರ್ (Ranbir Kapoor) ಬಾಲಿವುಡ್​ನ ಖ್ಯಾತ ಹೀರೋಗಳು. ಇವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಇವರಿಬ್ಬರೂ ಒಂದಾದರೆ? ಹೀಗೊಂದು ಅಪ್​ಡೇಟ್​ನ ಆಲಿಯಾ ಭಟ್ ಅವರು ನೀಡಿದ್ದಾರೆ. ಹಾಗಂತ ಅವರು ಒಂದಾಗುತ್ತಿರುವುದು ಸಿನಿಮಾಗಾಗಿ ಅಲ್ಲ ಎನ್ನಲಾಗುತ್ತಿದೆ. ಜಾಹೀರಾತು ಒಂದರಲ್ಲಿ ಆಮಿರ್ ಹಾಗೂ ರಣಬೀರ್ ಒಟ್ಟಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬುಧವಾರ (ಮಾರ್ಚ್ 12) ಈ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಲಿದೆ.

ಆಮಿರ್ ಖಾನ್ ಅವರು ಬಾಲಿವುಡ್​ನ ಪರ್ಫೆಕ್ಷನಿಸ್ಟ್. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆಮಿರ್ ಖಾನ್ ಅವರಷ್ಟು ಅನುಭವ ಇಲ್ಲದೇ ಇದ್ದರೂ ರಣಬೀರ್ ಅವರು ನಟನೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಇವರು ಒಂದಾಗುತ್ತಿದ್ದಾರೆ ಎಂದು ಆಲಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ ಅವರು ‘ಅತ್ಯುತ್ತಮವಾದ ಹೋರಾಟ. ನನ್ನ ಇಬ್ಬರು ನೆಚ್ಚಿನ ನಟರು ಪರಸ್ಪರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ನಾಳೆ (ಮಾರ್ಚ್ 12) ಹೆಚ್ಚಿನ ಮಾಹಿತಿ ಹೊರ ಬರಲಿದೆ. ನಿಮಗೂ ಅದು ಇಷ್ಟ ಆಗುತ್ತದೆ’ ಎಂದು ಆಲಿಯಾ ಭಟ್ ಅವರು ಕ್ಯಾಪ್ಶನ್ ನೀಡಿದ್ದಾರೆ.

ಇದನ್ನೂ ಓದಿ
ರಮೇಶ್ ಅರವಿಂದ್ ನೇತೃತ್ವದಲ್ಲಿ ಬರುತ್ತಿದೆ ಹೊಸ ಶೋ; ರಿವೀಲ್ ಆಯ್ತು ಮಾಹಿತಿ
NTR​ ಜೊತೆ ಡ್ಯಾನ್ಸ್ ಮಾಡುವಾಗ ಎಡವಿದ ಹೃತಿಕ್ ರೋಷನ್; ಸಂಭವಿಸಿತು ಅವಘಡ
ಸಹನಟನ ಜೊತೆ ಸಿಕ್ಕಿಬಿದ್ದ ಕಿರುತೆರೆ ನಟಿ; 6 ತಿಂಗಳಿಗೆ ಕೊನೆ ಆಯ್ತು ಸಂಸಾರ
ಚಾಂಪಿಯನ್ಸ್ ಆದ ಖುಷಿಯಲ್ಲಿ ಅನುಷ್ಕಾಗೆ ರೋಹಿತ್ ಶರ್ಮಾ ಪ್ರೀತಿಯ ಅಪ್ಪುಗೆ

ಈ ಕ್ಯಾಪ್ಶನ್​ನಲ್ಲಿ ಆಲಿಯಾ ಭಟ್ ಅವರು ಎಕೆ vs ಆರ್​ಕೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, #Ad ಎನ್ನುವ ಹ್ಯಾಶ್​ಟ್ಯಾಗ್​ನೂ ಹಾಕಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರೇಕ್ಷಕರು ಕಾದಿದ್ದಾರೆ. ಇದು ಸಿನಿಮಾ ಆಗಿರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಪ್ಯಾಂಟಿನ ಬೆಲೆ ಲಕ್ಷ ರೂಪಾಯಿಗಳು

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ‘ಬ್ರಹ್ಮಾಸ್ತ್ರ’ ಸಿನಿಮಾ ಈ ಜೋಡಿ ಒಟ್ಟಾಗಿ ನಟಿಸಿದ ಮೊದಲ ಸಿನಮಾ ಆಗಿತ್ತು.  ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲೂ ತೊಡಗಿಕೊಂಡಿದ್ದಾರೆ. ಆಮಿರ್ ಖಾನ್ ಅವರು ‘ಸಿತಾರೆ ಜಮೀನ್​ಪರ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:52 pm, Tue, 11 March 25